ETV Bharat / sports

ಯುಎಸ್​ ಓಪನ್ 2020.. ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ರೋಹನ್​ ಬೋಪಣ್ಣ-ಶಪೋವಲೊವ್​ ಜೋಡಿ - ಯುಎಸ್​ ಓಪನ್​ 2020

ಇಂಡೋ-ಕೆನಡಿಯನ್​ ಜೋಡಿ ತಮ್ಮ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಡಚ್‌-ರೊಮೇನಿಯನ್ ಜೋಡಿಯಾದ ಜೀನ್ ಜುಲಿಯನ್ ರೋಜರ್ ಮತ್ತು ಹೋರಿಯಾ ಟೆಕಾವು ಅವರನ್ನು ಸೋಮವಾರ ಎದುರಿಸಲಿದೆ..

ಯುಎಸ್​ ಓಪನ್ 2020
ರೋಹನ್​ ಬೋಪಣ್ಣ-ಶಪೋವಲೊವ್​
author img

By

Published : Sep 6, 2020, 4:06 PM IST

ನ್ಯೂಯಾರ್ಕ್ ​: ಭಾರತದ ರೋಹನ್​ ಬೋಪಣ್ಣ ಮತ್ತು ಕೆನಡಾದ ಜೊತೆಗಾರ ಡೇನಿಸ್​ ಶಪೋವಲೋವ್​ ಯುಎಸ್​ ಓಪನ್​ನಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಬೋಪಣ್ಣ ಶಪೋವಲೊವ್​ ಜೋಡಿ ಜರ್ಮನ್​ನ 6ನೇ ಶ್ರೇಯಾಂಕದ ಕೆವಿನ್ ಕ್ರಾವಿಟ್ಜ್ ಮತ್ತು ಅಂಡ್ರಿಯಾಸ್ ಮೀಸ್ ಜೋಡಿಯನ್ನು ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದೆ.

ಒಂದು ಗಂಟೆ 47 ನಿಮಿಷಗಳ ಕಾಲ ನಡೆದ ತೀವ್ರ ಹಣಾಹಣಿಯಲ್ಲಿ ಭಾರತ-ಕೆನಡಾ ಜೋಡಿ ಜರ್ಮನಿಯ ಬಲಿಷ್ಠ ಆಟಗಾರರನ್ನು 4-6, 6-4, 6-3 ಸೆಟ್‍ಗಳಿಂದ ಮಣಿಸಿತು. ಟೂರ್ನಿಯಲ್ಲಿ ಉಳಿದಏಕೈಕ ಭಾರತೀಯ ನಾಗಿರುವ ಬೋಪಣ್ಣ ತಮ್ಮ 2ನೇ ಸುತ್ತಿನ ಪಂದ್ಯದಲ್ಲಿ ಮೊದಲ ಸೆಟ್​ ಸೋತರೂ, 2 ಮತ್ತು 3ನೇ ಸೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು 2-1ರಲ್ಲಿ ಗೆದ್ದು ಕ್ವಾರ್ಟರ್ ಫೈನಲ್‌​ಗೆ ಎಂಟ್ರಿಕೊಟ್ಟರು.

ಇಂಡೋ-ಕೆನಡಿಯನ್​ ಜೋಡಿ ತಮ್ಮ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಡಚ್‌-ರೊಮೇನಿಯನ್ ಜೋಡಿಯಾದ ಜೀನ್ ಜುಲಿಯನ್ ರೋಜರ್ ಮತ್ತು ಹೋರಿಯಾ ಟೆಕಾವು ಅವರನ್ನು ಸೋಮವಾರ ಎದುರಿಸಲಿದೆ.

ಟೂರ್ನಿಯಲ್ಲಿ ಭಾಗವಹಿಸಿದ್ದ ಮತ್ತಿಬ್ಬರು ಭಾರತೀಯರಾದ ಸುಮಿತ್​ ನಗಲ್​ ಮತ್ತು ದಿವಿಜ್ ಶರಣ್​ ಈಗಾಗಲೇ ಸೋತು ಹೊರಬಿದ್ದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.