ಟುರಿನ್: ವಿಶ್ವದ ನಂ.1 ಸರ್ಬಿಯಾದ ನೊವಾಕ್ ಜೊಕೊವಿಕ್ (Novak Djokovic) ಅವರಿಗೆ ಸೋಲುಣಿಸಿದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ (Alexander Zverev) ಅವರು ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಪ್ರಶಸ್ತಿಗಾಗಿ ರಷ್ಯಾದ ಮೆಡ್ವೆಡೆವ್ ವಿರುದ್ದ ಜ್ವೆರೆವ್ ಪೈಪೋಟಿ ನಡೆಸಲಿದ್ದಾರೆ.
ಸೆಮಿಫೈನಲ್ನಲ್ಲಿ ಮೂರು ಸೆಟ್‌ಗಳ ಹಣಾಹಣಿಯಲ್ಲಿ ಜ್ವೆರೆವ್, 7-6(4), 4-6, 6-3 ಸೆಟ್‌ಗಳ ಅಂತರದಿಂದ ಜೊಕೊವಿಕ್ರನ್ನು ಮಣಿಸಿದರು. ಆಕರ್ಷಕ ಆಟ ಪ್ರದರ್ಶಿಸಿದ 2020ರ ಟೋಕಿಯೊ ಒಲಿಂಪಿಕ್ಸ್ (Tokyo Olympics 2020) ಚಿನ್ನದ ಪದಕ ವಿಜೇತ ಅಲೆಕ್ಸಾಂಡರ್ ಜ್ವೆರೆವ್, ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರನಿಗೆ ಸೋಲಿನ ಆಘಾತ ನೀಡಿದರು. ಈ ಹಿಂದೆ 2018ರ ಟೂರ್ನಿಯ ಫಿನಾಲೆಯಲ್ಲೂ ಕೂಡ ಜ್ವೆರೆವ್ ಮೇಲುಗೈ ಸಾಧಿಸಿದ್ದರು. ಸುಮಾರು 2 ಗಂಟೆ 29 ನಿಮಿಷಗಳ ಕಾದಾಟವು ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆ ನೀಡಿತು.
-
A match to remember for @AlexZverev.
— ATP Tour (@atptour) November 20, 2021 " class="align-text-top noRightClick twitterSection" data="
That was some battle!#NittoATPFinals pic.twitter.com/GmpDMzcNQ6
">A match to remember for @AlexZverev.
— ATP Tour (@atptour) November 20, 2021
That was some battle!#NittoATPFinals pic.twitter.com/GmpDMzcNQ6A match to remember for @AlexZverev.
— ATP Tour (@atptour) November 20, 2021
That was some battle!#NittoATPFinals pic.twitter.com/GmpDMzcNQ6
24 ವರ್ಷ ವಯಸ್ಸಿನ ಜ್ವೆರೆವ್, ಪಂದ್ಯದಲ್ಲಿ 35 ವಿನ್ನರ್ಸ್ಗಳನ್ನು ಬಾರಿಸಿದರು. ಅಲ್ಲದೆ, ಈ ಗೆಲುವಿನೊಂದಿಗೆ ಜೊಕೊವಿಕ್ ವಿರುದ್ಧದ ಯುಎಸ್ ಓಪನ್ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಂಡರು. ನೊವಾಕ್ ವಿರುದ್ಧ ATP ಗೆಲುವಿನ ಬಲಾಬಲವನ್ನು 4-7ಕ್ಕೆ ಸುಧಾರಿಸಿಕೊಂಡಿದ್ದಾರೆ. ಎಟಿಪಿ ಫೈನಲ್ಸ್ ಪ್ರಶಸ್ತಿಗಾಗಿ ರಷ್ಯಾದ ಮೆಡ್ವೆಡೆವ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ನಡುವೆ ಹೋರಾಟ ನಡೆಯಲಿದೆ.
ಇದನ್ನೂ ಓದಿ: IND vs NZ 3rd T20I: ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾಗೆ ಕ್ಲೀನ್‌ಸ್ವೀಪ್ ಗುರಿ