ನವದೆಹಲಿ: ಭಾರತ ಕಂಡ ಶ್ರೇಷ್ಠ ಟೆನ್ನಿಸ್ ಪಟು ಲಿಯಾಂಡರ್ ಪೇಸ್ ತಮ್ಮ 29 ವರ್ಷಗಳ ಟನ್ನಿಸ್ ಜೀವನಕ್ಕೆ ಮುಂದಿನ ವರ್ಷ ಗುಡ್‌ಬೈ ಹೇಳಲಿದ್ದಾರೆ.
ಡಿಸೆಂಬರ್ 25 ರಂದು ಕ್ರಿಸ್ಮಸ್ಗೆ ಶುಭಕೋರುವ ಪೇಸ್ ಒಂದು ಸುದೀರ್ಘ ಪತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ನಿವೃತ್ತಿ ಸುಳಿವು ಕೊಟ್ಟರು.
"ನಾನು 2020ರ ವರ್ಷವನ್ನು ಎದುರು ನೋಡುತ್ತಿದ್ದು, ಕೆಲವೇ ಟೂರ್ನಿಗಳಲ್ಲಿ ಆಡಲು ನಿಶ್ಚಯಿಸಿದ್ದೇನೆ.ಈ ಮೂಲಕ ವಿಶ್ವದ ನನ್ನ ಎಲ್ಲಾ ಅಭಿಮಾನಿಗಳು ಹಾಗೂ ನನ್ನ ತಂಡದ ಜೊತೆ ನಿವೃತ್ತಿ ಪಂದ್ಯಗಳನ್ನು ಎಂಜಾಯ್ ಮಾಡಲು ಬಯಸಿದ್ದೇನೆ. ಇಷ್ಟು ವರ್ಷಗಳ ಕಾಲ ನನಗೆ ಪ್ರೇರಣೆಯಾದ ಹಾಗೂ ನನಗೆ ಬೆಂಬಲ ನೀಡಿದ ಎಲ್ಲಾ ಸ್ನೇಹಿತರಿಗೂ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ.
-
#OneLastRoar pic.twitter.com/WwALCVF5LO
— Leander Paes (@Leander) December 25, 2019 " class="align-text-top noRightClick twitterSection" data="
">#OneLastRoar pic.twitter.com/WwALCVF5LO
— Leander Paes (@Leander) December 25, 2019#OneLastRoar pic.twitter.com/WwALCVF5LO
— Leander Paes (@Leander) December 25, 2019
ಲಿಯಾಂಡರ್ ಪೇಸ್ ಗ್ರ್ಯಾಂಡ್ಸ್ಲಾಮ್ ಡಬಲ್ಸ್ ವಿಭಾಗದಲ್ಲಿ 18 ಪ್ರಶಸ್ತಿ ಗೆದ್ದಿದ್ದಾರೆ. ಇದರಲ್ಲಿ 10 ಮಿಶ್ರ ಡಬಲ್ಸ್ ಹಾಗೂ 8 ಡಬಲ್ಸ್ ಪ್ರಶಸ್ತಿಗಳು ಸೇರಿವೆ. 1996ರ ಅಟ್ಲಾಂಟ ಒಲಿಂಪಿಕ್ನ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವುದು ಇವರ ಅತ್ಯುತ್ತಮ ಸಾಧನೆಯಾಗಿದೆ. ಇದಲ್ಲದೇ ವೃತ್ತಿ ಜೀವನದಲ್ಲಿ 66 ವಿವಿಧ ಟೆನ್ನಿಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
7 ಬಾರಿ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿರುವ ವಿಶ್ವದ ಏಕೈಕ ಟೆನ್ನಿಸ್ ಆಟಗಾರ ಎಂಬ ದಾಖಲೆಯನ್ನು ಅವರು ಹೊಂದಿದ್ದಾರೆ. ಡೇವಿಸ್ ಕಪ್ನಲ್ಲಿ ಆಡಿರುವ 54 ಡಬಲ್ಸ್ ಪಂದ್ಯಗಳಲ್ಲಿ 44 ಪಂದ್ಯ ಗೆಲ್ಲುವ ವಿಶ್ವದಲ್ಲೇ ಅತಿ ಹೆಚ್ಚು ಡೇವಿಸ್ ಕಪ್ ಪಂದ್ಯ ಗೆದ್ದಿರುವ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದರು.