ಟೋಕಿಯೋ: ಕೊರೊನಾ ಹಿನ್ನಲೆ ನಾಲ್ಕು ತಿಂಗಳ ಹಿಂದೆ ತೆಗೆದಿದ್ದ ಬೃಹತ್ ಒಲಿಂಪಿಕ್ ರಿಂಗ್ಗಳನ್ನು ಮತ್ತೆ ಟೋಕಿಯೋ ಬೇನಲ್ಲಿ ಮಂಗಳವಾರ ಅಳವಡಿಸಲಾಗಿದೆ. 2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕೋವಿಡ್ 19 ಕಾರಣ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿದೆ.
ಯೊಕೊಹಾಮಾದಿಂದ ರಿಂಗ್ಗಳನ್ನು ಮಂಗಳವಾರ ಮತ್ತೆ ತರಲಾಗಿದ್ದು, ಟೋಕಿಯೊದ ರೈಂಬೋ ಬ್ರಿಡ್ಜ್ ಮೇಲೆ ಜೋಡಿಸಲಾಗಿದೆ. ರಿಂಗ್ಗೆ ನೀಲಿ, ಕಪ್ಪು, ಹಸಿರು, ಕೆಂಪು ಮತ್ತು ಹಳದಿ ಬಣ್ಣಗಳಿಂದ ಚಿತ್ರಿಸಲಾಗಿದೆ. ಪ್ರತಿಯೊಂದು ರಿಂಗ್ 15 ಮೀಟರ್ ಎತ್ತರ ಮತ್ತು 33 ಮೀಟರ್ ಉದ್ದ ಹೊಂದಿವೆ. ಇವುಗಳನ್ನು 50 ಅಡಿ ಎತ್ತರ ಮತ್ತು 100 ಅಡಿ ಉದ್ದದದಲ್ಲಿ ಜೋಡಿಸಲಾಗಿದೆ.
-
The Olympic Rings are back in Tokyo's Odaiba Marine Park and will remain there through the #Tokyo2020 Games until 8 August 2021.
— Olympics (@Olympics) December 1, 2020 " class="align-text-top noRightClick twitterSection" data="
Read more about it 👉https://t.co/TTDNloUVTi
📹: @Tokyo2020 pic.twitter.com/BY0wace4do
">The Olympic Rings are back in Tokyo's Odaiba Marine Park and will remain there through the #Tokyo2020 Games until 8 August 2021.
— Olympics (@Olympics) December 1, 2020
Read more about it 👉https://t.co/TTDNloUVTi
📹: @Tokyo2020 pic.twitter.com/BY0wace4doThe Olympic Rings are back in Tokyo's Odaiba Marine Park and will remain there through the #Tokyo2020 Games until 8 August 2021.
— Olympics (@Olympics) December 1, 2020
Read more about it 👉https://t.co/TTDNloUVTi
📹: @Tokyo2020 pic.twitter.com/BY0wace4do
2021 ಜುಲೈ 23ರಂದು ಟೋಕಿಯೋ ಒಲಿಂಪಿಕ್ಸ್ ಆರಂಭವಾಗಲಿದೆ. ಪ್ಯಾರಾಲಿಂಪಿಕ್ಸ್ ಆಗಸ್ಟ್ 24 ರನ್ ನಡೆಯಲಿದೆ. ಅಲ್ಲಿಯವರೆಗೆ ಈ ಒಲಿಂಪಿಕ್ ರಿಂಗ್ಗಳು ರಾತ್ರಿವೇಳೆ ಬೆಳಗಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಕೊರೊನಾ ಸಾಂಕ್ರಾಮಿಕ ಇದ್ದರೂ 2021ರ ಒಲಿಂಪಿಕ್ಸ್ನಲ್ಲಿ 15,400 ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಪಟುಗಳು ಸುರಕ್ಷಿತವಾಗಿ ಜಪಾನ್‌ಗೆ ಪ್ರವೇಶಿಸಬಹುದು ಎಂಬ ಸಂಘಟಕರು ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಹೆಚ್ಚು ವಿಶ್ವಾಸ ಹೊಂದಿದ್ದಾರೆ.