ರೋಮ್ : ಸ್ಪೇನ್ನ ರಾಫೆಲ್ ನಡಾಲ್ ಇಟಾಲಿಯನ್ ಓಪನ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಿರಾಶೆ ಅನುಭವಿಸಿದ್ದಾರೆ.
19 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ವಿಜೇತರಾದ ರಾಫೆಲ್ ನಡಾಲ್ ಇಟಾಲಿಯನ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೈನಾದ ಡಿಯಾಗೋ ಶ್ವಾರ್ಟ್‌ಜ್‌ಮನ್ ವಿರುದ್ಧ 2-6, 7-5ರ ನೇರ ಸೆಟ್ಗಳ ಸೋಲು ಅನುಭವಿಸಿದ್ದಾರೆ.
ದೀರ್ಘ ವಿರಾಮದ ನಂತರ ಟೆನ್ನಿಸ್ಗೆ ಮರಳಿದ್ದ ಹಾಲಿ ಚಾಂಪಿಯನ್ ಹಾಗೂ 9 ಬಾರಿಯ ಪ್ರಶಸ್ತಿ ವಿನ್ನರ್ ನಡಾಲ್ ಅರ್ಜೆಂಟೈನಾದ ಆಟಗಾರನ ವಿರುದ್ಧ ಸುಲಭವಾಗಿ ಸೋಲುಂಡರು.
ಶ್ವಾರ್ಟ್‌ಜ್‌ಮನ್ ವಿರುದ್ಧ ಈ ಹಿಂದಿನ 9 ಹಣಾಹಣಿಯಲ್ಲೂ ನಡಾಲ್ ವಿಜಯ ಸಾಧಿಸಿದ್ದರು. ಆದರೆ, ಇಂದಿನ ಪಂದ್ಯದಲ್ಲಿ ತಮ್ಮ ನೆಚ್ಚಿನ ಮಣ್ಣಿನ ಅಂಗಳದಲ್ಲೇ ನಡಾಲ್ ನೇರ ಸೆಟ್ಗಳ ಅಂತರದಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ನಾವು ಸೋಲಿಗೆ ಹಲವಾರು ಕಾರಣಗಳನ್ನು ಹುಡುಕಬಹುದು. ಆದರೆ, ನಾನು ಉತ್ತಮವಾಗಿ ಆಡಲಿಲ್ಲ ಎನ್ನುವುದು ತಿಳಿದಿದೆ. ಹಾಗಾಗಿ, ನಾನು ನೆಪ ಹುಡುಕುವ ಸಮಯ ಇದಲ್ಲ. ನಾನು ಉತ್ತಮವಾಗಿ ಆಡುವಲ್ಲಿ ವಿಫಲನಾದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿದೆ ಎಂದಿದ್ದಾರೆ. ಶ್ವಾರ್ಟ್‌ಜ್‌ಮನ್ ಸೆಮಿಫೈನಲ್ ಪಂದ್ಯದಲ್ಲಿ ಕೆನಡಾದ ಡೇನಿಸ್ ಶಪೋವಲೊವ್ ವಿರುದ್ಧ ಸೆಣಸಾಡಲಿದ್ದಾರೆ.