ನವದೆಹಲಿ: ಭಾರತಕ್ಕೆ ಹಲವಾರು ಕುಸ್ತಿ ಚಾಂಪಿಯನ್ಶಿಪ್ಗಳಲ್ಲಿ ಪದಕ ತಂಡಕೊಟ್ಟಿರುವ ಕುಸ್ತಿಪಟು ವಿನೇಶ್ ಫೋಗಟ್ ತಮ್ಮನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಪದ್ಮ ಪ್ರಶಸ್ತಿಗಾಗಿ ಇತರೆ ಕ್ರೀಡಾಪಟುಗಳಂತೆ ಕುಸ್ತಿಯಿಂದ ನಾಮ ನಿರ್ದೇಶನ ಮಾಡಿದ್ದ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ರನ್ನು ಪ್ರಶಸ್ತಿಗೆ ಪರಿಗಣಿಸದೇ ಇರುವುದಕ್ಕೆ ಅವರು ಟ್ವಿಟರ್ನಲ್ಲಿ ತಮ್ಮ ಬೇಸರ ಹೊರ ಹಾಕಿದ್ದಾರೆ.
" ಪ್ರತಿ ವರ್ಷ ನಮ್ಮ ಸರ್ಕಾರ ಹಲವಾರು ಕ್ರೀಡಾಪಟುಗಳಿಗೆ ಪ್ರಶಸ್ತಿಗಳನ್ನು ನೀಡುತ್ತದೆ. ಇಂತಹ ಪ್ರಶಸ್ತಿಗಳು ಕ್ರೀಡೆಯಲ್ಲಿ ಹೆಚ್ಚೆಚ್ಚು ಸಾದನೆ ಮಾಡಲು ಉತ್ತೇಜನ ನೀಡುತ್ತವೆ.
ಆದರೆ, ಇತ್ತೀಚಿನ ದಿನಗಳಲ್ಲಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದವ ನಿದರ್ಶನ ಹಾಗೂ ಅರ್ಹತೆಯಿದ್ದರುವ ಪ್ರತಿಭೆಗಳು ಪತಿಬಾರಿಯೂ ಪ್ರಶಸ್ತಿಗಳಿಂದ ಹೊರಗುಳಿಯುವಂತಾಗುತ್ತಿದೆ. 2020ರ ಆವೃತ್ತಿಯಲ್ಲಿ ಘೋಷಿಸಲಾಗಿರುವ ಪಟ್ಟಿಯಲ್ಲೂ ಅದು ಮುಂದುವರಿದಿದ್ದು, ಯಾವುದೇ ಬದಲಾವಣೆಯಿಲ್ಲ ಎಂದು ತಮ್ಮನ್ನು ಪ್ರಶಸ್ತಿಗೆ ಪರಿಗಣಿಸದಿರುವುದಕ್ಕೆ ಫೋಗಟ್ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ್ದಾರೆ. ಪ್ರಶ್ನೆ ಮಾಡಿದ್ದಾರೆ.
-
#Padmashree pic.twitter.com/lAOCjin2tl
— Vinesh Phogat (@Phogat_Vinesh) January 26, 2020 " class="align-text-top noRightClick twitterSection" data="
">#Padmashree pic.twitter.com/lAOCjin2tl
— Vinesh Phogat (@Phogat_Vinesh) January 26, 2020#Padmashree pic.twitter.com/lAOCjin2tl
— Vinesh Phogat (@Phogat_Vinesh) January 26, 2020
"ಈ ಪ್ರಶಸ್ತಿ ಯಾರಿಗೆ ಸಲ್ಲಬೇಕು ಎಂಬುದನ್ನು ಯಾರು ನಿರ್ಧರಿಸುತ್ತಾರೆ? ಅವರು ಪ್ರಸ್ತುತ ಅಥವಾ ಮಾಜಿ ಕ್ರೀಡಾಪಟುಗಳಾಗಿದ್ದಾರಾ? ಆ(ಆಯ್ಕೆ) ಕೆಲಸ ಹೇಗೆ ಆಗುತ್ತದೆ? ಕೊನೆಗೆ, ಇಲ್ಲಿ( ಪ್ರಶಸ್ತಿ ಆಯ್ಕೆ) ಅನ್ಯಾಯವಾಗಿದೆ ಎಂದು ತೋರುತ್ತಿದೆ" ಎಂದು ಫೋಗಟ್ ಟ್ವಿಟರ್ರನ್ನು ಪ್ರಶ್ನೆಗಳ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರಿಗೆ ಭಾನುವಾರ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿರುವವರ ಹೆಸರನ್ನು ಘೋಷಿಸಲಾಗಿತ್ತು. ಹಾಗೆಯೇ ಕ್ರೀಡಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಬಾಕ್ಸರ್ ಮೇರಿಕೋಮ್, ಶೆಟ್ಲರ್ ಪಿವಿ ಸಿಂಧು ಅವರಿಗೆ ಪದ್ಮ ಭೂಷಣ, ಕ್ರಿಕೆಟಿಗ ಜಹೀರ್ ಖಾನ್, ಮಹಿಳಾ ಫುಟ್ಬಾಲ್ ಆಟಗಾರ್ತಿ ಒಯಿನಮ್ ಬೆಂಬೆಮ್ ದೇವಿ , ಹಾಕಿ ಆಟಗಾರ ಎಂಪಿ ಗಣೇಶ್ ಮತ್ತು ರಾಣಿ ರಾಂಪಾಲ್, ಶೂಟರ್ ಜಿತು ರಾಯ್ ಹಾಗೂ ಆರ್ಚರಿಯಲ್ಲಿ ತರುಣ್ ದೀಪ್ ರಾಯ್ ಅವರಿಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.