ETV Bharat / sports

ನಾಲ್ಕು ವರ್ಷಗಳ ಡೋಪಿಂಗ್ ನಿಷೇಧದ ನಂತರ ದೇಶಿ ಸ್ಫರ್ಧೆಗೆ ನರಸಿಂಗ್ ಯಾದವ್ ಕಂಬ್ಯಾಕ್ - 2015 ರ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತ

ಖ್ಯಾತ ಕುಸ್ತಿಪಟು ನರಸಿಂಗ್ ಯಾದವ್ ಅವರು ರಾಷ್ಟ್ರೀಯ ಸ್ಫರ್ಧೆಗೆ ಪುನರಾಗಮನ ಮಾಡಲು ತಯಾರಾಗಿದ್ದು, ಪ್ರತಿಸ್ಪರ್ಧಿ ಸುಶೀಲ್ ಕುಮಾರ್ ಪಂದ್ಯಾವಳಿಯಿಂದ ಹಿಂದೆ ಸರಿದ ಪರಿಣಾಮ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ಗೆಲ್ಲುವ ಪ್ರಮುಖ ಆಟಗಾರನಾಗಿದ್ದಾರೆ.

Wrestler Narsingh Yadav
ನರಸಿಂಗ್ ಯಾದವ್
author img

By

Published : Jan 23, 2021, 11:46 AM IST

ನೋಯ್ಡಾ: 2015 ರ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತ (74 ಕೆಜಿ) ನರಸಿಂಗ್ ಯಾದವ್ ಅವರು ಪುರುಷರ ರಾಷ್ಟ್ರೀಯ ಫ್ರೀಸ್ಟೈಲ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುವ ಮೂಲಕ ನಾಲ್ಕು ವರ್ಷಗಳ ಡೋಪಿಂಗ್ ನಿಷೇಧವನ್ನು ವಿಧಿಸಿದ ನಂತರ ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಸ್ಪರ್ಧೆಗೆ ಸಜ್ಜಾಗಿದ್ದಾರೆ.

ಅನಾಬೊಲಿಕ್ ಸ್ಟೀರಾಯ್ಡ್ ಮೆಥಾಂಡಿನೊನ್‌ ಡೋಪಿಂಗ್ ಆರೋಪದ ಮೇಲೆ 2016 ರ ರಿಯೊ ಒಲಿಂಪಿಕ್ಸ್‌ಗೆ ಮೊದಲು ನಿಷೇಧಿಸಲ್ಪಟ್ಟ ಯಾದವ್, ಡಿಸೆಂಬರ್ 12 ರಿಂದ 18 ರವರೆಗೆ ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆದ ವೈಯಕ್ತಿಕ ವಿಶ್ವಕಪ್‌ನಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗೆ ಪುನರಾಗಮನ ಮಾಡಿದ್ದರು.

ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸುಮಾರು 252 ಕುಸ್ತಿಪಟುಗಳು ಸ್ಪರ್ಧಿಸಲಿದ್ದಾರೆ. ಕೋವಿಡ್ -19 ಸಾಂಕ್ರಾಮಿಕದ ಭೀತಿಯಿಂದಾಗಿ ದೊಡ್ಡ ಕೂಟಗಳನ್ನು ತಪ್ಪಿಸಲು ಮೂರು ಸ್ಥಳಗಳಲ್ಲಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ.

ಪುರುಷರ ಚಾಂಪಿಯನ್‌ಶಿಪ್‌ಗಳು ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆಯಲಿದ್ದು, ಮಹಿಳಾ ಚಾಂಪಿಯನ್‌ಶಿಪ್‌ಗಳು ಆಗ್ರಾದಲ್ಲಿ ಜನವರಿ 30 ಮತ್ತು 31 ರಂದು ನಡೆಯಲಿದೆ. ಗ್ರೀಕೋ-ರೋಮನ್ ಸ್ಪರ್ಧೆಯು ಫೆಬ್ರವರಿ 20 ಮತ್ತು 21 ರಂದು ಜಲಂಧರ್‌ನಲ್ಲಿ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.