ಮೆಲ್ಬೋರ್ನ್: 2021ರ ಫೆಬ್ರವರಿ 8 ರಿಂದ 21ರವರೆಗೆ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಭಾಗವಹಿಸಲುವ ಆಟಗಾರರು ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಅವಧಿ ಪೂರೈಸಬೇಕು ಎಂದು ವಿಕ್ಟೋರಿಯನ್ ರಾಜ್ಯ ಸರ್ಕಾರ ದೃಢಪಡಿಸಿದೆ.
ಮುಖ್ಯ ಆರೋಗ್ಯ ಅಧಿಕಾರಿಗಳು ಕ್ವಾರಂಟೈನ್ ನಿಯಮವನ್ನು ಅನುಮೋದಿಸಿದ್ದಾರೆ. ಎಲ್ಲಾ ಆಟಗಾರರ ಮತ್ತು ಇತರೆ ಸದಸ್ಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಕೋವಿಡ್-19 ಸುರಕ್ಷಿತ ಯೋಜನೆಯನ್ನು ಅಂತಿಮಗೊಳಿಸಲು ಟೆನ್ನಿಸ್ ಆಸ್ಟ್ರೇಲಿಯಾದೊಂದಿಗೆ ಕೆಲಸ ಮಾಡಲಿದೆ ಎಂದು ಹೇಳಿದೆ.
ಓದಿ: ವರ್ಷದ ಮೊದಲ ಟೆನ್ನಿಸ್ ಗ್ರ್ಯಾಂಡ್ಸ್ಲಾಮ್: ಆಸ್ಟ್ರೇಲಿಯಾ ಓಪನ್ಗೆ ಡೇಟ್ ಫಿಕ್ಸ್
ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಆಟಗಾರರು ಮತ್ತು ಅವರ ತಂಡಗಳನ್ನು ಪರೀಕ್ಷಿಸಲಾಗುವುದು. ಅಲ್ಲದೆ ಕ್ವಾರಂಟೈನ್ ಅವಧಿಯಲ್ಲಿ ಕನಿಷ್ಠ ಐದು ಬಾರಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಒಂದು ವೇಳೆ ಯಾರಿಗಾದರೂ ಸೋಂಕು ತಗುಲಿರುವುದು ಪತ್ತೆಯಾದರೆ, ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ಸೂಚನೆಯವರೆಗೂ ಅವರು ಕ್ವಾರಂಟೈನ್ನಲ್ಲೇ ಇರಬೇಕಾಗುತ್ತದೆ ಎಂದು ಹೇಳಿದೆ.