ETV Bharat / sports

ನಿಮ್ಮ ಶ್ರಮ,ತ್ಯಾಗಕ್ಕೆ ಪ್ರತಿಫಲ ಪಡೆಯುವ ಸಮಯ ಬಂದಿದೆ: ಅಥ್ಲೀಟ್​ಗಳನ್ನು ಹುರಿದುಂಬಿಸಿದ ಸಚಿನ್ - ಅಥ್ಲೀಟ್​ಗಳಿಗೆ ಸಚಿನ್ ಶುಭಾಶಯ

ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅರ್ಹತೆ ಪಡೆದವರ ಸಂಖ್ಯೆ 120ರ ಗಡಿ ದಾಟಿದೆ. ಹಲವಾರು ಕ್ರೀಡೆಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯರು ಸ್ಪರ್ಧಿಸುತ್ತಿದ್ದಾರೆ. ಕೋವಿಡ್​ 19 ಬಿಕ್ಕಟ್ಟಿನ ನಡುವೆಯೂ ನಾಳೆಯಿಂದ ಟೋಕಿಯೋದಲ್ಲಿ ಮಹಾಕ್ರೀಡಾಕೂಟ ಚಾಲನೆ ಪಡೆಯಲಿದೆ.

ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
author img

By

Published : Jul 22, 2021, 7:32 PM IST

ಟೋಕಿಯೋ: ಶುಕ್ರವಾರದಿಂದ ಒಲಿಂಪಿಕ್ಸ್ ಗೇಮ್ಸ್ ಆರಂಭವಾಗಲಿದ್ದು, ಭಾರತ ಕ್ರಿಕೆಟ್​ನ ಲೆಜೆಂಡ್​ ಸಚಿನ್​ ತೆಂಡೂಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು​ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ಶುಭಕೋರಿದ್ದಾರೆ.

ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅರ್ಹತೆ ಪಡೆದವರ ಸಂಖ್ಯೆ 120ರ ಗಡಿ ದಾಟಿದೆ. ಹಲವಾರು ಕ್ರೀಡೆಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯರು ಸ್ಪರ್ಧಿಸುತ್ತಿದ್ದಾರೆ. ಕೋವಿಡ್​ ಬಿಕ್ಕಟ್ಟಿನ ನಡುವೆಯೂ ನಾಳೆಯಿಂದ ಟೋಕಿಯೋದಲ್ಲಿ ಮಹಾಕ್ರೀಡಾಕೂಟ ಚಾಲನೆ ಪಡೆಯಲಿದೆ.

'ಪ್ರತಿಷ್ಠಿತ 'ಟೋಕಿಯೊ 2020' ಕ್ರೀಡಾಕೂಟದಲ್ಲಿ ಸ್ಥಾನ ಪಡೆದ ಟೀಮ್ ಇಂಡಿಯಾದ ಒಲಿಂಪಿಯನ್ನರನ್ನು ಅಭಿನಂದಿಸಲು ಬಯಸುತ್ತೇನೆ. ನೀವು ಈ ದಿನಕ್ಕಾಗಿ ಸಾಕಷ್ಟು ಕಠಿಣ ಪರಿಶ್ರಮವಹಿಸಿದ್ದೀರಿ, ಕೆಲವು ವರ್ಷಗಳಿಂದ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಸಾಕಷ್ಟು ತ್ಯಾಗಗಳನ್ನು ಮಾಡಿದ್ದೀರಾ. ಕೋವಿಡ್​ನಂತಹ ಕಠಿಣ ಸಂದರ್ಭದಲ್ಲೂ ತರಬೇತಿ ಮಾಡಿದ್ದೀರಾ. ಆದರೆ ಈಗ ನಿಮ್ಮ ಕ್ಷಣ ಬಂದಿದೆ ಎಂದು ಸಚಿನ್ ಒಲಿಂಪಿಕ್ಸ್ ವೆಬ್‌ಸೈಟ್ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ತಿಳಿಸಿದ್ದಾರೆ.

"ಟೋಕಿಯೋದಲ್ಲಿ ಸ್ಪರ್ಧಿಸಲು ಸಿಕ್ಕಿರುವ ಈ ಅವಕಾಶವನ್ನು ನೀವೆಲ್ಲರೂ ಆನಂದಿಸುತ್ತೀರೆಂದು ಭಾವಿಸಿದ್ದೇನೆ. ಈ ಪ್ರಯಾಣದಲ್ಲಿ ನಾವೆಲ್ಲರೂ ಒಟ್ಟಾಗಿ ನಿಲ್ಲುತ್ತೇವೆ. ಪ್ರತಿಯೊಬ್ಬರಿಗೂ ನನ್ನ ಶುಭಾಶಯಗಳು. ಇಡೀ ರಾಷ್ಟ್ರವು ನಿಮ್ಮ ಜೊತೆಯಿದೆ" ಎಂದು ಕ್ರಿಕೆಟ್​ ದಂತಕತೆ ಹೇಳಿದ್ದಾರೆ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್​: ಭಾರತೀಯ ಕ್ರೀಡಾಪಟುಗಳ ಸ್ಪರ್ಧೆಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.