ETV Bharat / sports

'ಲಕ್ಕಿ ಲೂಸರ್​' ವಿಭಾಗದಲ್ಲಿ ಆಸ್ಟ್ರೇಲಿಯಾ ಓಪನ್​ ಪ್ರವೇಶಿಸಿದ ಭಾರತದ ಪ್ರಜ್ನೇಶ್​ ಗುಣೇಶ್ವರನ್​

ಪ್ರಜ್ನೇಶ್​ ಕ್ವಾಲಿಫೈಯರ್​ ಸುತ್ತಿನಲ್ಲಿ ಲಾಟ್ವಿಯಾದ ಎರ್ನೆಸ್ಟ್ಸ್​ ಗುಲ್ಬಿಸ್​ ವಿರುದ್ಧ 6-7(2), 2-6ರಲ್ಲಿ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊಬಿದ್ದಿದ್ದರು. ಆದರೆ ಲಕ್ಕಿ ಲೂಸರ್​ ವಿಭಾಗದಲ್ಲಿ ಆಸ್ಟ್ರೇಲಿಯಾ ಓಪನ್​ಗೆ ಪ್ರವೇಶ ಪಡೆದಿದ್ದಾರೆ.

Australian Open main draw
Australian Open main draw
author img

By

Published : Jan 18, 2020, 6:03 PM IST

ಮೆಲ್ಬೋರ್ನ್​: ಭಾರತದ ಟಾಪ್​ ಸಿಂಗಲ್​ ಟೆನ್ನಿಸ್​ ಆಟಗಾರ ಪ್ರಜ್ನೇಶ್​ ಗುಣೇಶ್ವರನ್​ ಕ್ವಾಲಿಫೈಯರ್​ ಪಂದ್ಯದಲ್ಲಿ ಸೋಲನುಭವಿಸಿದರೂ 'ಲಕ್ಕಿ ಲೂಸರ್​' ವಿಭಾಗದಲ್ಲಿ ಆಸ್ಟ್ರೇಲಿಯಾ ಓಪನ್​ನ್​ಗೆ ಪ್ರವೇಶ ಪಡೆದಿದ್ದಾರೆ.

ಪ್ರಜ್ನೇಶ್​ ಕ್ವಾಲಿಫೈಯರ್​ ಸುತ್ತಿನಲ್ಲಿ ಲಾಟ್ವಿಯಾದ ಎರ್ನೆಸ್ಟ್ಸ್​ ಗುಲ್ಬಿಸ್​ ವಿರುದ್ಧ 6-7(2), 2-6ರಲ್ಲಿ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊಬಿದ್ದಿದ್ದರು.

ಆದರೆ ಟೂರ್ನಿಯಲ್ಲಿ ಅಲೆಕ್ಸ್​ ಡಿ ಮೈನವುರ್​ ಮತ್ತು ಪೊಲೆಂಡ್​ ಕಾಮಿಲ್​ ಮೈಕ್ಷಾಕ್​ ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದರು. ನಿಕೋಲಸ್​ ಜರ್ರಿ ಡೂಪಿಂಗ್​ ಅಮಾನತಿಗೆ ಒಳಗಾಗಿದ್ದಾರೆ. ಇವರ ಸ್ಥಾನಕ್ಕಾಗಿ ಕ್ವಾಲಿಫೈರ್​ನಲ್ಲಿ ಸೋಲನುಭಿವಿಸಿದ್ದ 5 ಆಟಗಾರರನ್ನು 'ಲಕ್ಕಿ ಲೂಸರ್​' ಕೋಟಾದಡಿ ಆಸ್ಟ್ರೇಲಿಯಾ ಓಪನ್​ಗೆ ಅರ್ಹತೆ ಪಡೆದಿದ್ದಾರೆ.

ಗುಣೇಶ್ವರನ್​ ತಮ್ಮ ಮೊದಲ ಪಂದ್ಯದಲ್ಲಿ ಜಪಾನ್​ನ ತತ್ಸುಮ ಇಟೋ ಅವರನ್ನು ಎದುರಿಸಲಿದ್ದಾರೆ. ಇವರನ್ನು ಮಣಿಸಿದರೆ ಗುಣೇಶ್ವರನ್​ ತಮ್ಮ ಎರಡನೇ ಸುತ್ತಿನಲ್ಲಿ ವಿಶ್ವದ 2 ನೇ ಶ್ರೇಯಾಂಕದ ಸರ್ಬಿಯಾದ ನುವಾಕ್​ ಜೋಕೊವಿಕ್​ರನ್ನು ಎದುರಿಸುವ ಸೌಭಾಗ್ಯ ಸಿಗಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.