ETV Bharat / sports

ಟೆನಿಸ್​ ಶ್ರೇಯಾಂಕ: 2ನೇ ಸ್ಥಾನಕ್ಕೆ ಮರಳಿದ ಒಸಾಕಾ, ಮೆಡ್ವೆಡೆವ್​​ಗೆ 3ನೇ ಸ್ಥಾನ - ಡ್ಯಾನಿಲ್ ಮೆಡ್ವೆಡೆವ್​

ಮಹಿಳೆಯರ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಗ್ರ್ಯಾಂಡ್​ಸ್ಲಾಮ್​ ಫೈನಲ್​ ಪ್ರವೇಶಿಸಿದ್ದ ಅಮೆರಿಕಾದ ಜನ್ನಿಫರ್​ ಬ್ರಾಡಿ 11 ಸ್ಥಾನ ಏರಿಕೆ ಕಂಡು 13ನೇ ಶ್ರೇಯಾಂಕ ಪಡೆದಿದ್ದಾರೆ. ಆದರೆ, ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲರಾದ ಆಸ್ಟ್ರೇಲಿಯದ ಆಶ್ಲೇ ಬಾರ್ಟಿ ಅಗ್ರಸ್ಥಾನದಲ್ಲಿ ಮುಂದುವರಿದ್ದಾರೆ.

ಟೆನಿಸ್​ ಶ್ರೇಯಾಂಕ
ನವೋಮಿ ಒಸಾಕ
author img

By

Published : Feb 23, 2021, 1:11 PM IST

Updated : Feb 23, 2021, 3:48 PM IST

ಲಂಡನ್​: ಆಸ್ಟ್ರೇಲಿಯನ್ ಓಪನ್​ನ ನೂತನ ಚಾಂಪಿಯನ್ ನವೋಮಿ ಒಸಾಕಾ ಟಬ್ಲ್ಯೂಟಿಎ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಪುರುಷರ ಶ್ರೇಯಾಂಕದಲ್ಲಿ ರನ್ನರ್ ಅಪ್​ ಆದ ಡ್ಯಾನಿಲ್ ಮೆಡ್ವೆಡೆವ್ ಎಟಿಪಿ ರ್ಯಾಂಕಿಂಗ್ಸ್​ನಲ್ಲಿ 3ನೇ ಸ್ಥಾನಕ್ಕೇರಿದ್ದಾರೆ.

ಸೋಮವಾರ ಬಿಡುಗಡೆಯಾಗಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯನ್​ ಓಪನ್​ ಚಾಂಪಿಯನ್ ಆಗಿರುವ ನೊವಾಕ್​ ಜೋಕೊವಿಕ್​ ಅವರ ಅಗ್ರಸ್ಥಾನದಲ್ಲಿ, 20 ಗ್ರ್ಯಾಂಡ್​ಸ್ಲಾಮ್​ ಚಾಂಪಿಯನ್​ ನಡಾಲ್ 2ನೇ ಸ್ಥಾನದಲ್ಲಿ ಮುಂದುವರಿದಿದ್ದು, ಮೆಡ್ವೆಡೆವ್​ ವೃತ್ತಿ ಜೀವನದ ಶ್ರೇಷ್ಠ 3ನೇ ಶ್ರೇಯಾಂಕ ಪಡೆದಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಗ್ರ್ಯಾಂಡ್​ಸ್ಲಾಮ್​ ಫೈನಲ್​ ಪ್ರವೇಶಿಸಿದ್ದ ಅಮೆರಿಕಾದ ಜನ್ನಿಫರ್​ ಬ್ರಾಡಿ 11 ಸ್ಥಾನ ಏರಿಕೆ ಕಂಡು 13ನೇ ಶ್ರೇಯಾಂಕ ಪಡೆದಿದ್ದಾರೆ. ಆದರೆ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲರಾದ ಆಸ್ಟ್ರೇಲಿಯದ ಆಶ್ಲೇ ಬಾರ್ಟಿ ಅಗ್ರಸ್ಥಾನದಲ್ಲಿ ಮುಂದುವರಿದ್ದಾರೆ.

23 ಗ್ರ್ಯಾಂಡ್​ಸ್ಲಾಮ್​ ವಿಜೇತ ಸೆರೆನಾ ವಿಲಿಯಮ್ಸ್​ 10 ರಿಂದ 7ನೇ ಸ್ಥಾನಕ್ಕೆ ಬಡ್ತಿಪಡೆದಿದ್ದಾರೆ. ವಿಲಿಯಮ್ಸ್​ರಿಂದ ಕ್ವಾರ್ಟರ್​ನಲ್ಲಿ ಸೋಲು ಕಂಡಿದ್ದ ಹಾಲೆಪ್​ 2 ರಿಂದ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಪುರುಷರ ಎಟಿಪಿ ಶ್ರೇಯಾಂಕದಲ್ಲಿ ಡೊಮೆನಿಕ್ ಥೀಮ್​ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಜರ್ ಫೆಡರರ್​ 5ನೇ ಸ್ಥಾನ ಉಳಿಸಿಕೊಂಡಿದ್ದರೆ, ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ ಜೋಕೊವಿಕ್​ರಿಂದ ಸೋಲಲ್ಪಟ್ಟ ಅಸ್ಲಾನ್ ​ಕರಾತ್ಸೆವ್​ ಬರೋಬ್ಬರಿ 72 ಸ್ಥಾನ ಏರಿಕೆ ಕಂಡು 114ರಿಂದ 42 ನೇ ಶ್ರೇಯಾಂಕಕ್ಕೆ ತಲುಪಿದ್ದಾರೆ.

ಇದನ್ನು ಓದಿ: ಬೌಲಿಂಗ್ ಕೋಚ್​ ಆಗಿ ಆಯ್ಕೆಯಾದ ಮೂರೇ ದಿನಕ್ಕೆ ರಾಜೀನಾಮೆ ನೀಡಿದ ಚಮಿಂದಾ ವಾಸ್​

Last Updated : Feb 23, 2021, 3:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.