ನವದೆಹಲಿ: ಭಾರತಕ್ಕೆ ಎರಡು ಒಲಿಂಪಿಕ್ಸ್ ಪದಕ ತಂದುಕೊಟ್ಟಿದ್ದ ಸುಶೀಲ್ ಕುಮಾರ್ ಮತ್ತು ಆತನ ಸಹಚರರು ಜೂನಿಯರ್ ರಾಷ್ಟ್ರೀಯ ಕುಸ್ತಿಪಟು ಸಾಗರ್ ದನ್ಕರ್ ಮತ್ತು ಅವನ ಸ್ನೇಹಿತರನ್ನು ಸುಮಾರು 30ರಿಂದ 40 ನಿಮಿಷಗಳ ಕಾಲ ದೊಣ್ಣೆ, ಹಾಕಿ ಸ್ಟಿಕ್ಸ್, ಬೇಸ್ಬಾಲ್ ಬ್ಯಾಟ್ನಿಂದ ಹಲ್ಲೆ ಮಾಡಿದ್ದರೆಂದು ದೆಹಲಿ ಪೊಲೀಸರ ತನಿಖೆಯ ವೇಳೆ ತಿಳಿದು ಬಂದಿದೆ.
ಛತ್ರಶಾಲ ಸ್ಟೇಡಿಯಂ ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಸುಮಾರು ಸಾವಿರ ಪುಟಗಳ ಚಾರ್ಜ್ ಶೀಟ್ನಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ. ಮೇ 4ರಂದು ಈ ಘಟನೆ ನಡೆದಿದ್ದು, ಧನ್ಕರ್ ಮತ್ತು ಆತನ 4 ಮಂದಿ ಸ್ನೇಹಿತರು ತೀವ್ರ ಹಲ್ಲೆಗೊಳಗಾಗಿದ್ದರು. ಇದರಲ್ಲಿ ಸಾಗರ್ ಧನ್ಕರ್ ಗಂಭೀರ ಗಾಯಕ್ಕೊಳಗಾಗಿ ಸಾವನ್ನಪ್ಪಿದ್ದನು.
ಪೊಲೀಸ್ ತನಿಖೆಯ ಪ್ರಕಾರ ಸಾಗರ್ ಮತ್ತು ಆತನ ಸ್ನೇಹಿತರನ್ನು ದೆಹಲಿ ಎರಡು ಸ್ಥಳಗಳಿಂದ ಅಪಹರಿಸಿಕೊಂಡು ಸ್ಟೇಡಿಯಂಗೆ ಕರೆತರಲಾಗಿತ್ತು. ನಂತರ ಸ್ಟೇಡಿಯಂ ಗೇಟ್ ಅನ್ನು ಒಳಗಿನಿಂದ ಮುಚ್ಚಿ ಅಲ್ಲಿನ ಸೆಕ್ಯುರಿಟಿ ಗಾರ್ಡ್ಗಳನ್ನು ಹೊರಗೆ ಕಳುಹಿಸಿದ್ದರು. ನಂತರ ಈ ಎಲ್ಲ ಐದು ಮಂದಿ ಸ್ನೇಹಿತರನ್ನು ಅಮಾನುಷವಾಗಿ ಸುಶೀಲ್ ಕುಮಾರ್ ಮತ್ತು ಆತನ ಗ್ಯಾಂಗ್ ಥಳಿಸಿದೆ. ಸುಮಾರು 30 ರಿಂದ 40 ನಿಮಿಷಗಳ ಕಾಲ ಲಾಠಿ, ದಂಡಗಳು, ಹಾಕಿ ಸ್ಟಿಕ್, ಬೇಸ್ ಬಾಲ್ ಬ್ಯಾಟ್ಗಳನ್ನು ಬಳಸಿ ನಿರ್ದಯವಾಗಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು 1000 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳ ಪ್ರಕಾರ, ಕೆಲವು ಆರೋಪಿಗಳು ಬಂದೂಕುಗಳನ್ನು ತಂದಿದ್ದರು ಎಂದು ತಿಳಿದು ಬಂದಿದೆ. ಸಾಂಗರ್ ಧನ್ಕರ್ ಸ್ನೇಹಿತರಲ್ಲಿ ಒಬ್ಬ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳೀಯ ಪೊಲೀಸ್ ಮತ್ತು ಪಿಸಿಆರ್ ವ್ಯಾನ್ ಸಿಬ್ಬಂದಿ ಸ್ಟೇಡಿಯಂಗೆ ತಲುಪಿದ್ದಾರೆ. ಪೊಲೀಸ್ ವಾಹನದ ಸದ್ದು ಕೇಳುತ್ತಿದ್ದಂತೆಯೇ ಎಲ್ಲ ಅರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಇದಲ್ಲದೆ ಅವರು ಮೃತ ಸಾಗರ್ ಮತ್ತು ಗಾಯಗೊಂಡ ಸೋನು ಅವರನ್ನು ಕ್ರೀಡಾಂಗಣದ ನೆಲಮಾಳಿಗೆ ಎಳೆದೊಯ್ದು ಪರಾರಿಯಾಗಿದ್ದರೆಂದು ಪೊಲೀಸರ ತನಿಖೆಯ ವೇಳೆ ಬಹಿರಂಗಗೊಂಡಿದೆ.
ಇದನ್ನು ಓದಿ:ಆಂಗ್ಲೋ - ಇಂಡಿಯಾ ಕದನ: ಸಚಿನ್, ದ್ರಾವಿಡ್ರ ಈ ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡಲಿರುವ ಕಿಂಗ್ ಕೊಹ್ಲಿ