ಪ್ಯಾರಿಸ್: ಇದೇ ಮೊದಲ ಬಾರಿಗೆ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲಿ ರಷ್ಯಾದ ಅನಸ್ತಾಸಿಯಾ ಪಾವಲ್ಯುಚೆಂಕೋವಾ ವಿರುದ್ಧ ಗೆದ್ದು ಚೊಚ್ಚಲ ಸಿಂಗಲ್ಸ್ ಕಿರೀಟ ಪಡೆದಿದ್ದಾರೆ.
ಪಿಲಿಫ್ ಚಾಟ್ರಿಯರ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಕಾಳಗದಲ್ಲಿ ಕ್ರೆಜಿಕೋವಾ 6-1, 2-6 , 6-4ರಲ್ಲಿ ಅನಸ್ತಾಸಿಯಾ ವಿರುದ್ಧ ಗೆಲುವು ಸಾಧಿಸಿದರು. ರಷ್ಯಾದ ಆಟಗಾರ್ತಿಗೂ ಕೂಡ ಇದು ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿತ್ತು. ಮೊದಲ ಸೆಟ್ ಕಳೆದುಕೊಂಡರೂ 2ನೇ ಸೆಟ್ನಲ್ಲಿ ತಿರುಗಿಬಿದ್ದಿದ್ದ ಅವರು ಮೂರನೇ ಸೆಟ್ನಲ್ಲಿ 25 ವರ್ಷದ ಕ್ರೆಜಿಕೋವಾ ಎದುರು ಮಂಡಿಯೂರಿದರು.
ಇನ್ನು ಡಬಲ್ಸ್ ಮತ್ತು ಮಿಶ್ರ ಡಬಲ್ಸ್ನಲ್ಲಿ ಒಟ್ಟು 3 ಗ್ರ್ಯಾಂಡ್ಸ್ಲಾಮ್ ಗೆದ್ದಿದ್ದ ಕ್ರೆಜಿಕೋವಾ ಫ್ರೆಂಚ್ ಓಪನ್ ಸಿಂಗಲ್ಸ್ನಲ್ಲಿ ಪ್ರಶಸ್ತಿ ಗೆದ್ದ 2ನೇ ಜೆಕ್ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದರು. ಇವರಿಗೂ ಮುನ್ನ ಹನ ಮಂಡ್ಲಿಕೋವಾ ರೋಲ್ಯಾಂಡ್ ಗ್ಯಾರೋಸ್ನಲ್ಲಿ ಟ್ರೋಫಿ ಹಿಡಿದಿದ್ದರು. ಒಟ್ಟಾರೆ ಇದು ಜೆಕ್ ಗಣರಾಜ್ಯಕ್ಕೆ ಸಿಕ್ಕ 8ನೇ ಗ್ರ್ಯಾಂಡ್ಸ್ಲಾಮ್ ಕಿರೀಟ ಇದಾಗಿದೆ.
ಇನ್ನು ಕಳೆದ 6 ವರ್ಷಗಳಿಂದ ಫ್ರೆಂಚ್ ಓಪನ್ನ ಮಹಿಳಾ ಸಿಂಗಲ್ಸ್ನಲ್ಲಿ 6 ವಿಭಿನ್ನ ಚಾಂಪಿಯನ್ಸ್ ಗೆದ್ದಂತಾಗಿದೆ. ಯಾರೊಬ್ಬರು ಟೈಟಲ್ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಗಾರ್ಬೈನ್ ಮುಗುರುಜಾ(2016) ಜೆಲೆನಾ ಆಸ್ಟಾಪೆಂಕೊ(2017 ಸಿಮೋನಾ ಹ್ಯಾಲೆಪ್(2018) ಆಶ್ಲೇ ಬಾರ್ಟಿ(2019) ಇಗಾ ಸ್ವಿಯೆಟೆಕ್(2020) ಈ ಹಿಂದಿನ 5 ವರ್ಷಗಳಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದರು.
ಇದನ್ನು ಓದಿ:French Open: ಮಿಕ್ಸಡ್ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡ ಡೆಸಿರೆ ಕ್ರಾಚಿಕ್- ಸಾಲಿಸ್ಬರಿ ಜೋಡಿ