ETV Bharat / sports

ಟಿ20 ವಿಶ್ವಕಪ್.. ಕೊಹ್ಲಿ-ಧೋನಿ-ಶಾಸ್ತ್ರಿ ಸುದೀರ್ಘ ಚರ್ಚೆ.. ಒತ್ತಡದ ನಡುವೆ ತಂತ್ರಗಾರಿಕೆ..

ನೆಟ್​​ ಪ್ರಾಕ್ಟಿಸ್​​​ನಲ್ಲಿ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್​ನಲ್ಲಿ ಬೆವರು ಹರಿಸಿದರೆ, ಇತ್ತ ಬೌಲಿಂಗ್​​ನಲ್ಲಿ ಬೂಮ್ರಾ ಹಾಗೂ ಶಮಿ ವಿಶ್ರಾಂತಿಗಾಗಿ ನೆಟ್​​ನಲ್ಲಿ ಭಾಗಿಯಾಗಿರಲಿಲ್ಲ..

t20-wc-dhoni-kohli-and-shastri-discuss-strategy-ahead-of-must-win-game-against-afghanistan
ಟಿ20 ವಿಶ್ವಕಪ್: ಕೊಹ್ಲಿ-ಧೋನಿ-ಶಾಸ್ತ್ರಿ ಸುಧೀರ್ಘ ಚರ್ಚೆ
author img

By

Published : Nov 3, 2021, 11:31 AM IST

ದುಬೈ : ಟಿ-20 ವಿಶ್ವಕಪ್ ಟೂರ್ನಿಯ ಸೂಪರ್ 12ಬಿ ಗುಂಪಿನ ಇಂದಿನ ಪಂದ್ಯದಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ಸೆಣೆಸಾಡಲಿವೆ. ಎರಡೂ ತಂಡಗಳಿಗೂ ನಿರ್ಣಾಯಕ ಪಂದ್ಯ ಇದಾಗಿದ್ದು, ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಈ ನಡುವೆ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ ಮತ್ತು ಮೆಂಟರ್ ಧೋನಿ ಸಂಭಾಷಣೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಇದಕ್ಕೂ ಮೊದಲು ಧೋನಿ ಹಾಗೂ ಕೊಹ್ಲಿ ನಡುವೆ ಸುದೀರ್ಘ ಮಾತುಕತೆ ನಡೆದಿದೆ.

ತರಬೇತಿ ಸಮಯದ ಬಳಿಕ ಸೂರ್ಯಕುಮಾರ್ ಯಾದವ್ ಹಾಗೂ ಕೊಹ್ಲಿ ನಡುವೆ ದೀರ್ಘ ಮಾತುಕತೆ ನಡೆದಿದೆ. ಇದಾದ ಬಳಿಕ ಧೋನಿ ನಡುವೆಯೂ ಕೊಹ್ಲಿ ಸಂವಹನ ನಡೆಸಿದ್ದಾರೆ. ಟ್ರೈನಿಂಗ್ ಸೆಷನ್ ವೇಳೆ ಮೆಂಟರ್ ಧೋನಿ ಹಾಗೂ ಕೋಚ್ ರವಿಶಾಸ್ತ್ರಿ ತಂಡದ ಕುರಿತು ಚರ್ಚೆ ನಡೆಸಿದ್ದಾರೆ. ಬ್ಯಾಟ್ಸ್​ಮನ್​ಗಳ ಕುರಿತಂತೆ ಹಾಗೂ ಸ್ಕಿಲ್ಸ್​ ಕುರಿತ ಮಾತುಕತೆ ನಡೆದಿದೆ ಎನ್ನಲಾಗಿದೆ.

ನೆಟ್​​ ಪ್ರಾಕ್ಟಿಸ್​​​ನಲ್ಲಿ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್​ನಲ್ಲಿ ಬೆವರು ಹರಿಸಿದರೆ, ಇತ್ತ ಬೌಲಿಂಗ್​​ನಲ್ಲಿ ಬೂಮ್ರಾ ಹಾಗೂ ಶಮಿ ವಿಶ್ರಾಂತಿಗಾಗಿ ನೆಟ್​​ನಲ್ಲಿ ಭಾಗಿಯಾಗಿರಲಿಲ್ಲ.

ಬೆನ್ನು ಸೆಳೆತದಿಂದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹೊರ ಗುಳಿದಿದ್ದ ಸೂರ್ಯಕುಮಾರ್ ಯಾದವ್ ನೆಟ್​​ನಲ್ಲಿ ಕಾಣಿಸಿಕೊಂಡಿದ್ದರು. ತಂಡದ ಬಹುತೇಕರು ನೆಟ್​​ನಲ್ಲಿ ಕಾಣಿಸಿಕೊಂಡಿದ್ದು, ಇಂದಿನ ಪಂದ್ಯದ ಆಡುವ 11ರ ಬಳಗದಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2021 ಪ್ರಕಟ.. ನೀರಜ್ ಚೋಪ್ರಾಗೆ ಖೇಲ್​ ರತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.