ETV Bharat / sports

ಫ್ರೆಂಚ್​ ಓಪನ್ ​: ಥೀಮ್​ಗೆ ಆಘಾತಕಾರಿ ಸೋಲುಣಿಸಿದ 35 ವರ್ಷದ ಪ್ಯಾಬ್ಲೊ ಆ್ಯಂಡುಜರ್‌

author img

By

Published : May 30, 2021, 10:40 PM IST

Updated : Jun 7, 2021, 6:15 PM IST

ಎರಡು ವಾರಗಳ ಹಿಂದೆ ಜಿನೆವಾದಲ್ಲಿ ರೋಜರ್​ ಫೆಡರರ್​ ಮಣಿಸಿದ್ದಾಗಲೂ ಮತ್ತೊಂದು ದೊಡ್ಡ ಉಡುಗೊರೆ ಸಿಕ್ಕಿತ್ತು. ಆ ಗೆಲುವೇ ಥೀಮ್​ರನ್ನು ಮಣಿಸಲು ನೆರವಾಗಿದೆ ಎಂದು ಆ್ಯಂಡುಜರ್​ ಹೇಳಿದ್ದಾರೆ..

ಫ್ರೆಂಚ್​ ಓಪನ್ 2021
ಪ್ಯಾಬ್ಲೊ ಆ್ಯಂಡುಜರ್‌

ಪ್ಯಾರಿಸ್ ​: ವಿಶ್ವ ಟೆನಿಸ್​ ಶ್ರೇಯಾಂಕದಲ್ಲಿ 4ನೇ ಶ್ರೇಯಾಂಕಿತ ಹಾಗೂ ಹಾಲಿ ಯುಎಸ್​ ಓಪನ್ ಚಾಂಪಿಯನ್​ ಡೊಮಿನಿಕ್ ಥೀಮ್​ ಫ್ರೆಂಚ್​ ಓಪನ್​ನ ಮೊದಲ ಸುತ್ತಿನಲ್ಲೇ ಸೋತು ಹೊರ ಬಿದ್ದಿದ್ದಾರೆ.

2 ಬಾರಿ ಫ್ರೆಂಚ್​ ಓಪನ್ ರನ್ನರ್​ ಅಪ್​ ಆಗಿರುವ ಥೀಮ್​ರನ್ನು 68ನೇ ಶ್ರೇಯಾಂಕಿತ ಆ್ಯಂಡುಜರ್​ 2 ಸೆಟ್​ಗಳ ಸೋಲಿನ ನಂತರವೂ ತಿರುಗಿ ಬಿದ್ದು ಮೊದಲ ಸುತ್ತಿನ ಪಂದ್ಯವನ್ನು 4-6, 5-7, 6-3, 6-4,6-4ರಲ್ಲಿ ಗೆದ್ದು ಬೀಗಿದರು. ಇದು ಟಾಪ್​ 5 ಶ್ರೇಯಾಂಕಿತ ಆಟಗಾರರ ವಿರುದ್ಧ ಮೊದಲ ಗೆಲುವಾಗಿದೆ.

4 ಗಂಟೆ 28 ನಿಮಿಷಗಳ ಕಾಲ ನಡೆದ ಸುದೀರ್ಘ ನಡೆದ ಪಂದ್ಯದ ಗೆಲುವು ಆ್ಯಂಡುಜರ್​ ವೃತ್ತಿ ಜೀವನದ ಅವಿಸ್ಮರಣೀಯ ಗೆಲುವಾಗಿದೆ.

ಅವರು ಎರಡು ವಾರದ ಹಿಂದೆ 20 ಗ್ರ್ಯಾಂಡ್​ಸ್ಲಾಮ್ ವಿಜೇತ ರೋಜರ್​ ಫೆಡರರ್​ರನ್ನು ಸಗಹಾ ಜಿನೆವಾ ಓಪನ್​ನ ಫ್ರೀ ಕ್ವಾರ್ಟರ್​ ಫೈನಲ್​ನಲ್ಲಿ ನೇರ ಸೆಟ್​ಗಳ ಅಂತರದಲ್ಲಿ ಮಣಿಸಿ ಆಶ್ಚರ್ಯ ಮೂಡಿಸಿದ್ದರು.

ಈ ಗೆಲುವು ನನಗೆ ವಿಶೇಷ. ಇನ್ನು ಎಷ್ಟು ವರ್ಷ ಆಡಲಿದ್ದೇನೋ ಗೊತ್ತಿಲ್ಲ. ಏಕೆಂದರೆ, ನನಗೆ 35 ವರ್ಷ ವಯಸ್ಸು. ಅದಕ್ಕಾಗಿ ಈ ಪಂದ್ಯ ನನಗೆ ದೊಡ್ಡ ಉಡುಗೊರೆ. ಹಾಗಾಗಿ, ಫಲಿತಾಂಶ ನನಗೆ ಖುಷಿ ತಂದಿದೆ.

ಎರಡು ವಾರಗಳ ಹಿಂದೆ ಜಿನೆವಾದಲ್ಲಿ ರೋಜರ್​ ಫೆಡರರ್​ ಮಣಿಸಿದ್ದಾಗಲೂ ಮತ್ತೊಂದು ದೊಡ್ಡ ಉಡುಗೊರೆ ಸಿಕ್ಕಿತ್ತು. ಆ ಗೆಲುವೇ ಥೀಮ್​ರನ್ನು ಮಣಿಸಲು ನೆರವಾಗಿದೆ ಎಂದು ಆ್ಯಂಡುಜರ್​ ಹೇಳಿದ್ದಾರೆ.

ಇದನ್ನು ಓದಿ: French Open 2021 : ಶುಭಾರಂಭ ಮಾಡಿದ 3 ಗ್ರ್ಯಾಂಡ್​ ಸ್ಲಾಮ್ ವಿನ್ನರ್ ಒಸಾಕ

Last Updated : Jun 7, 2021, 6:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.