ನೂರ್ಸುಲ್ತಾನ್: ಭಾರತದ ಪರ 86 ಕೆಜಿ ವಿಭಾಗದ ಫೈನಲ್ ತಲುಪಿದ್ದ 20 ವರ್ಷದ ದೀಪಕ್ ಪೂನಿಯಾ ಚಿನ್ನ ಗೆಲ್ಲುವ ಆಸೆ ಅವರ ಗಾಯ ತಣ್ಣೀರೆರಚಿದೆ.
ಭಾರತಕ್ಕೆ ವಿಶ್ವಚಾಂಪಿಯನ್ಶಿಪ್ನ 2ನೇ ಚಿನ್ನ ತಂದುಕೊಡುವ ಕನಸು ಕಂಡಿದ್ದ ದೀಪಕ್ ಪೂನಿಯಾಗೆ ಇಮ್ಮಡಿ ನೋವು ಕಾಣಿಸಿಕೊಂಡ ಹಿನ್ನಲೆ ಫೈನಲ್ ಪಂದ್ಯದಿಂದ ಹಿಂದೆ ಸರಿದು ಬೆಳ್ಳಿಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಪಂದ್ಯದಲ್ಲಿ ಇರಾನ್ನ ಹಜ್ಸನ್ ಯಜ್ದಾನಿ ಅವರನ್ನು ಎದುರಿಸಬೇಕಿತ್ತು.
ಜೂನಿಯರ್ ವಿಶ್ವಚಾಂಪಿಯನ್ ಅಗಿರುವ ದೀಪಕ್ ಸೆಮಿಫೈನಲ್ನಲ್ಲಿ ಸ್ವಿಟ್ಜರ್ಲೆಂಡ್‌ನ ಸ್ಟೀಫನ್ ರೀಚ್‌ಮತ್ ಅವರನ್ನು 8-2 ರಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದರು.
ವಿಶ್ವಚಾಂಪಿಯನ್ಶಿಪ್ನ 66 ಕೆಜಿ ವಿಭಾಗದಲ್ಲಿ ಸುಶೀಲ್ ಕುಮಾರ್ ಮಾತ್ರ ಚಿನ್ನದ ಸಾಧನೆ ಮಾಡಿದ್ದಾರೆ. ಸುಶೀಲ್ 2010ರ ಮಾಸ್ಕೋ ವಿಶ್ವಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದರು.