ETV Bharat / sports

T20 ವಿಶ್ವಕಪ್​​: ಅಗ್ರಸ್ಥಾನಕ್ಕಾಗಿ ಇಂಗ್ಲೆಂಡ್​​-ಅಸೀಸ್​​ ಫೈಟ್​, ಲಂಕಾ ಚಾಲೆಂಜ್​ಗೆ ದ.ಆಫ್ರಿಕಾ ಸಿದ್ಧ

author img

By

Published : Oct 30, 2021, 5:41 AM IST

ಟಿ-20 ವಿಶ್ವಕಪ್​ ಹಣಾಹಣಿಯಲ್ಲಿಂದು ಇಂಗ್ಲೆಂಡ್​-ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ-ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ.

ICC T20 World cup
ICC T20 World cup

ದುಬೈ: ಐಸಿಸಿ ಟಿ-20 ವಿಶ್ವಕಪ್​​ನಲ್ಲಿಂದು ಎರಡು ಪಂದ್ಯಗಳು ನಡೆಯಲಿದ್ದು, ಅಗ್ರಸ್ಥಾನಕ್ಕಾಗಿ ಇಂಗ್ಲೆಂಡ್​​-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ ಸವಾಲು ಎದುರಿಸಲು ದಕ್ಷಿಣ ಆಫ್ರಿಕಾ ಸಜ್ಜಾಗಿದೆ.

ICC T20 World cup
ದಕ್ಷಿಣ ಆಫ್ರಿಕಾ ಪಡೆ

ಮಧ್ಯಾಹ್ನ 3:30ಕ್ಕೆ ಶಾರ್ಜಾ ಮೈದಾನದಲ್ಲಿ ದಕ್ಷಿಣ ಆಫ್ರಿಕಾ-ಶ್ರೀಲಂಕಾ ತಂಡ ಮುಖಾಮುಖಿಯಾಗುತ್ತಿದ್ದು, ಉಭಯ ತಂಡಗಳು ಈಗಾಗಲೇ ಆಡಿರುವ ಎರಡು ಪಂದ್ಯಗಳ ಪೈಕಿ ತಲಾ 1ರಲ್ಲಿ ಗೆಲುವು ಸಾಧಿಸಿ, ಮತ್ತೊಂದು ಪಂದ್ಯ ಕೈಚೆಲ್ಲಿವೆ. ಸೆಮಿಫೈನಲ್​ ರೇಸ್​​ನಲ್ಲಿ ಉಳಿದುಕೊಳ್ಳಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಉಭಯ ತಂಡಗಳಿಗೆ ಅನಿವಾರ್ಯವಾಗಿದೆ.

ICC T20 World cup
ಶ್ರೀಲಂಕಾ ತಂಡ

ಬಾಂಗ್ಲಾ ವಿರುದ್ಧ ಗೆಲುವು ದಾಖಲು ಮಾಡಿದ್ದ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದು, ದಕ್ಷಿಣ ಆಫ್ರಿಕಾ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು, ತದನಂತರ ವೆಸ್ಟ್​ ಇಂಡೀಸ್ ವಿರುದ್ಧ ಭರ್ಜರಿ ಜಯ ದಾಖಲು ಮಾಡಿದೆ.

ಅಗ್ರಸ್ಥಾನಕ್ಕಾಗಿ ಇಂಗ್ಲೆಂಡ್​-ಆಸ್ಟ್ರೇಲಿಯಾ ಫೈಟ್​

ಗ್ರೂಪ್​​-1ರಲ್ಲಿ ಈಗಾಗಲೇ ತಾವು ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿರುವ ಇಂಗ್ಲೆಂಡ್​​-ಆಸ್ಟ್ರೇಲಿಯಾ ಇದೀಗ ಅಗ್ರಸ್ಥಾನಕ್ಕಾಗಿ ಫೈಟ್ ನಡೆಸಲಿವೆ.

ಉಭಯ ತಂಡಗಳ ನಡುವೆ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ರಾತ್ರಿ 7:30ಕ್ಕೆ ಹೈವೋಲ್ಟೇಜ್​ ಪಂದ್ಯ ನಡೆಯಲಿದ್ದು, ಇಂದಿನ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಸೆಮಿಸ್​ಗೆ ಮತ್ತಷ್ಟು ಹತ್ತಿರವಾಗಲಿದೆ.

ಇಂಗ್ಲೆಂಡ್ ಈಗಾಗಲೇ ವೆಸ್ಟ್​ ಇಂಡಿಸ್​ ಹಾಗೂ ಬಾಂಗ್ಲಾ ವಿರುದ್ಧ ಜಯ ಸಾಧಿಸಿದ್ದು, ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಗೆಲುವಿನ ನಗೆ ಬೀರಿದೆ. ಎರಡು ತಂಡದಲ್ಲಿ ಸ್ಪೋಟಕ ಬ್ಯಾಟರ್ ಹಾಗೂ ಬೌಲಿಂಗ್​ ಪಡೆ ಇದ್ದು, ಹೆಚ್ಚಿನ ಕುತೂಹಲ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.