ETV Bharat / sports

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಿರಲು ಉತ್ತರ ಕೊರಿಯಾ ನಿರ್ಧಾರ? - ಉತ್ತರ ಕೊರಿಯಾ

ಮಾರ್ಚ್ 25 ರಂದು ನಡೆದ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪೋರ್ಟ್ಸ್ ಇನ್ ಡಿಪಿಆರ್ ಕೊರಿಯಾ ವೆಬ್‌ಸೈಟ್ ತಿಳಿಸಿದೆ.

North Korea won't participate in Tokyo Olympics
ಟೋಕಿಯೊ ಒಲಿಂಪಿಕ್ಸ್‌ನಿಂದ ಉತ್ತರ ಕೊರಿಯಾ ಔಟ್
author img

By

Published : Apr 6, 2021, 10:13 AM IST

ಸಿಯೋಲ್: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಕೊರಿಯಾ ದೇಶವು ಈ ಬಾರಿಯ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ವೆಬ್‌ಸೈಟ್‌ವೊಂದು‌ ವರದಿ ಮಾಡಿದೆ.

ಮಾರ್ಚ್ 25 ರಂದು ನಡೆದ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪೋರ್ಟ್ಸ್ ಇನ್ ಡಿಪಿಆರ್ ಕೊರಿಯಾ ವೆಬ್‌ಸೈಟ್ ತಿಳಿಸಿದೆ. “ಕೋವಿಡ್-19 ನಿಂದ ಉಂಟಾಗುವ ವಿಶ್ವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನಿಂದ ಕ್ರೀಡಾಪಟುಗಳನ್ನು ರಕ್ಷಿಸಲು ಆದ್ಯತೆ ನೀಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.

ಉ.ಕೊರಿಯಾದ ನಿರ್ಧಾರದ ಬಗ್ಗೆ ಮಾಹಿತಿ ಇಲ್ಲ ಎಂದು ದಕ್ಷಿಣ ಕೊರಿಯಾದ ಒಲಿಂಪಿಕ್ ಸಮಿತಿ ತಿಳಿಸಿದೆ.

ಇದನ್ನೂ ಓದಿ: ಒಲಿಂಪಿಕ್ ಜ್ಯೋತಿ ಯಾತ್ರೆಗೂ ಮುನ್ನ ಸುರಕ್ಷತೆಗೆ ಹೆಚ್ಚಿನ ಆದ್ಯತೆ: ಸೀಕೊ ಹಶಿಮೊಟೊ

ದಕ್ಷಿಣ ಕೊರಿಯಾದಲ್ಲಿ ನಡೆದ 2018 ರ ಚಳಿಗಾಲದ ಒಲಿಂಪಿಕ್ಸ್‌ಗೆ ಉತ್ತರ ಕೊರಿಯಾದಿಂದ 22 ಕ್ರೀಡಾಪಟುಗಳು ಸೇರಿ, ಸರ್ಕಾರಿ ಅಧಿಕಾರಿಗಳು, ಪ್ರದರ್ಶನ ಕಲಾವಿದರು, ಪತ್ರಕರ್ತರು ಮತ್ತು 230 ಸದಸ್ಯರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.