ದುಬೈ: ಐಸಿಸಿ ಟಿ-20 ವಿಶ್ವಕಪ್ನಲ್ಲಿ ಭಾಗಿಯಾಗಿರುವ ಆಫ್ಘಾನಿಸ್ತಾನದ ಬ್ಯಾಟರ್ ಆಸ್ಗರ್ ಆಫ್ಘಾನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇಂದು ನಮೀಬಿಯಾ ವಿರುದ್ಧ ನಡೆಯಲಿರುವ ಪಂದ್ಯ ಅವರ ವೃತ್ತಿ ಜೀವನದ ಕೊನೆಯ ಪಂದ್ಯವಾಗಲಿದೆ.
33 ವರ್ಷದ ಕ್ರಿಕೆಟರ್ ಅಸ್ಗರ್ ಅಫ್ಗಾನ್ ಇಲ್ಲಿಯವರೆಗೆ 6 ಟೆಸ್ಟ್ ಪಂದ್ಯ, 114 ಅಂತಾರಾಷ್ಟ್ರೀಯ ಏಕದಿನ ಹಾಗೂ 75 ಟಿ-20 ಪಂದ್ಯಗಳಲ್ಲಿ ಭಾಗಿಯಾಗಿದ್ದು, 4,215ರನ್ಗಳಿಕೆ ಮಾಡಿದ್ದಾರೆ. ಜೊತೆಗೆ 115 ಪಂದ್ಯಗಳಲ್ಲಿ ಅಫ್ಘಾನಿಸ್ತಾನ ತಂಡ ಮುನ್ನಡೆಸಿದ್ದಾರೆ
-
Afghanistan’s ex captain Asghar Afghan who holds the highest winning streak as a captain in T20 internationals surpassing Indian legend Ms Dhoni by one extra win, decides to bid farewell with all formats of cricket in Afghanistan’s third match against Namibia at @T20WorldCup.
— Afghanistan Cricket Board (@ACBofficials) October 30, 2021 " class="align-text-top noRightClick twitterSection" data="
1/1 pic.twitter.com/4nxfeoctjj
">Afghanistan’s ex captain Asghar Afghan who holds the highest winning streak as a captain in T20 internationals surpassing Indian legend Ms Dhoni by one extra win, decides to bid farewell with all formats of cricket in Afghanistan’s third match against Namibia at @T20WorldCup.
— Afghanistan Cricket Board (@ACBofficials) October 30, 2021
1/1 pic.twitter.com/4nxfeoctjjAfghanistan’s ex captain Asghar Afghan who holds the highest winning streak as a captain in T20 internationals surpassing Indian legend Ms Dhoni by one extra win, decides to bid farewell with all formats of cricket in Afghanistan’s third match against Namibia at @T20WorldCup.
— Afghanistan Cricket Board (@ACBofficials) October 30, 2021
1/1 pic.twitter.com/4nxfeoctjj
ಅಫ್ಘಾನಿಸ್ತಾನ ಟೆಸ್ಟ್ ತಂಡದ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ಆಟಗಾರ 2018ರಲ್ಲಿ ಇಂಡಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಡೆಬ್ಯು ಮಾಡಿದ್ದರು. 59 ಏಕದಿನ ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ತಂಡ ಮುನ್ನಡೆಸಿದ್ದು, ಇದರಲ್ಲಿ 34 ಗೆಲುವು ಹಾಗೂ 21 ಸೋಲು ಕಂಡಿದೆ. 52 ಟಿ-20 ಪಂದ್ಯಗಳಲ್ಲಿ ನಾಯಕನಾಗಿ 42 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿರಿ: T20 World Cup: ಬಟ್ಲರ್ ಅಬ್ಬರದ ಫಿಫ್ಟಿ... ಕಾಂಗರೂಗಳ ಮೇಲೆ ಇಂಗ್ಲೆಂಡ್ ಸವಾರಿ
ಧೋನಿ ಸಾಧನೆ ಬ್ರೇಕ್ ಮಾಡಿರುವ ಅಸ್ಗರ್
2009ರಲ್ಲಿ(ಏಕದಿನ) ಸ್ಕಾಟ್ಲೆಂಡ್ ವಿರುದ್ಧ ಹಾಗೂ 2010ರಲ್ಲಿ ಐರ್ಲೆಂಡ್(ಟಿ20) ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆಫ್ಘಾನಿಸ್ತಾನದ ನಾಯಕನಾಗಿ ಹೆಚ್ಚಿನ ಟಿ-20 ಪಂದ್ಯಗಳಲ್ಲಿ(42 ಪಂದ್ಯ) ಗೆಲುವು ಸಾಧಿಸಿರುವ ಅಸ್ಗರ್, ಮಹೇಂದ್ರ ಸಿಂಗ್ ಧೋನಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಐಸಿಸಿ ಟಿ-20 ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಆಫ್ಘಾನಿಸ್ತಾನ ಪಾಕ್ ವಿರುದ್ಧ ಸೋಲು ಕಂಡಿದ್ದು, ಸದ್ಯ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.