ETV Bharat / sports

WWE ಸೂಪರ್‌ಸ್ಟಾರ್ ಸ್ಪೆಕ್ಟಾಕಲ್‌; ಸೌತ್ ಸೂಪರ್‌ಸ್ಟಾರ್ ಕಾರ್ತಿ ಭೇಟಿಯಾದ ಜಾನ್ ಸೆನಾ - ETV Bharath Kannada news

ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್(WWE) ಸೂಪರ್ ಸ್ಪೆಕ್ಟಾಕಲ್ ಹಣಾಹಣಿ ಭಾರತದಲ್ಲಿ ಆರು ವರ್ಷಗಳ ಬಳಿಕ ನಡೆಯುತ್ತಿದೆ.

World Wrestling Entertainment
World Wrestling Entertainment
author img

By ETV Bharat Karnataka Team

Published : Sep 8, 2023, 7:54 PM IST

ಹೈದರಾಬಾದ್: ಆರು ವರ್ಷಗಳ ಬಳಿಕ ಭಾರತಕ್ಕೆ ಮರಳಿರುವ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್(WWE) ಸೂಪರ್ ಸ್ಪೆಕ್ಟಾಕಲ್ ಹಣಾಹಣಿ ಇಂದು ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೂಪರ್‌ಸ್ಟಾರ್ ಸ್ಪೆಕ್ಟಾಕಲ್​ನಲ್ಲಿ ಈ ತಲೆಮಾರಿನ ಜನಪ್ರಿಯ ಸೂಪರ್‌ಸ್ಟಾರ್ ಜಾನ್ ಸೆನಾ ಪಾಲ್ಗೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಭಾರತದಲ್ಲಿ ಅವರು ಪ್ರದರ್ಶನ ನೀಡಲು ಬಂದಿದ್ದಾರೆ. ಈ ಹಿಂದೆ 2017ರಲ್ಲಿ WWE ಕುಸ್ತಿ ಪಂದ್ಯಾವಳಿ ಭಾರತದಲ್ಲಿ ನಡೆದಿತ್ತು.

ಪಂದ್ಯಾವಳಿಗೂ ಮುನ್ನ ತಮಿಳು ನಟ ಕಾರ್ತಿ ಹಾಗೂ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾದ ಚೀಫ್ ರೆವಿನ್ಯೂ ಆಫಿಸರ್ ಹಾಗೂ ಇಂಟರ್ನ್ಯಾಷನಲ್ ಬ್ಯುಸಿನೆಸ್ & ಡಿಸ್ಟ್ರಿಬ್ಯೂಷನ್ ಹೆಡ್ ರಾಜೇಶ್ ಕೌಲ್ ಅವರನ್ನು ಹದಿಮೂರು ಬಾರಿಯ WWE ವರ್ಲ್ಡ್ ಚಾಂಪಿಯನ್ ಜಾನ್ ಸೆನಾ ಭೇಟಿಯಾದರು.

ಸೆನಾ ಜೊತೆಗೆ WWE ಸೂಪರ್‌ಸ್ಟಾರ್‌ಗಳಾದ ಸೇಥ್ 'ಫ್ರೀಕಿನ್' ರೋಲಿನ್ಸ್, ಜಿಂದರ್ ಮಹಲ್, ನಟಾಲಿಯಾ, ಡ್ರೂ ಮ್ಯಾಕ್‌ಇಂಟೈರ್, ಕೆವಿನ್ ಓವೆನ್ಸ್, ಸಾಮಿ ಜಯಾನ್ ಮತ್ತು 'ದಿ ರಿಂಗ್' ಜನರಲ್ ಗಂಥರ್ ನಂಥಹ ಘಟಾನುಘಟಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿಳಿದಿದ್ದಾರೆ. ಈಗಾಗಲೇ ಪಂದ್ಯಾವಳಿಯ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಅದಾಗ್ಯೂ ಸಹ WWE ಪ್ರೇಮಿಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್, ಸೋನಿ ಲಿವ್ ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ (ಚಂದಾದರರು) ವೀಕ್ಷಿಸಬಹುದಾಗಿದೆ. ಹೈದರಾಬಾದ್‌ನ GMC ಬಾಲಯೋಗಿ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಇದನ್ನೂ ಓದಿ: PKL Season 10: ಪ್ರೊ-ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆ ಮುಂದೂಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.