ETV Bharat / sports

ಆಸ್ಟ್ರೇಲಿಯನ್​ ಓಪನ್​: ಅರ್ಹತಾ ಸುತ್ತಿನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಅಂಕಿತಾ - ಆಸ್ಟ್ರೇಲಿಯನ್​ ಓಪನ್ 2021

ಅಂಕಿತಾ ಇಂದು ದುಬೈನಲ್ಲಿ ನಡೆದ 2ನೇ ಸುತ್ತಿನ ಪಂದ್ಯದಲ್ಲಿ 6-1,2-6, 6-3ರ ಮೂರು ಸೆಟ್​ಗಳ ಪಂದ್ಯದಲ್ಲಿ ಉಕ್ರೇನ್​ನ 118ರ ಶ್ರೇಯಾಂಕದ ಕತ್ರಿನಾ ಜವಾತ್ಸಕಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಂತಿಮ ಹಂತಕ್ಕೆ ಪ್ರವೇಶಿಸಿದ್ದಾರೆ.

ಆಸ್ಟ್ರೇಲಿಯನ್​ ಓಪನ್
ಅಂಕಿತಾ ರೈನಾ
author img

By

Published : Jan 12, 2021, 5:02 PM IST

ಮೆಲ್ಬೋರ್ನ್​: ಆಸ್ಟ್ರೇಲಿಯಾ ಓಪನ್​ನ ಕ್ವಾಲಿಫೈಯರ್​​ನಲ್ಲಿ ಭಾರತ ತಂಡದ ಮಹಿಳಾ ವಿಭಾಗದ ಅಗ್ರ ಶ್ರೇಯಾಂಕದ ಆಟಗಾರ್ತಿ ಅಂಕಿತಾ ರೈನಾ ಫೈನಲ್​ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಅಂಕಿತಾ ಇಂದು ದುಬೈನಲ್ಲಿ ನಡೆದ 2ನೇ ಸುತ್ತಿನ ಪಂದ್ಯದಲ್ಲಿ 6-1,2-6, 6-3ರ ಮೂರು ಸೆಟ್​ಗಳ ಪಂದ್ಯದಲ್ಲಿ ಉಕ್ರೇನ್​ನ 118ರ ಶ್ರೇಯಾಂಕದ ಕತ್ರಿನಾ ಜವಾತ್ಸಕಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಂತಿಮ ಹಂತಕ್ಕೆ ಪ್ರವೇಶಿಸಿದ್ದಾರೆ.

ಎರಡು ಗಂಟೆ 20 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅಂಕಿತಾ ಪ್ರಬಲ ಹೋರಾಟದ ನಡುವೆ ಗೆಲುವು ಪಡೆಯುವಲ್ಲಿ ಯಶಸ್ವಿಯಾಗಿದ್ದು, ತಮ್ಮ ಚೊಚ್ಚಲ ಗ್ರ್ಯಾಂಡ್​ಸ್ಲಾಮ್​ಗೆ ಅರ್ಹತೆ ಪಡೆಯಲು ಕೇವಲ ಒಂದು ಗೆಲುವಿನ ಅವಶ್ಯಕತೆಯಿದೆ.

ಭಾರತ ಟೆನ್ನಿಸ್ ಇತಿಹಾಸದಲ್ಲಿ ನಿರುಪಮಾ ವಿದ್ಯನಾಥನ್​ ಮತ್ತು ಸಾನಿಯಾ ಮಿರ್ಜಾ ಮಾತ್ರ ಮಹಿಳೆಯರ ಗ್ರ್ಯಾಂಡ್​ಸ್ಲಾಮ್​ನ ಸಿಂಗಲ್ಸ್​ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ.

ಆದರೆ ದೋಹಾದಲ್ಲಿ ನಡೆದ ಪುರುಷರ ವಿಭಾಗದಲ್ಲಿ ರಾಮ್​ಕುಮಾರ್​ 2ನೇ ಸುತ್ತಿನ ಪಂದ್ಯದಲ್ಲಿ 3-6, 2-6ರಲ್ಲಿ ಚೀನಾದ​ ತೈಪೆಯ ತಂಗ್​ ಲಿನ್ ವು ವಿರುದ್ಧ ಸೋಲು ಕಂಡು ನಿರಾಶೆ ಅನುಭವಿಸಿದರು.

ಇದನ್ನು ಓದಿ:ಡೆಲ್ರೆ ಬೀಚ್ ಓಪನ್.. ಸೆಮೀಸ್​ ತಲುಪಿದ ಕ್ರಿಶ್ಚಿಯನ್ ಹ್ಯಾರಿಸನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.