ETV Bharat / sports

ನಿವೃತ್ತಿಯ ಕೊನೆ ಪಂದ್ಯದಲ್ಲಿ ಸಾನಿಯಾಗೆ ಸೋಲು; ವಿಂಬಲ್ಡನ್​ ಹೋರಾಟ ಅಂತ್ಯ

ಪ್ರತಿಷ್ಟಿತ ವಿಂಬಲ್ಡನ್ ಟೆನಿಸ್‌ ಟೂರ್ನಿಯ ಸ್ಮರಣೀಯ ಪಂದ್ಯದಲ್ಲಿ ಭಾರತದ ಟೆನಿಸ್​ ತಾರೆ ಸಾನಿಯಾ ಮಿರ್ಜಾ ಸೋತು ನಿರ್ಗಮಿಸಿದರು.

author img

By

Published : Jul 7, 2022, 6:54 AM IST

Wimbledon sania mirza
ನಿವೃತ್ತಿಯ ಕೊನೆ ಪಂದ್ಯದಲ್ಲಿ ಸಾನಿಯಾ ಮಿರ್ಜಾಗೆ ಸೋಲು

ಲಂಡನ್: ಭಾರತದ ಟೆನಿಸ್​ ತಾರೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದ ಕೊನೆಯ ಟೆನಿಸ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ನಿರಾಶೆ ಅನುಭವಿಸಿದರು. ವಿಂಬಲ್ಡನ್​ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಶ್ರ ಡಬಲ್ಸ್​ನಲ್ಲಿ ಸೆಮಿಫೈನಲ್​ ತಲುಪಿದ್ದ ಆಟಗಾರ್ತಿ ಸೋಲುವ ಮೂಲಕ ಪ್ರಶಸ್ತಿ ರೇಸ್​​ನಿಂದ ಹೊರಬಿದ್ದರು. ಕ್ರೊಯೇಷಿಯಾದ ಮೇಟ್ ಪಾವಿಕ್ ಜೊತೆಗೂಡಿ ಆಡಿದ ಸಾನಿಯಾ, ಸೆಮಿಫೈನಲ್‌ನಲ್ಲಿ ಎಡವಿ ವಿಂಬಲ್ಡನ್​ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಕನಸು ಕೈಬಿಟ್ಟರು.

ಸಾನಿಯಾ ಮತ್ತು ಪಾವಿಕ್ ಕಠಿಣ ಹೋರಾಟದ ನಡುವೆಯೂ ಹಾಲಿ ಚಾಂಪಿಯನ್ ನೀಲ್ ಸ್ಕುಪ್ಸ್ಕಿ ಮತ್ತು ದೇಸಿರೆ ಕ್ರೌಜಿಕ್ ವಿರುದ್ಧ 6-4, 5-7, 4-6 ಸೆಟ್​ಗಳ ಅಂತರದ ಪರಾಜಯ ಹೊಂದಿದರು. ಫೈನಲ್​ಗೇರುವ ಭರವಸೆಯೊಂದಿಗೆ ಆಟ ಆರಂಭಿಸಿದ ಸಾನಿಯಾ-ಮೇವಿಟ್​ ಜೋಡಿ ಮೊದಲ ಸೆಟ್​ ಅನ್ನು 6-4ರಲ್ಲಿ ಗೆದ್ದು ಮುನ್ನಡೆ ಪಡೆಯಿತು. ಬಳಿಕ ತಿರುಗೇಟು ನೀಡಿದ ನೀಲ್ ಸ್ಕುಪ್ಸ್ಕಿ- ದೇಸಿರೆ ಕ್ರೌಜಿಕ್ 2ನೇ ಸೆಟ್​ ಅನ್ನು 7-5 ರಲ್ಲಿ ಜಯಿಸಿತು.

ನಿರ್ಣಾಯಕ ಸೆಟ್​ನಲ್ಲಿ ಸಾನಿಯಾ ಜೋಡಿ ಆಟದ ಮೇಲೆ ಹಿಡಿತ ಸಾಧಿಸದೇ 5-4 ರಲ್ಲಿ ಹಿನ್ನಡೆ ಸಾಧಿಸುವ ಮೂಲಕ ಹಾಲಿ ಚಾಂಪಿಯನ್ನರಿಗೆ ಶರಣಾದರು. ಸಾನಿಯಾ ಮಿರ್ಜಾ ಈ ವರ್ಷಾರಂಭದಲ್ಲಿ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ಕೊನೆಯ ಟೂರ್ನಿಯಾದ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಸಾಧನೆ ಮಾಡಿ ನಿವೃತ್ತಿ ಹೇಳುವ ಆಸೆಯಲ್ಲಿದ್ದ ಅವರಿಗೆ ಹಾಲಿ ಚಾಂಪಿಯನ್ನರು ಆಘಾತ​ ನೀಡಿದರು.

2009 ಮತ್ತು 2012 ರಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ಸಾನಿಯಾ, ಒಟ್ಟು 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಮಹಿಳೆಯರ ಡಬಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲೇ ಲೂಸಿ ಹ್ರಾಡೆಕಾ ಅವರೊಂದಿಗೆ ಆಡಿದ್ದ ಭಾರತೀಯ ಆಟಗಾರ್ತಿ ಸೋತಿದ್ದರು.

ಇದನ್ನೂ ಓದಿ: ಮಲೇಷ್ಯಾ ಮಾಸ್ಟರ್ಸ್: ಎರಡನೇ ಸುತ್ತಿಗೆ ಸಿಂಧು, ಪ್ರಣೀತ್, ಕಶ್ಯಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.