ವಾಷಿಂಗ್ಟನ್ : ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜಪಾನ್ನ ನವೋಮಿ ಒಸಾಕ ಬಲ್ಜಿಯಂನ ಎಲೈಸ್ ಮೆರ್ಟೆನ್ಸ್ರನ್ನು ಮಣಿಸುವ ಮೂಲಕ ಮಿಯಾಮಿ ಓಪನ್ನಲ್ಲಿ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಟೂರ್ನಿಯಲ್ಲಿ 2ನೇ ಶ್ರೇಯಾಂಕ ಪಡೆದಿರುವ ಒಸಾಕ 16ನೇ ಶ್ರೇಯಾಂಕಿತೆ ಮೆರ್ಟೆನ್ಸ್ ವಿರುದ್ಧ 6-3,6-3ರ ನೇರ ಸೆಟ್ಗಳ ಅಂತರದಲ್ಲಿ ಗೆದ್ದು 8ರಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ. ಒಸಾಕ ಈ ಪಂದ್ಯವನ್ನು ಗೆಲ್ಲುವ ಮೂಲಕ ಸತತ 23 ಪಂದ್ಯಗಳ ಗೆಲುವಿನ ಓಟ ಮುಂದುವರಿಸಿಕೊಂಡು ಹೋಗಿದ್ದಾರೆ.
ಮೆರ್ಟೆನ್ಸ್ ವಿರುದ್ಧ ಒಸಾಕಗೆ ಇದು 3ನೇ ಗೆಲುವಾಗಿದೆ. 4 ಪಂದ್ಯಗಳ ಮುಖಾಮುಖಿಯಲ್ಲಿ ಮೊದಲ ಪಂದ್ಯದಲ್ಲಿ ಸೋತಿದ್ದ ಒಸಾಕ ನಂತರದ 3 ಪಂದ್ಯಗಳಲ್ಲಿ ಗೆಲುವು ಪಡೆದಿದ್ದಾರೆ.
ಜಪಾನ್ ಆಟಗಾರ್ತಿ ತನ್ನ ಮುಂದಿನ ಸುತ್ತಿನಲ್ಲಿ ಗ್ರೀಸ್ನ ಮರಿಯಾ ಸಕ್ಕರಿ ಅವರನ್ನು ಎದುರಿಸಲಿದ್ದಾರೆ. ಸಕ್ಕರಿ 29ನೇ ಶ್ರೇಯಾಂಕಿತೆ ಅಮೆರಿಕಾದ ಜಸ್ಸಿಕಾ ಪೆಗುಲಾ ಅವರನ್ನು 6-4,2-6,7-6(6)ರಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ವಿಶ್ವದ ನಂಬರ್ ಒನ್ ಶ್ರೇಯಾಂಕಿತೆ ಆಶ್ಲೇ ಬಾರ್ಟಿ, ಸ್ವಿಟೋಲಿನಾ, ಆ್ಯಂಡ್ರೆಸ್ಕು, ಸೆವಾಸ್ಟೋವಾ ಮತ್ತು ಸೋರಿಬ್ಸ್ ಟಾರ್ಮೊ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಸ್ಟಾರ್ ಆಟಗಾರ್ತಿಯರಾಗಿದ್ದಾರೆ.
ಇದನ್ನು ಓದಿ:ಟಿ20 ವಿಶ್ವಕಪ್ನಲ್ಲಿ ಆರಂಭಿಕರಾಗಿ ರೋಹಿತ್-ಧವನ್ ಆಡಿದರೆ ಉತ್ತಮ : ಮಾಜಿ ಸೆಲೆಕ್ಟರ್