ETV Bharat / sports

IND vs NZ: ಜೈಪುರ್​ ತಲುಪಿದ ಕಿವೀಸ್​​​​, ಇಂಡಿಯಾ ಪ್ಲೇಯರ್ಸ್​; ನ.14ರಿಂದ ಟಿಕೆಟ್​ ಮಾರಾಟ - ಭಾರತ-ನ್ಯೂಜಿಲ್ಯಾಂಡ್

ನವೆಂಬರ್​ 17ರಿಂದ ಭಾರತ-ನ್ಯೂಜಿಲ್ಯಾಂಡ್ (IND vs NZ) ತಂಡಗಳ ನಡುವೆ ಟಿ20 ಸರಣಿ(T20 Series) ಆರಂಭಗೊಳ್ಳಲಿದ್ದು, ಅದಕ್ಕಾಗಿ ಉಭಯ ತಂಡದ ಪ್ಲೇಯರ್ಸ್​​ ಜೈಪುರ್ ಮೈದಾನಕ್ಕೆ ಆಗಮಿಸಲು ಶುರು ಮಾಡಿದ್ದಾರೆ.

Team india
Team india
author img

By

Published : Nov 11, 2021, 8:20 PM IST

ಜೈಪುರ್​: ಐಸಿಸಿ ಟಿ20 ವಿಶ್ವಕಪ್​ ಮುಕ್ತಾಯವಾಗುತ್ತಿದ್ದಂತೆ ಭಾರತ-ನ್ಯೂಜಿಲ್ಯಾಂಡ್ (IND vs NZ 2021) ತಂಡಗಳು ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಲಿದ್ದು, ಈ ಕಾರಣದಿಂದಾಗಿ ಈಗಾಗಲೇ ಉಭಯ ತಂಡಗಳ ಕೆಲ ಪ್ಲೇಯರ್ಸ್​​​ ಜೈಪುರ್​ಗೆ ಬಂದಿಳಿದಿದ್ದಾರೆ.

ಜೈಪುರ್​​ದ ಸವಾಯಿ ಮಾನ್ಸಿಂಗ್​​ (SMS Stadium Jaipur) ​​ ಮೈದಾನದಲ್ಲಿ ನವೆಂಬರ್​ 17ರಂದು ಮೊದಲ ಟಿ20 ಪಂದ್ಯ ನಡೆಯಲಿದೆ. ವಿಶ್ವಕಪ್​​ನಲ್ಲಿ ನ್ಯೂಜಿಲ್ಯಾಂಡ್ ತಂಡ ಈಗಾಗಲೇ ಫೈನಲ್​ ಪ್ರವೇಶ ಮಾಡಿದ್ದು, ತಂಡದಲ್ಲಿರುವ ಪ್ಲೇಯರ್ಸ್ ಹೊರತುಪಡಿಸಿ ಉಳಿದ ಎಲ್ಲ ಆಟಗಾರರು​​ ಜೈಪುರ್ ತಲುಪಿದ್ದಾರೆ.

ಇದನ್ನೂ ಓದಿ: IND vs NZ: ಮೊದಲ ಟೆಸ್ಟ್​​ ಪಂದ್ಯದ ನಾಯಕತ್ವ ಜವಾಬ್ದಾರಿ ರಹಾನೆ ಹೆಗಲಿಗೆ

8 ವರ್ಷಗಳ ನಂತರ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಜೈಪುರ್​ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಮೈದಾನ ನಡೆಯುತ್ತಿದ್ದು, ಕೇಂದ್ರ ಸರ್ಕಾರದಿಂದ ಅಭಿಮಾನಿಗಳು ಮೈದಾನಕ್ಕೆ ಆಗಮಿಸಿ ಪಂದ್ಯ ವೀಕ್ಷಣೆ ಮಾಡಲು ಅನುಮತಿ ಪಡೆದುಕೊಂಡ ಬಳಿಕ ನವೆಂಬರ್​​ 14ರಿಂದ ಟಿಕೆಟ್ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಟಿಕೆಟ್​ ನೀಡಲು ಸವಾಯಿ ಮಾನ್ಸಿಂಗ್ ಕ್ರೀಡಾಂಗಣದ ಹೊರಗೆ ಕೌಂಟರ್​ ಸ್ಥಾಪನೆ ಮಾಡಲು ನಿರ್ಧರಿಸಲಾಗಿದ್ದು, ಪಂದ್ಯ ವೀಕ್ಷಣೆ ಮಾಡಲು ಟಿಕೆಟ್​ಗಳ ಬೆಲೆಯಲ್ಲಿ ಶೇ. 30ರಿಂದ 100ಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ.

ಪ್ರಮುಖವಾಗಿ ಯಜುವೇಂದ್ರ ಚಹಾಲ್​, ಋತುರಾಜ್ ಗಾಯಕ್ವಾಡ್ ಈಗಾಗಲೇ ಜೈಪುರ್ ತಲುಪಿದ್ದು, ಕೋಚ್​ ರಾಹುಲ್​ ದ್ರಾವಿಡ್​ ಸೇರಿದಂತೆ ಇತರೆ ಆಟಗಾರರು ಶುಕ್ರವಾರ ಜೈಪುರಕ್ಕೆ ಬಂದಿಳಿದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಕ್ರಿಕೆಟ್​ ಸಂಸ್ಥೆಯ ಕಾರ್ಯದರ್ಶಿ ಮಹೇಂದ್ರ ಶರ್ಮಾ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.