ಟೋಕಿಯೋ: ಆರೋಗ್ಯ ಮಾಹಿತಿ ಆ್ಯಪ್ನಲ್ಲಿ ತಪ್ಪಾದ ಮಾಹಿತಿ ತೋರಿಸಿದ ಕಾರಣ ಟೋಕಿಯೋ ಒಲಿಂಪಿಕ್ಸ್ನ ಭಾರತೀಯ ಕ್ಯಾಂಪ್ನಲ್ಲಿ ಬುಧವಾರ ಕೋವಿಡ್ ಆತಂಕ ಎದುರಾಗಿತ್ತು. ಆದರೆ, ಈ ಬಗ್ಗೆ ಸಹಾಯಕ ಬಾಣಸಿಗ ಪ್ರೇಮ್ ವರ್ಮಾ ಸ್ಪಷ್ಟನೆ ಕೊಟ್ಟಿದ್ದು, ಇಲ್ಲಿ ಯಾರಲ್ಲೂ ಕೋವಿಡ್ ಪಾಸಿಟಿವ್ ಕಂಡು ಬಂದಿಲ್ಲ. ಯಾರಿಗೂ ರೋಗ ಲಕ್ಷಣಗಳಿಲ್ಲ ಎಂದು ಖಚಿತಪಡಿಸಿದ್ದಾರೆ.
ಓದಿ : ಟೋಕಿಯೋ ಒಲಿಂಪಿಕ್ಸ್: ಮಾಸ್ಕ್ ಕಡ್ಡಾಯ, ಗ್ರೂಪ್ ಫೋಟೋ ನಿಷೇಧ, ಮತ್ತಷ್ಟು...
ಆರೋಗ್ಯ ಮಾಹಿತಿ ಆ್ಯಪ್ ಒಚಾ ( OCCHA) ದಲ್ಲಿ ಮೂವರು ಭಾರತೀಯ ಅಧಿಕಾರಿಗಳಿಗೆ ಕೋವಿಡ್ ರೋಗ ಲಕ್ಷಣಗಳು ಇವೆ ಎಂದು ತೋರಿಸಿತ್ತು. ಆದರೆ, ಇತರ ಯಾವುದೇ ಆ್ಯಪ್ಗಳಲ್ಲಿ ಈ ವರದಿ ಇರಲಿಲ್ಲ. ಈ ಕುರಿತು ಒಲಿಂಪಿಕ್ ಭಾರತೀಯ ಕ್ಯಾಂಪ್ನ ಸಹಾಯಕ ಬಾಣಸಿಗ ಮಿಶನ್ ಪ್ರೇಮ್ ವರ್ಮಾ ಅವರಿಂದ ಭಾರತೀಯ ಒಲಿಂಪಿಕ್ಸ್ ಆಸೋಸಿಯೇಷನ್ ಅಧ್ಯಕ್ಷ ನರೀಂದರ್ ಬಾತ್ರಾ ಮಾಹಿತಿ ಪಡೆದಿದ್ದಾರೆ.
ಭಾರತೀಯ ಕ್ಯಾಂಪ್ನಲ್ಲಿ ಯಾರಲ್ಲೂ ಸೋಂಕು ಅಥವಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಒಚಾ ಆ್ಯಪ್ ಅನ್ನು ಮೊದಲ ಬಾರಿಗೆ ಬಳಸುತ್ತಿರುವವರಿಗೆ ತಪ್ಪು ಮಾಹಿತಿ ತೋರಿಸಿದೆ ಎಂದು ಪ್ರೇಮ್ ವರ್ಮಾ ಸ್ಪಷ್ಟಪಡಿಸಿದ್ದಾರೆ.