ETV Bharat / sports

ಪಂಜಾಬ್​ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಖ್ಯಾತ WWE ಕುಸ್ತಿಪಟು ಗ್ರೇಟ್​ ಖಲಿ - ದಿ ಗ್ರೇಟ್​ ಖಲಿ

ಪಂಜಾಬ್​ ವಿಧಾನಸಭಾ ಚುನಾವಣೆಗೂ ಮುನ್ನ ರಾಷ್ಟ್ರ ರಾಜಧಾನಿ ನವದೆಹಲಿಯ ಬಿಜೆಪಿ ಪಕ್ಷದ ಕಚೇರಿಯಲ್ಲಿ ಖಲಿ ಕಮಲ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಫೆಬ್ರವರಿ 14ರಂದು ಪಂಜಾಬ್​ನಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್​ 10ರಂದು ಏಣಿಕೆ ಕಾರ್ಯ ನಡೆಯಲಿದೆ.

Wrestler Great Khali joins BJP ahead of Punjab polls
ಬಿಜೆಪಿ ಸೇರಿದ ಖ್ಯಾತ WWE ಕುಸ್ತಿಪಟು ಗ್ರೇಟ್​ ಖಲಿ
author img

By

Published : Feb 10, 2022, 3:47 PM IST

ನವದೆಹಲಿ: ದಿ ಗ್ರೇಟ್​ ಖಲಿ ಎಂದೇ ಖ್ಯಾತರಾಗಿರುವ ವೃತ್ತಿಪರ ಕುಸ್ತಿಪಟು ದಲೀಪ್​ ಸಿಂಗ್ ರಾಣಾ ಅವರು ಗುರುವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ. ಪಂಜಾಬ್​ ವಿಧಾನಸಭಾ ಚುನಾವಣೆಗೂ ಮುನ್ನ ರಾಷ್ಟ್ರ ರಾಜಧಾನಿ ನವದೆಹಲಿಯ ಬಿಜೆಪಿ ಪಕ್ಷದ ಕಚೇರಿಯಲ್ಲಿ ಖಲಿ ಕಮಲ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಫೆಬ್ರವರಿ 14ರಂದು ಪಂಜಾಬ್​ನಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್​ 10ರಂದು ಏಣಿಕೆ ಕಾರ್ಯ ನಡೆಯಲಿದೆ. 49 ವರ್ಷದ ದಲೀಪ್ ಸಿಂಗ್ ರಾಣಾ ಅಲಿಯಾಸ್ ಖಲಿ ಪಂಜಾಬ್ ಪೊಲೀಸ್​ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು, 22 ವರ್ಷಗಳ ಹಿಂದೆ 2000ರಲ್ಲಿ ವೃತ್ತಿಪರ ಕುಸ್ತಿಗೆ ಪದಾರ್ಪಣೆ ಮಾಡಿದ್ದರು.

ನಂತರ ಪ್ರಸಿದ್ಧ WWEನಲ್ಲಿ ಅವಕಾಶ ಪಡೆದ ಅವರು 2007ರಲ್ಲಿ ಚಾಂಪಿಯನ್ ಆಗಿದ್ದರು. ಕುಸ್ತಿಯಲ್ಲದೆ ಸಿನಿಮಾ ರಂಗದಲ್ಲೂ ಮಿಂಚಿರುವ ಖಲಿ 4 ಹಾಲಿವುಡ್ ಮತ್ತು 2 ಬಾಲಿವುಡ್ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. 2021ರ WWE ಹಾಲ್ ಆಫ್ ಫೇಮ್‍ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ಕೇರಳ ರಣಜಿ ತಂಡದಲ್ಲಿ ಸ್ಥಾನ ಪಡೆದ ವೇಗಿ ಎಸ್‌.ಶ್ರೀಶಾಂತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.