ETV Bharat / sports

ಕೂದಲೆಳೆ ಅಂತರದಲ್ಲಿ ಚೊಚ್ಚಲ ಗ್ರ್ಯಾಂಡ್​ಸ್ಲಾಮ್ ಪ್ರವೇಶ ತಪ್ಪಿಸಿಕೊಂಡ ಅಂಕಿತಾ ರೈನಾ

ದುಬೈನಲ್ಲಿ ಬುಧವಾರ ನಡೆದ ಅರ್ಹತಾ ಟೂರ್ನಿಯ ಮೂರನೇ ಹಾಗೂ ಫೈನಲ್​ ಪಂದ್ಯದಲ್ಲಿ ಅಂಕಿತಾ 2-6, 6-3, 1-6ರಲ್ಲಿ ಸರ್ಬಿಯಾದ ಓಲ್ಗಾ ಡ್ಯಾನಿಲೋವಿಕ್ ವಿರುದ್ಧ ಸೋಲು ಕಾಣುವ ಮೂಲಕ ಚೊಚ್ಚಲ ಗ್ರ್ಯಾಂಡ್​ಸ್ಲಾಮ್​ ಪ್ರವೇಶ ತಪ್ಪಿಸಿಕೊಂಡಿದ್ದಾರೆ. ಇದು ಅಂಕಿತಾ ಅವರ 6ನೇ ಗ್ರ್ಯಾಂಡ್​ಸ್ಲಾಮ್​ ಟೂರ್ನಿಗೆ ನಡೆಸಿದ 6ನೇ ಪ್ರಯತ್ನವಾಗಿತ್ತು.

ಗ್ರ್ಯಾಂಡ್​ಸ್ಲಾಮ್  ಅರ್ಹತಾ ಟೂರ್ನಿ
ಅಂಕಿತಾ ರೈನಾಗೆ ಸೋಲು
author img

By

Published : Jan 13, 2021, 5:05 PM IST

ಮೆಲ್ಬೋರ್ನ್​: ಭಾರತದ ಮಹಿಳಾ ಸಿಂಗಲ್ಸ್​ ಆಟಗಾರ್ತಿ ಗ್ರ್ಯಾಂಡ್​​​ಸ್ಲಾಮ್​ ಪ್ರಮುಖ ಸುತ್ತಿಗೆ ತೇರ್ಗಡೆಯಾಗುವುದಲ್ಲಿ ಮತ್ತೆ ಎಡವಿದ್ದಾರೆ. ಆಸ್ಟ್ರೇಲಿಯನ್ ಓಪನ್​ ಅರ್ಹತಾ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸರ್ಬಿಯನ್ ಆಟಗಾರ್ತಿ ವಿರುದ್ಧ ಸೋಲು ಕಾಣುವ ಮೂಲಕ ನಿರಾಶೆ ಅನುಭವಿಸಿದ್ದಾರೆ.

ದುಬೈನಲ್ಲಿ ಬುಧವಾರ ನಡೆದ ಅರ್ಹತಾ ಟೂರ್ನಿಯ ಮೂರನೇ ಹಾಗೂ ಫೈನಲ್​ ಪಂದ್ಯದಲ್ಲಿ ಅಂಕಿತಾ 2-6, 6-3, 1-6ರಲ್ಲಿ ಸರ್ಬಿಯಾದ ಓಲ್ಗಾ ಡ್ಯಾನಿಲೋವಿಕ್ ವಿರುದ್ಧ ಸೋಲು ಕಾಣುವ ಮೂಲಕ ಚೊಚ್ಚಲ ಗ್ರ್ಯಾಂಡ್​ಸ್ಲಾಮ್​ ಪ್ರವೇಶ ತಪ್ಪಿಸಿಕೊಂಡಿದ್ದಾರೆ. ಇದು ಅಂಕಿತಾ ಅವರ 6ನೇ ಗ್ರ್ಯಾಂಡ್​ಸ್ಲಾಮ್​ ಟೂರ್ನಿಗೆ ನಡೆಸಿದ 6ನೇ ಪ್ರಯತ್ನವಾಗಿತ್ತು.

ಇದನ್ನು ಓದಿ:ಚಿರಾಗ್​​-ಸಾತ್ವಿಕ್ ಶುಭಾರಂಭ: ಅರ್ಧ ಪಂದ್ಯದಲ್ಲೇ ಹೊರಬಂದ ಕಶ್ಯಪ್​

ಇನ್ನು ಅಂಕಿತಾ ಅವರ ಸೋಲಿನೊಂದಿಗೆ ಆಸ್ಟ್ರೇಲಿಯಾ ಓಪನ್​ನ ಸಿಂಗಲ್ಸ್​ನಲ್ಲಿ ಸುಮಿತ್​ ನಗಾಲ್ ಏಕಮಾತ್ರ ಆಟಗಾರನಾಗಿ ಸ್ಪರ್ಧಿಸಲಿದ್ದಾರೆ. ನಗಾಲ್​ ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಆಸ್ಟ್ರೇಲಿಯನ್ ಓಪನ್ ಪ್ರವೇಶ ಪಡೆದಿದ್ದಾರೆ.

ಇದಕ್ಕೂ ಮುನ್ನ ಸಿಂಗಲ್ಸ್​ನಲ್ಲಿ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ್ದ ಭಾರತದ ರಾಮ್​ಕುಮಾರ್​ ರಾಮನಾಥನ್ ಮೊದಲ ಸುತ್ತಿನಲ್ಲಿ ಹಾಗೂ ಪ್ರಜ್ನೇಶ್ ಗುಣೇಶ್ವರನ್​ ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.