ETV Bharat / sports

ಅಗ್ರಸ್ಥಾನದಲ್ಲಿ 350 ವಾರ ಪೂರೈಸಿದ ಜೋಕೊವಿಕ್​, ಸ್ಟೆಫೀ ಗ್ರಾಫ್​ರ ಸಾರ್ವಕಾಲಿಕ ದಾಖಲೆ ಮೇಲೆ ಕಣ್ಣು - ಸ್ಟೆಫೀ ಗ್ರಾಫ್ ದಾಖಲೆಯತ್ತ ನೊವಾಕ್ ಜೋಕೊವಿಕ್

ಜೋಕೊವಿಕ್​ ಈಗಾಗಲೇ ವರ್ಷದ ಕೊನೆಯಲ್ಲಿ 7 ಬಾರಿ ಅಗ್ರಸ್ಥಾನದಲ್ಲಿ ಕೊನೆಗೊಳಿಸುವ ಮೂಲಕ ಅಮೆರಿಕಾದ ಲೆಜೆಂಡರಿ ಆಟಗಾರ ಪೇಟ್​ ಸ್ಯಾಂಪ್ರಾಸ್​(6) ಅವರ ದಾಖಲೆಯನ್ನು ಹಿಂದಿಕ್ಕಿದ್ದರು. ಇದೀಗ ಆ ದಾಖಲೆ ಕೂಡ 8ಕ್ಕೆ ಏರಿಕೆಯಾಗಲಿದೆ..

Novak Djokovic spends 350th week atop
ಅಗ್ರಸ್ಥಾನದಲ್ಲಿ 350 ವಾರ ಪೂರೈಸಿದ ಜೋಕೊವಿಕ್
author img

By

Published : Dec 7, 2021, 4:41 PM IST

ಲಂಡನ್ ​: 20 ಗ್ರ್ಯಾಂಡ್​ ಸ್ಲಾಮ್​ಗಳ ವಿಜೇತ ಜೋಕೊವಿಕ್​ ಸೋಮವಾರ ಎಟಿಪಿ ಶ್ರೇಯಾಂಕದಲ್ಲಿ ಅಗ್ರಸ್ಥಾನಿಯಾಗಿ 350ನೇ ವಾರ ಪೂರೈಸಿದ್ದಾರೆ. ಈಗಾಗಲೇ ಅತಿ ಹೆಚ್ಚು ವಾರ ಅಗ್ರಸ್ಥಾನದಲ್ಲಿ ಕಳೆದಿರುವ ಪುರುಷ ಟೆನಿಸ್ ಆಟಗಾರ ಎನಿಸಿಕೊಂಡಿರುವ ಅವರು, ತಮ್ಮ ದಾಖಲೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ 2020 ಫೆಬ್ರವರಿ 3ರಂದು ಸರ್ಬಿಯನ್ ಸ್ಟಾರ್​ ಅಗ್ರಸ್ಥಾನವನ್ನು ಅಲಂಕರಿಸಿದ್ದರು. ಈ ವರ್ಷ ಮಾರ್ಚ್​ 8ರಂದು ರೋಜರ್​ ಫೆಡರರ್​ ಹೆಸರಿನಲ್ಲಿನಲ್ಲಿದ್ದ (310 ವಾರ) ದಾಖಲೆಯನ್ನು ಮುರಿದು 1973ರಲ್ಲಿ ಎಟಿಪಿ ಶ್ರೇಯಾಂಕ ಆರಂಭಗೊಂಡ ನಂತರ ಅತಿ ಹೆಚ್ಚು ವಾರ ಅಗ್ರಸ್ಥಾನ ಪಡೆದ ಪ್ಲೇಯರ್ ಎನಿಸಿದ್ದರು.

ಜೋಕೊವಿಕ್​ ಈಗಾಗಲೇ ವರ್ಷದ ಕೊನೆಯಲ್ಲಿ 7 ಬಾರಿ ಅಗ್ರಸ್ಥಾನದಲ್ಲಿ ಕೊನೆಗೊಳಿಸುವ ಮೂಲಕ ಅಮೆರಿಕಾದ ಲೆಜೆಂಡರಿ ಆಟಗಾರ ಪೇಟ್​ ಸ್ಯಾಂಪ್ರಾಸ್​(6) ಅವರ ದಾಖಲೆಯನ್ನು ಹಿಂದಿಕ್ಕಿದ್ದರು. ಇದೀಗ ಆ ದಾಖಲೆ ಕೂಡ 8ಕ್ಕೆ ಏರಿಕೆಯಾಗಲಿದೆ.

ಸ್ಟೆಫೀ ಗ್ರಾಫ್​ ದಾಖಲೆ ಮೇಲೆ ಕಣ್ಣು : ಪುರುಷರ ವಿಭಾಗದ ಟೆನಿಸ್​ನಲ್ಲಿ ಹೆಚ್ಚು ವಾರ ಅಗ್ರಸ್ಥಾನದಲ್ಲಿದ್ದ ಸಾರ್ವಕಾಲಿಕ ದಾಖಲೆ ಹೊಂದಿರುವ ಜೋಕೊವಿಕ್​, ವುಮೆನ್ಸ್ ಟೆನಿಸ್​ ದಂತಕತೆಯಾಗಿರುವ ಸ್ಟೆಫಿ ಗ್ರಾಫ್​ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

ಸ್ಟೆಫೀ ವುಮೆನ್ಸ್ ಟೆನಿಸ್ ರ‍್ಯಾಂಕಿಂಗ್(WTA)ನಲ್ಲಿ 377 ವಾರಗಳ ಕಾಲ ಅಗ್ರಸ್ಥಾನದಲ್ಲಿ ಕಳೆದ ವಿಶ್ವದಾಖಲೆ ಹೊಂದಿದ್ದಾರೆ. ಜೋಕೊವಿಕ್​ ಒಂದು ವೇಳೆ 2022ರಲ್ಲೂ ಅಗ್ರಸ್ಥಾನ ಕಾಪಾಡಿಕೊಂಡರೆ, ಖಂಡಿತ ಈ ಸಾರ್ವಕಾಲಿಕ ದಾಖಲೆ ಕೂಡ ಅವರ ಪಾಲಾಗಲಿದೆ.

ಇದನ್ನೂ ಓದಿ:Asia Youth Para Games: 16 ಪದಕ ಗೆದ್ದ ಭಾರತೀಯ ಪ್ಯಾರಾ ಶಟ್ಲರ್​ಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.