ETV Bharat / sports

ಸಬಲೆಂಕಾ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್​ ಪ್ರವೇಶಿಸಿದ 16 ವರ್ಷದ ಕೊಕೊ ಗಫ್​ - 16 ವರ್ಷದ ಕೊಕೊ ಗಫ್​

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದ ಅರಿನಾ ಸಬಲೆಂಕಾ ಅವರನ್ನು 7-6 (2), 4-6, 6-4 ಸೆಟ್​ಗಳಿಂದ ಮಣಿಸುವ ಮೂಲಕ ಅನುಭವಿ ಎದುರಾಳಿಯನ್ನು ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದರು. ಈ ಮೂಲಕ ಟಾಪ್​ 15ನೇ ಶ್ರೇಯಾಂಕ ಹೊಂದಿರುವ ಆಟಗಾರ್ತಿಯರ ವಿರುದ್ಧ ತಮ್ಮ ಮೂರನೇ ಗೆಲುವು ಸಾಧಿಸಿದ್ದರು.

ಕೊಕೊ ಗಫ್​
ಕೊಕೊ ಗಫ್​
author img

By

Published : Aug 13, 2020, 5:06 PM IST

ಲೆಕ್ಸಿಂಗ್ಟನ್​: ಅಮೆರಿಕದ ಉದಯೋನ್ಮುಖ ಟೆನ್ನಿಸ್​ ಆಟಗಾರ್ತಿ ಕೊಕೊ ಗಫ್​ ಟಾಪ್​ ಸೀಡ್​ ಓಪನ್​ನಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದ ಅರಿನಾ ಸಬಲೆಂಕಾ ಅವರನ್ನು 7-6(2), 4-6, 6-4 ಸೆಟ್​ಗಳಿಂದ ಮಣಿಸುವ ಮೂಲಕ ಅನುಭವಿ ಎದುರಾಳಿಯನ್ನು ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದರು. ಈ ಮೂಲಕ ಟಾಪ್​ 15ನೇ ಶ್ರೇಯಾಂಕ ಹೊಂದಿರುವ ಆಟಗಾರ್ತಿಯರ ವಿರುದ್ಧ ತಮ್ಮ ಮೂರನೇ ಗೆಲುವು ಸಾಧಿಸಿದ್ದರು.

53ನೇ ಎಟಿಪಿ ಶ್ರೇಯಾಂಕ ಹೊಂದಿರುವ ಗಫ್​ 11 ಶ್ರೇಯಾಂಕದ ಸಬಲಂಕಾ ವಿರುದ್ಧ ಅದ್ಭುತ ಪ್ರದರ್ಶನ ತೋರಿದರು. ಮೊದಲ ಸೆಟ್​ನಲ್ಲಿ ಗೆಲುವು ಸಾಧಿಸಿದ ಗಫ್​ ಎರಡನೇ ಸೆಟ್​ನಲ್ಲಿ ಸಬಲಂಕಾ ಅನುಭವಕ್ಕೆ ತಲೆಬಾಗಿದರು. ಆದರೆ ಮೂರನೇ ಸೆಟ್​ನಲ್ಲಿ ತಾಳ್ಮೆ ಹಾಗೂ ಚಾಣಾಕ್ಷತನದಿಂದ ಆಡಿ ಕ್ವಾರ್ಟರ್​ ಫೈನಲ್​ಗೆ ಎಂಟ್ರಿ ಪಡೆದರು.

ಗಫ್​ ತನ್ನ ಮುಂದಿನ ಪಂದ್ಯದಲ್ಲಿ ಟೂರ್ನಿಯಲ್ಲಿ 8ನೇ ಶ್ರೇಯಾಂಕ ಪಡೆದಿರುವ ಆನ್ಸ್​ ಜಬ್ಯೂರ್​ ವಿರುದ್ಧ ಹೋರಾಟ ನಡೆಸಲಿದ್ದಾರೆ. ಇನ್ನು ಇಂದಿನ ಪಂದ್ಯದಲ್ಲಿ ವಿಲಿಯಮ್ಸ್​ ಸಹೋದರಿಯರು ಫ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಸೆಣಸಾಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.