ಕ್ಯಾರಿ(ಯುಎಸ್): ಭಾರತದ ಪ್ರಜ್ಞೇಶ್ ಗುಣೇಶ್ವರನ್ ಅಟ್ಲಾಂಟಿಕ್ ಟೈರ್ ಚಾಂಪಿಯನ್ಶಿಪ್ನ ಸೆಮಿಫೈನಲ್ನಲ್ಲಿ ವಾಕ್ ಓವರ್ ಪಡೆದು ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ರಾತ್ರಿ ಗುಣೇಶ್ವರನ್ ಡೆನ್ಮಾರ್ಕ್ನ ಮೈಕಲ್ ಟಾರ್ಪೆಗಾರ್ಡ್ ವಿರುದ್ಧ ಸೆಮಿಫೈನಲ್ ಪಂದ್ಯವಾಡಬೇಕಿತ್ತು. ಆದರೆ, ಟಾರ್ಪೆಗಾರ್ಡ್ ಆಡದ ಕಾರಣ ವಾಕ್ಓವರ್ ಪಡೆದು ಸುಲಭವಾಗಿ ಫೈನಲ್ ಪ್ರವೇಶಿಸಿದ್ದಾರೆ.
ಇದಕ್ಕೂ ಮುನ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 146ನೇ ಶ್ರೇಯಾಂಕದ ಗುಣೇಶ್ವರನ್ 3-6,7-5,7-6ರಲ್ಲಿ ಬ್ರೆಜಿಲ್ನ ಥಾಮಸ್ ಬೆಲುಸಿ ವಿರುದ್ಧ ರೋಚಕ ಗೆಲುವು ಸಾಧಿಸಿದ್ದರು.
ಇದೀಗ ಗುಣೇಶ್ವರನ್ ಭಾನುವಾರ ರಾತ್ರಿ ನಡೆಯುವ ಫೈನಲ್ ಪಂದ್ಯದಲ್ಲಿ ಅಮೆರಿಕಾದ ಡೇನಿಸ್ ಕುಡ್ಲ ಅವರ ಸವಾಲನ್ನು ಎದುರಿಸಲಿದ್ದಾರೆ.