ನಾರ್ತ್ ಕರೋಲಿನ: ಭಾರತದ ಟೆನ್ನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅಟ್ಲಾಂಟಿಕ್ ಟೈನ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಎಟಿಪಿ ಚಾಲೆಂಜರ್ಸ್ ಭಾಗವಾಗಿರುವ ಈ ಟೂರ್ನಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಗುಣೇಶ್ವರನ್, ಬ್ರೆಜಿಲ್ನ ಥಾಮಸ್ ಬೆಲುಸಿ ಅವರನ್ನು 3-6, 7-5, 7-6ರ ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
146ನೇ ಶ್ರೇಯಾಂಕದ ಗುಣೇಶ್ವರನ್ ಮೊದಲ ಸೆಟ್ನಲ್ಲಿ ಯಾವುದೇ ಪ್ರತಿರೋಧವಿಲ್ಲದೆ ಸೋಲೊಪ್ಪಿಕೊಂಡರು. ಆದರೆ ನಂತರದ ಎರಡು ಸೆಟ್ಗಳಲ್ಲಿ ಅದ್ಭುತವಾಗಿ ತಿರುಗಿಬಿದ್ದು ಮೂರು ಸೆಟ್ಗಳ ಪಂದ್ಯವನ್ನು ಗೆದ್ದುಕೊಂಡರು.
ಎದುರಾಳಿ ವಿರುದ್ಧ ಗಳಿಸಿಕೊಂಡ 17 ಪಾಯಿಂಟ್ಸ್ಗಳಲ್ಲಿ 5 ಬ್ರೇಕಿಂಗ್ ಪಾಯಿಂಟ್ ಒಳಗೊಂಡಿತ್ತು. ಸರ್ವೀಸ್ನಲ್ಲಿ ಗುಣೇಶ್ವರನ್ ಶೇ. 66 ಅಂಕ ಪಡೆದರೆ, ಇವರ ಎದುರಾಳಿ ಇವರಿಗಿಂತ ಉತ್ತಮ ಪ್ರದರ್ಶನ ತೋರಿ ಶೇ. 67 ಅಂಕ ಗಳಿಸಿದ್ದರು. ಆದರೂ ಕೊನೆಯ ಸೆಟ್ನಲ್ಲಿ ಒತ್ತಡವನ್ನು ಮೆಟ್ಟಿ ನಿಂತು ಗೆಲ್ಲುವ ಮೂಲಕ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದರು.
ಭಾರತೀಯ ಆಟಗಾರ ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮೈಕೆಲ್ ಟಾರ್ಪೆಗಾರ್ಡ್ ಅವರನ್ನು ಎದುರಿಸಲಿದ್ದಾರೆ.