ETV Bharat / sports

17 ವರ್ಷದ ಕೊಕೊ ಗೌಫ್​ ಮುಡಿಗೆ ಎಮಿಲಾ -ರೊಮಗ್ನಾ ಓಪನ್ ಕಿರೀಟ

ಶನಿವಾರ ಪಾರ್ಮಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ 30ನೇ ಶ್ರೇಯಾಂಕದ ಗೌಫ್​ 6-1, 6-3ರಲ್ಲಿ 48ನೇ ಶ್ರೇಯಾಂಕದ ಚೀನಾ ಆಟಗಾರ್ತಿಯ ವಿರುದ್ಧ ಪ್ರಾಬಲ್ಯಯುತ ಜಯ ಸಾಧಿಸಿ ವೃತ್ತಿ ಜೀವನದ ಮೊದಲ ಪ್ರಶಸ್ತಿ ಜಯಿಸಿದರು.

author img

By

Published : May 22, 2021, 10:44 PM IST

ಕೊಕೊ ಗೌಫ್
ಕೊಕೊ ಗೌಫ್

ಪಾರ್ಮಾ(ಇಟಲಿ): ಅಮೆರಿಕದ ಉದಯೋನ್ಮುಖ ಟೆನಿಸ್​ ಆಟಗಾರ್ತಿ ಕೊಕೊ ಗೌಫ್​, ಚೀನಾದ ವಾಂಗ್ ಕ್ವಿಯಾಂಗ್​ ಅವರನ್ನು ಮಣಿಸಿ ಎಮಿಲಾ-ರೊಮಿಗ್ನಾ ಓಪನ್​ ಸಿಂಗಲ್ಸ್ ಓಪನ್​ ಗೆದ್ದಿದ್ದಾರೆ.

ಶನಿವಾರ ಪಾರ್ಮಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ 30ನೇ ಶ್ರೇಯಾಂಕದ ಗೌಫ್​ 6-1, 6-3ರಲ್ಲಿ 48ನೇ ಶ್ರೇಯಾಂಕದ ಚೀನಾ ಆಟಗಾರ್ತಿಯ ವಿರುದ್ಧ ಪ್ರಾಬಲ್ಯಯುತ ಜಯ ಸಾಧಿಸಿ ವೃತ್ತಿ ಜೀವನದ 2ನೇ ಡಬ್ಲ್ಯೂಟಿಎ ಪ್ರಶಸ್ತಿ ಜಯಿಸಿದರು.

ಟೂರ್ನಿಯಲ್ಲಿ 17 ವರ್ಷದ ಯುವ ಆಟಗಾರ್ತಿ ಕೇವಲ ಒಂದೇ ಒಂದು ಸೆಟ್​ನಲ್ಲಿ ಮಾತ್ರ ಸೋಲು ಕಂಡಿದ್ದರು. ಕಳೆದ ವಾರ ಅಂತ್ಯಗೊಂಡಿದ್ದ ಇಟಲಿಯನ್ ಓಪನ್​​ನಲ್ಲಿ ನಾಲ್ಕರ ಘಟ್ಟದಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದ್ದರು.

ಇನ್ನು ಕೊಕೊ ಪ್ರಸ್ತುತ ಟೂರ್​ನಲ್ಲಿ ಆಡಿರುವ 26 ಪಂದ್ಯಗಳಲ್ಲಿ 20ನೇ ಜಯ ಸಾಧಿಸಿದಂತಾಗಿದೆ. ಅವರು 2019 ಮತ್ತು 2020ರಲ್ಲಿ ಒಟ್ಟು 21 ಪಂದ್ಯಗಳಲ್ಲಿ ಜಯಿಸಿದರು.

ಕೊಕೊ ಸಿಂಗಲ್ಸ್​ನಲ್ಲಷ್ಟೇ ಅಲ್ಲದೆ ಡಬಲ್ಸ್​ನಲ್ಲೂ ಕಾರ್ಟಿ ಮೆಗ್​ನಲ್ಲಿ ಜೊತೆಗೂಡಿ ಸ್ಲೊವಿನಿಯಾದ ಆ್ಯಂಡ್ರೇಜಾ ಕ್ಲೆಪಾಕ್​ ಮತ್ತು ಕ್ರೊವೇಷ್ಯಾದ ಡಾರಿಜಾ ಜುರಕ್ ವಿರುದ್ಧ 6-3, 6-2ರಲ್ಲಿ ಗೆಲುವು ಸಾಧಿಸಿದರು.

ಇದನ್ನು ಓದಿ:ಕೊಹ್ಲಿ₹ 6.7 ಲಕ್ಷ ನೆರವು ನೀಡಿದ್ದ ಮಾಜಿ ಮಹಿಳಾ ಕ್ರಿಕೆಟರ್​ ತಾಯಿ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.