ETV Bharat / sports

ಫ್ರೆಂಚ್​ ಓಪನ್​ ಗೆದ್ದು ಫೆಡರರ್​ ದಾಖಲೆ ಸರಿಗಟ್ಟಿದ ನಡಾಲ್

ರೋಲೆಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನಿನ ನಡಾಲ್ 6-0,6-2, 7-5 ಸೆಟ್​ಗಳ ಅಂತರದಲ್ಲಿ ಸರ್ಬಿಯನ್ ಆಟಗಾರನಿಗೆ ಸೋಲುಣಿಸಿದರು. ಈ ಮೂಲಕ ಮಣ್ಣಿನ ಮೈದಾನದಲ್ಲಿ ತಾವೇ ರಾಜ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದರು.

ಫ್ರೆಂಚ್​ ಓಪನ್ ಗೆದ್ದ ನಡಾಲ್​
ಫ್ರೆಂಚ್​ ಓಪನ್ ಗೆದ್ದ ನಡಾಲ್​
author img

By

Published : Oct 11, 2020, 10:04 PM IST

ಪ್ಯಾರಿಸ್​: ಫ್ರೆಂಚ್ ಓಪನ್ ಫೈನಲ್​ನಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ನೊವಾಕ್ ಜೊಕೊವಿಕ್​ ಅವರನ್ನು ಮಣಿಸುವ ಮೂಲಕ ರಾಫೆಲ್​ ನಡಾಲ್​ ಚಾಂಪಿಯನ್ ಆಗಿದ್ದಾರೆ. ಈ ಮೂಲಕ ಅತಿ ಹೆಚ್ಚು ಗ್ರ್ಯಾಂಡ್​ಸ್ಲಾಮ್ ಗೆದ್ದ ವಿಶ್ವದಾಖಲೆಯನ್ನು ಸ್ವಿಸ್​ ಆಟಗಾರ ರೋಜರ್ ಫೆಡರರ್​ ಜೊತೆ ಹಂಚಿಕೊಂಡಿದ್ದಾರೆ.

ರೋಲೆಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನಿನ ನಡಾಲ್ 6-0,6-2, 7-5 ಸೆಟ್​ಗಳ ಅಂತರದಲ್ಲಿ ಸರ್ಬಿಯನ್ ಆಟಗಾರನಿಗೆ ಸೋಲುಣಿಸಿದರು. ಈ ಮೂಲಕ ಮಣ್ಣಿನ ಮೈದಾನದಲ್ಲಿ ತಾವೇ ರಾಜ ಎಂದು ನಿರೂಪಿಸಿದರು.

ಈಗಾಗಲೆ ಫ್ರೆಂಚ್​ ಓಪನ್ಅನ್ನು ಅತಿಹೆಚ್ಚು ಬಾರಿ ಗೆದ್ದಿರುವ ದಾಖಲೆ ಹೊಂದಿರುವ ನಡಾಲ್​, ಆ ದಾಖಲೆಯನ್ನು 13ಕ್ಕೇ ಏರಿಸಿಕೊಂಡರು. ಅಲ್ಲದೆ ಫ್ರೆಂಚ್​ ಓಪನ್​ನಲ್ಲಿ ಫೈನಲ್​ ಪ್ರವೇಶಿಸಿದ ಎಲ್ಲಾ ಬಾರಿಯೂ ಗೆದ್ದ ಸಾಧನೆಗೂ ಪಾತ್ರರಾದರು.

ಫೆಡರರ್​ ದಾಖಲೆ ಸರಿಗಟ್ಟಿದ ರಾಫೆಲ್:

ದಾಖಲೆಯ 13ನೇ ಫ್ರೆಂಚ್​ ಓಪನ್ ಗೆಲ್ಲುವ ಮೂಲಕ ರಾಫೆಲ್ ನಡಾಲ್ ಅತಿ ಹೆಚ್ಚು ಗ್ರ್ಯಾಂಡ್​ಸ್ಲಾಮ್ ಪ್ರಶಸ್ತಿ ಗೆದ್ದ ವಿಶ್ವದಾಖಲೆಯನ್ನು ಸ್ವಿಟ್ಜರ್​ಲೆಂಡ್​ನ ರೋಜರ್ ಫೆಡರರ್​ ಅವರ ಜೊತೆ ಹಂಚಿಕೊಂಡರು.

38 ವರ್ಷದ ಫೆಡರರ್​ 6 ಆಸ್ಟ್ರೇಲಿಯನ್ ಓಪನ್​, 8 ವಿಂಬಲ್ಡನ್​ ಓಪನ್, 5 ಯುಎಸ್​ ಓಪನ್ ಹಾಗೂ ಒಂದು ಫ್ರೆಂಚ್​ ಓಪನ್ ಗೆಲ್ಲುವ ಮೂಲಕ 20 ಗ್ರ್ಯಾಂಡ್​ ಸ್ಲಾಮ್ ಒಡೆಯರಾಗಿದ್ದಾರೆ. ಇದೀಗ ನಡಾಲ್​ 13 ಫ್ರೆಂಚ್ ಓಪನ್, 4 ಯುಎಸ್ ಓಪನ್​, 2 ವಿಂಬಲ್ಡನ್​ ಹಾಗೂ ಒಂದು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ತಮ್ಮದಾಗಿಸುವ ಮೂಲಕ ಸ್ವಿಸ್​ ಲೆಜೆಂಡ್​ ಜೊತೆ ಹೆಚ್ಚು ಗ್ರ್ಯಾಂಡ್​ ಸ್ಲಾಮ್​ ಗೆದ್ದ ದಾಖಲೆಯನ್ನು ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.