ETV Bharat / sports

ಸ್ವಾರ್ಟ್ಜ್​​ಮನ್​ ಮಣಿಸಿ 14ನೇ ಬಾರಿ ಫ್ರೆಂಚ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ನಡಾಲ್ - ರಾಫೆಲ್ ನಡಾಲ್ vs ಡೀಗೋ ಸ್ವಾರ್ಟ್ಜ್​ಮನ್​ ಕ್ವಾರ್ಟರ್​ ಫೈನಲ್

ಬುಧವಾರ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿಶ್ವದ 3ನೇ ಶ್ರೇಯಾಂಕಿತ ನಡಾಲ್​ ಸ್ವಾರ್ಟ್ಜ್​​ಮನ್​ ವಿರುದ್ಧ 6-3, 4-6, 6-4 6-0ಸೆಟ್​ಗಳಿಂದ ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.

ಫ್ರೆಂಚ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ನಡಾಲ್
ಫ್ರೆಂಚ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ನಡಾಲ್
author img

By

Published : Jun 9, 2021, 10:55 PM IST

ಪ್ಯಾರಿಸ್​: ಮಣ್ಣಿನಂಕಣದ ದೊರೆ ಸ್ಪೇನ್​ನ ರಾಫೆಲ್ ನಡಾಲ್​ ಬುಧವಾರ ಅರ್ಜೆಂಟೀನಾದ ಡೀಗೋ ಸ್ವಾರ್ಟ್ಜ್​ಮನ್​ ಅವರನ್ನು ಮಣಿಸಿ 14ನೇ ಬಾರಿ ಫ್ರೆಂಚ್​ ಓಪನ್​ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿಶ್ವದ 3ನೇ ಶ್ರೇಯಾಂಕಿತ ನಡಾಲ್​ ಸ್ವಾರ್ಟ್ಜ್​​ಮನ್​ ವಿರುದ್ಧ 6-3, 4-6, 6-4 6-0ಯಲ್ಲಿ ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.

21ನೇ ವಿಶ್ವದಾಖಲೆಯ ಗ್ರ್ಯಾಂಡ್​ಸ್ಲಾಮ್​ ಮೇಲೆ ಕಣ್ಣಿಟ್ಟಿರುವ ನಡಾಲ್ 14ನೇ​ ರೋಲ್ಯಾಂಡ್​ ಗ್ಯಾರೋಸ್​ ಗೆದ್ದು ತಮ್ಮ ಹೆಸರಿನಲ್ಲಿರುವ ಒಂದು ಪ್ರಮುಖ ಟೂರ್ನಿಯನ್ನು ಹೆಚ್ಚು ಬಾರಿ ಗೆದ್ದಿರುವ ದಾಖಲೆಯನ್ನು ಉತ್ತಮ ಪಡಿಸಿಕೊಳ್ಳಲಿದ್ದಾರೆ.

ಸತತ 36 ಸೆಟ್​ಗಳನ್ನು ಗೆದ್ದು ಮುನ್ನುಗ್ಗುತ್ತಿದ್ದ ನಡಾಲ್ ಈ ಪಂದ್ಯದಲ್ಲಿ 2ನೇ ಸೆಟ್​ನಲ್ಲಿ ಸ್ವಾರ್ಟ್ಜ್​ಮನ್​ ಎದುರು 4-6ರಲ್ಲಿ ಸೋಲು ಕಂಡರು. ಆದರೂ ಪಂದ್ಯವನ್ನು ಮಾತ್ರ ನಿರಾಯಾಸವಾಗಿ ಗೆದ್ದರು. ವಿಶೇಷವೆಂದರೆ ಈ ಇಬ್ಬರು ಕ್ವಾರ್ಟರ್​ ಫೈನಲ್​ವರೆಗೂ ಒಂದೇ ಒಂದು ಸೆಟ್​ ಕಳೆದುಕೊಂಡಿರಲಿಲ್ಲ. ಆದರೆ, ಈ ಪಂದ್ಯದಲ್ಲಿ ಇಬ್ಬರ ದಾಖಲೆಯ ಓಟಕ್ಕೆ ಬ್ರೇಕ್ ಬಿದ್ದಿತು.

ವಿಶ್ವದ 3ನೇ ಶ್ರೇಯಾಂಕದ ರಾಫೆಲ್ ನಡಾಲ್ ಸೆಮಿಫೈನಲ್​ ಪಂದ್ಯದಲ್ಲಿ ವಿಶ್ವದ ನಂಬರ್​ 1 ನೊವಾಕ್ ಜೋಕೊವಿಕ್​ ಅಥವಾ ಮ್ಯಾಟಿಯೊ ಬೆರೆಟ್ಟಿನಿ ಸವಾಲನ್ನು ಎದುರಿಸಲಿದ್ದಾರೆ.

ಇದನ್ನು ಓದಿ: ಫ್ರೆಂಚ್ ಓಪನ್: 2ನೇ ಶ್ರೇಯಾಂಕದ ಮೆಡ್ವೆಡೆವ್​ಗೆ ಶಾಕ್ ನೀಡಿ ಸೆಮಿಫೈನಲ್ ಪ್ರವೇಶಿಸಿದ ಸಿಟ್ಸಿಪಾಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.