ಭೋಪಾಲ್(ಮಧ್ಯಪ್ರದೇಶ): ಬಾಕ್ಸಿಂಗ್ ವಿಶ್ವಚಾಂಪಿಯನ್ ತೆಲಂಗಾಣದ ನಿಖತ್ ಜರೀನ್ ಮತ್ತೊಂದು ಪರಾಕ್ರಮ ಮೆರೆದಿದ್ದಾರೆ. ಅದ್ಭುತ ಫಾರ್ಮ್ನಲ್ಲಿರುವ ಜರೀನ್ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ರೈಲ್ವೇಸ್ನ ಅನಾಮಿಕಾ ವಿರುದ್ಧ ಪಾರಮ್ಯ ಮೆರೆದ ನಿಖತ್ ಜರೀನ್ 4-1 ರಲ್ಲಿ ಜಯ ಸಾಧಿಸಿ ಪ್ರಶಸ್ತಿ ಗೆದ್ದರು. ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ಗೆ ಅನಾಮಿಕಾ ಪ್ರಬಲ ಸ್ಪರ್ಧೆ ಒಡ್ಡುವ ಸೂಚನೆ ನೀಡಿದ್ದರು. ಆದರೆ, ನಿಖರ್ ತನ್ನೆಲ್ಲ ಶಕ್ತಿಯನ್ನು ರಟ್ಟೆಯಲ್ಲಿ ತುಂಬಿಕೊಂಡು ಪಂಚ್ ನೀಡುವ ಮೂಲಕ ಗೆಲುವಿನ ನಗೆ ಬೀರಿದರು.
50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ತೆಲಂಗಾಣದ ಮಹಿಳಾ ಬಾಕ್ಸರ್ ಸೆಮಿಫೈನಲ್‌ನಲ್ಲಿ ಶಿವಿಂದರ್ ಕೌರ್ ಅವರನ್ನು 5-0 ಅಂತರದಿಂದ ಸೋಲಿಸಿದ್ದರು.
ಓದಿ: ಮಾತೃ ವಿಯೋಗದಲ್ಲೂ ಕಾಮೆಂಟರಿ ಮುಗಿಸಿ ಕರ್ತವ್ಯಪ್ರಜ್ಞೆ ಮೆರೆದ ಮಾಜಿ ಕ್ರಿಕೆಟಿಗ ಗವಾಸ್ಕರ್