ಪ್ಯಾರೀಸ್: ವಿಶ್ವದ ನಂ.1 ಆಟಗಾರ ನೊವಾಕ್ ಜೋಕೊವಿಕ್ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಸೆಮಿಫೈನಲ್ನಲ್ಲಿ ಮಣ್ಣಿನ ಅಂಕಣದ ದೊರೆ ಎಂದೇ ಖ್ಯಾತರಾದ ರಾಫೆಲ್ ನಡಾಲ್ ಅವರನ್ನು ಜೋಕೊವಿಕ್ ಎದುರಿಸಲಿದ್ದಾರೆ.
ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಜೋಕೊವಿಕ್ 6-3 6-2 6-7 (5-7) 7-5ರಿಂದ ಇಟಲಿಯ 9ನೇ ಶ್ರೇಯಾಂಕದ ಮ್ಯಾಟಿಯೊ ಬೆರೆಟ್ಟಿನಿ ವಿರುದ್ಧ ಜಯಗಳಿಸಿದರು. ಇದಕ್ಕೂ ಮುನ್ನ ನಡಾಲ್ ಅರ್ಜೆಂಟೀನಾದ 10ನೇ ಶ್ರೇಯಾಂಕದ ಸ್ವಾರ್ಟ್ಜ್ಮನ್ ವಿರುದ್ಧ 6-3 4-6 6-4 6-0ರ ಗೆಲುವು ಪಡೆದು 14ನೇ ಸಲ ಸೆಮಿಸ್ಗೆ ಎಂಟ್ರಿ ಕೊಟ್ಟಿದ್ದರು.
-
Giving it all for the cause#RolandGarros | @DjokerNole pic.twitter.com/VvrXEUZ3I9
— Roland-Garros (@rolandgarros) June 9, 2021 " class="align-text-top noRightClick twitterSection" data="
">Giving it all for the cause#RolandGarros | @DjokerNole pic.twitter.com/VvrXEUZ3I9
— Roland-Garros (@rolandgarros) June 9, 2021Giving it all for the cause#RolandGarros | @DjokerNole pic.twitter.com/VvrXEUZ3I9
— Roland-Garros (@rolandgarros) June 9, 2021
ಇಬ್ಬರು ದಿಗ್ಗಜರ ಸೆಮಿಫೈನಲ್ ಮುಖಾಮುಖಿಯು 2021ರ ಫ್ರೆಂಚ್ ಓಪನ್ ಟೂರ್ನಿಯ ರೋಚಕತೆಯನ್ನು ಹೆಚ್ಚಿಸಿದೆ. ಈ ಪಂದ್ಯದ ವೀಕ್ಷಣೆಗೆ 5,000 ಮಂದಿಗೆ ಅವಕಾಶ ನೀಡಲಾಗುತ್ತಿದೆ. ನಡಾಲ್ ಇದುವರೆಗೆ 20 ಗ್ರಾಂಡ್ಸ್ಲಾಂ ಟೂರ್ನಿ ಗೆದ್ದಿದ್ದರೆ, ಜೋಕೊವಿಕ್ 18 ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
2005ರಿಂದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದಿರುವ ನಡಾಲ್ 13 ಬಾರಿ ಪ್ರಶಸ್ತಿ ಜಯಿಸಿದ್ದು, 14 ಸಲ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಹಿಂದೆ 2015ರಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಡಾಲ್ ವಿರುದ್ಧ ಜೋಕೊವಿಕ್ ಜಯಿಸಿದ್ದು ಬಿಟ್ಟರೆ, ಬಳಿಕ ರಾಫೆಲ್ ಮಣಿಸಲು ಸಾಧ್ಯವಾಗಿಲ್ಲ. ರೋಲ್ಯಾಂಡ್ ಗ್ಯಾರೊಸ್‌ನಲ್ಲಿ ನಡಾಲ್ 107 ಪಂದ್ಯಗಳಲ್ಲಿ 105ರಲ್ಲಿ ಜಯಭೇರಿ ಬಾರಿಸಿದ್ದಾರೆ.
-
Closing in 🏁@RafaelNadal leads 6-3, 4-6, 6-4 as he takes the third and moves within one set of the #RolandGarros semi-finals. pic.twitter.com/rBJxVkgVss
— Roland-Garros (@rolandgarros) June 9, 2021 " class="align-text-top noRightClick twitterSection" data="
">Closing in 🏁@RafaelNadal leads 6-3, 4-6, 6-4 as he takes the third and moves within one set of the #RolandGarros semi-finals. pic.twitter.com/rBJxVkgVss
— Roland-Garros (@rolandgarros) June 9, 2021Closing in 🏁@RafaelNadal leads 6-3, 4-6, 6-4 as he takes the third and moves within one set of the #RolandGarros semi-finals. pic.twitter.com/rBJxVkgVss
— Roland-Garros (@rolandgarros) June 9, 2021
ಇಬ್ಬರು ದೀರ್ಘಕಾಲದ ಪ್ರತಿಸ್ಪರ್ಧಿಗಳ ನಡುವಿನ ಒಟ್ಟಾರೆ 58 ಮುಖಾಮುಖಿ ಇದಾಗಿದ್ದು, ಜೋಕೊವಿಕ್ 29-28ರ ಮುನ್ನಡೆ ಹೊಂದಿದ್ದಾರೆ. ಆದರೆ ಇತ್ತೀಚೆಗೆ ಇಟಾಲಿಯನ್ ಓಪನ್ ಫೈನಲ್‌ನಲ್ಲಿ ನಡಾಲ್ ನೋವಾಕ್ಗೆ ಸೋಲುಣಿಸಿದ್ದನ್ನು ಸ್ಮರಿಸಬಹುದು. ಅಲ್ಲದೆ ಕಳೆದ ಐದು ವರ್ಷಗಳಲ್ಲಿ ಮಣ್ಣಿನ ಅಂಕಣದಲ್ಲಿ ನಡಾಲ್ ಸೋತಿಲ್ಲ. ಇವರಿಬ್ಬರ ನಡುವೆ ಸೆಮಿಫೈನಲ್ ಕಾಳಗವು ನಾಳೆ ನಡೆಯಲಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಕಲ್ಲು ಕ್ವಾರಿ ದುರಂತ: ಚಾರ್ಜ್ಶೀಟ್ ಸಲ್ಲಿಸಿದ CID