ETV Bharat / sports

ಇಟಾಲಿಯನ್ ಓಪನ್​: ಸೆಮಿಗೆ ಎಂಟ್ರಿಕೊಟ್ಟ ಜೋಕೊವಿಕ್​ಗೆ ಪೈನಲ್​ನಲ್ಲಿ ನಡಾಲ್ ಎದುರಾಳಿ?

ಶನಿವಾರ ನಡೆದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಸರ್ಬಿಯನ್ ತಾರೆ ಸಿಟ್ಸಿಪಾಸ್​ ವಿರುದ್ಧ 4-6, 7-5, 7-5 ಸೆಟ್​ಗಳ ಅಂತರದಿಂದ ಜಯ ಸಾಧಿಸಿ ಸತತ 8ನೇ ಬಾರಿ ಇಟಾಲಿಯನ್ ಓಪನ್‌ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ. ಜೋಕೊವಿಕ್​ ಎಂಟರಲ್ಲಿ ಐದು ಬಾರಿ ಚಾಂಪಿಯನ್​ ಆಗಿದ್ದಾರೆ.

ನೊವಾಕ್ ಜೋಕೊವಿಕ್
ನೊವಾಕ್ ಜೋಕೊವಿಕ್
author img

By

Published : May 15, 2021, 8:56 PM IST

ರೋಮ್‌: ವಿಶ್ವದ ನಂಬರ್​ 1 ಶ್ರೇಯಾಂಕದ ನೊವಾಕ್‌ ಜೋಕೋವಿಕ್ ಇಟಾಲಿಯನ್ ಓಪನ್​ ಕ್ವಾರ್ಟರ್ ಫೈನಲ್ಸ್​ನಲ್ಲಿ ಗ್ರೀಕ್​ನ ಸ್ಟೆಫಾನೊಸ್‌ ಸಿಟ್ಸಿಪಾಸ್ ಅವರನ್ನು ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಸರ್ಬಿಯನ್ ತಾರೆ ಸಿಟ್ಸಿಪಾಸ್​ ವಿರುದ್ಧ 4-6, 7-5, 7-5 ಸೆಟ್​ಗಳ ಅಂತರದಿಂದ ಜಯ ಸಾಧಿಸಿ ಸತತ 8ನೇ ಬಾರಿ ಇಟಾಲಿಯನ್ ಓಪನ್‌ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ. ಜೋಕೊವಿಕ್​ ಎಂಟರಲ್ಲಿ ಐದು ಬಾರಿ ಚಾಂಪಿಯನ್​ ಆಗಿದ್ದಾರೆ.

ಮೊದಲ ದಿನ ಮಳೆಗೆ ಪಂದ್ಯ ಮುಂದೂಡುವ ಮುನ್ನ ಸಿಟ್ಸಿಪಾಸ್​ ಮೊದಲ ಸೆಟ್‌ ಅನ್ನು 6-4ರಲ್ಲಿ ಗೆಲುವು ಸಾಧಿಸಿ 2ನೇ ಸೆಟ್​ಅನ್ನು 2-1ರಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ, ಶನಿವಾರ ಮುಂದುವರಿದ ಪಂದ್ಯದಲ್ಲಿ ಜೋಕೊವಿಕ್​ ಪ್ರಾಬಲ್ಯ ಸಾಧಿಸಿ ಗೆದ್ದುಕೊಂಡರು.

ನೊವಾಕ್ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಅವರು ಇಟಲಿಯ ಲೊರೆಂಜೊ ಸೋನೆಗೊ ಅವರನ್ನು ಎದುರಿಸುವರು. ಮತ್ತೊಂದು ಸೆಮಿಫೈನಲ್​ ಪಂದ್ಯ ಇಂದು ನಡೆಯಲಿದ್ದು, ಅದರಲ್ಲಿ 2ನೇ ಶ್ರೇಯಾಂಕದ ನಡಾಲ್ ಅಮೆರಿಕಾದ ರೀಲೀ ಒಪೆಲ್ಕಾ ಅವರನ್ನು ಎದುರಿಸಲಿದ್ದಾರೆ.

ಇದನ್ನು ಓದಿ: 90 ಸಾವಿರ ಕುಟುಂಬಗಳಿಗೆ ರೇಷನ್ ಕೊಟ್ಟ ಪಠಾಣ್; ಈಗ ಮತ್ತೊಂದು ಸಾಮಾಜಮುಖಿ ಕಾರ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.