ಪ್ಯಾರೀಸ್: ಫ್ರೆಂಚ್ ಓಪನ್ನ 2ನೇ ಸುತ್ತಿನ ಪಂದ್ಯದಲ್ಲಿ ಸ್ಪೇನಿನ ರಾಫೆಲ್ ನಡಾಲ್ ಅಮೆರಿಕಾದ ಮೆಕೆಂಜಿ ಮ್ಯಾಕ್ ಡೊನಾಲ್ಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ರಾಫೆಲ್ ನಡಾಲ್ 6-1, 6-1, 6-3 ಸೆಟ್ಗಳಿಂದ ಮಣಿಸಿದರು. ಮೂರು ಸುತ್ತುಗಳಲ್ಲೂ ಪ್ರಾಬಲ್ಯ ಸಾಧಿಸಿದ ನಡಾಲ್, ರೊನಾಲ್ಡ್ ಗ್ಯಾರೋಸ್ ಮೈದಾನದಲ್ಲಿ ತಮ್ಮ ಗೆಲುವು - ಸೋಲಿನ ದಾಖಲೆಯನ್ನು 95-2ಕ್ಕೆ ಹೆಚ್ಚಿಸಿಕೊಂಡರು. ನಡಾಲ್(12) ಈಗಾಗಲೆ ಅತಿ ಹೆಚ್ಚು ಫ್ರೆಂಚ್ ಓಪನ್ ಗೆದ್ದಿರುವ ದಾಖಲೆ ಹೊಂದಿದ್ದಾರೆ. ಈ ವರ್ಷ 13ಕ್ಕೆ ಏರಿಕೆ ಮಾಡಿಕೊಳ್ಳುವ ಹಂಬಲದಲ್ಲಿರುವ ಅವರು, ಈ ಪ್ರಶಸ್ತಿ ಮೂಲಕ ಅತಿ ಹೆಚ್ಚು ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಗೆದ್ದಿರುವ ರೋಜರ್ ಫೆಡರರ್ (20) ದಾಖಲೆಯನ್ನು ಸರಿಗಟ್ಟಲು ಕಾತುರದಿಂದಿದ್ದಾರೆ.
-
95th RG victory
— Roland-Garros (@rolandgarros) September 30, 2020 " class="align-text-top noRightClick twitterSection" data="
44-0 as No. 2 seed
25th consecutive win in Paris
That’s @RafaelNadal 👏#RolandGarros pic.twitter.com/ZUwm9MdAy5
">95th RG victory
— Roland-Garros (@rolandgarros) September 30, 2020
44-0 as No. 2 seed
25th consecutive win in Paris
That’s @RafaelNadal 👏#RolandGarros pic.twitter.com/ZUwm9MdAy595th RG victory
— Roland-Garros (@rolandgarros) September 30, 2020
44-0 as No. 2 seed
25th consecutive win in Paris
That’s @RafaelNadal 👏#RolandGarros pic.twitter.com/ZUwm9MdAy5
ಮಣ್ಣಿನ ಅಂಕಣದ ಮಾಸ್ಟರ್ ಮುಂದಿನ ಸುತ್ತಿನಲ್ಲಿ ಜಪಾನಿನ ನಿಶಿಕೋರಿ ಅಥವಾ ಇಟಾಲಿಯನ್ ಸ್ಟೆಫಾನೊ ಟ್ರಾವಾಗ್ಲಿಯಾ ಅವರೊಂದಿಗೆ ಸೆಣಸಾಡಲಿದ್ದಾರೆ.