ಕೌನ್ಸಿಲ್ ಬ್ಲಫ್ಸ್ (ಯುಎಸ್‌ಎ): ಕೆನಡಾ ಓಪನ್ ಗೆದ್ದು ಬೀಗಿದ್ದ ಭಾರತದ ತಾರಾ ಷಟ್ಲರ್ ಲಕ್ಷ್ಯ ಸೇನ್ ಅವರು ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಬ್ಯಾಡ್ಮಿಂಟನ್ನಲ್ಲಿ ಪುರುಷರ ಸಿಂಗಲ್ಸ್ ಸೆಮಿಫೈನಲ್ ತಲುಪಿದರು. ಇತ್ತ, 2 ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಆಘಾತ ಅನುಭವಿಸಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದರು.
-
𝐓𝐡𝐞 𝐬𝐭𝐚𝐠𝐞 𝐢𝐬 𝐬𝐞𝐭 🫡
— BAI Media (@BAI_Media) July 15, 2023 " class="align-text-top noRightClick twitterSection" data="
All the best Lakshya 💪
📸: @badmintonphoto #USOpen2023#IndiaontheRise#Badminton pic.twitter.com/O7WkV2JDaN
">𝐓𝐡𝐞 𝐬𝐭𝐚𝐠𝐞 𝐢𝐬 𝐬𝐞𝐭 🫡
— BAI Media (@BAI_Media) July 15, 2023
All the best Lakshya 💪
📸: @badmintonphoto #USOpen2023#IndiaontheRise#Badminton pic.twitter.com/O7WkV2JDaN𝐓𝐡𝐞 𝐬𝐭𝐚𝐠𝐞 𝐢𝐬 𝐬𝐞𝐭 🫡
— BAI Media (@BAI_Media) July 15, 2023
All the best Lakshya 💪
📸: @badmintonphoto #USOpen2023#IndiaontheRise#Badminton pic.twitter.com/O7WkV2JDaN
ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಲಕ್ಷ್ಯಸೇನ್ 21-10, 21-17ರಲ್ಲಿ ಭಾರತದವರೇ ಆದ ಶಂಕರ್ ಮುತ್ತುಸಾಮಿ ಸುಬ್ರಮಣಿಯನ್ ಅವರನ್ನು ಸೋಲಿಸಿದರು. ಪಂದ್ಯದಲ್ಲಿ ಪೂರ್ಣ ಪ್ರಾಬಲ್ಯ ಮೆರೆದ ಸೇನ್, ಯಾವುದೇ ಸಮಯದಲ್ಲಿ ಶಂಕರ್ ಪುಟಿದೇಳದಂತೆ ತಡೆದರು. ಮೊದಲ ಸೆಟ್ನ ಆರಂಭದಲ್ಲಿ 7-1 ರಿಂದ ಮುನ್ನಡೆ ಸಾಧಿಸಿದ ಸೇನ್ ಪಾಯಿಂಟ್ ಸಾಧಿಸುತ್ತಾ, 21-10 ರಲ್ಲಿ ಗೇಮ್ ಗೆದ್ದರು. ಎರಡನೇ ಗೇಮ್‌ನಲ್ಲಿ ಎಸ್ ಶಂಕರ್ ತಿರುಗೇಟು ನೀಡುವ ಹೋರಾಟ ನಡೆಸಿದರು. ಆದರೆ, ತನ್ನ ಚಾಕಚಕ್ಯತೆಯಿಂದ ಸೇನ್ ಗೇಮ್ ಅನ್ನು 21-17 ರಲ್ಲಿ ಗೆದ್ದರು. ಲಕ್ಷ್ಯಸೇನ್ ಪಂದ್ಯವನ್ನು ಕೇವಲ 38 ನಿಮಿಷಗಳಲ್ಲಿ ಗೆದ್ದುಕೊಂಡರು.
ಸೆಮೀಸ್ನಲ್ಲಿ ಕಠಿಣ ಫೈಟ್: 21ರ ಹರೆಯದ ಲಕ್ಷ್ಯ ಸೇನ್ ಪ್ರಸ್ತುತ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 12ನೇ ಸ್ಥಾನದಲ್ಲಿದ್ದಾರೆ. ಅವರು ಫೈನಲ್‌ನಲ್ಲಿ ಸ್ಥಾನ ಪಡೆಯಲು ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಮತ್ತು ವಿಶ್ವದ ನಂ.7 ಆಟಗಾರ ಚೀನಾದ ಲಿ ಶಿ ಫೆಂಗ್ ಅವರನ್ನು ಎದುರಿಸಲಿದ್ದಾರೆ. ಕಳೆದ ವಾರ ಕೊನೆಗೊಂಡ ಕೆನಡಾ ಓಪನ್‌ನ ಫೈನಲ್‌ನಲ್ಲಿ ಇಬ್ಬರೂ ಷಟ್ಲರ್‌ಗಳು ಮುಖಾಮುಖಿಯಾಗಿದ್ದರು. ಸೇನ್ ಇಲ್ಲಿ ವಿಜಯ ಸಾಧಿಸಿ, ಟ್ರೋಫಿಗೆ ಮುತ್ತಿಟ್ಟಿದ್ದರು. ಭಾರತದ ಆಟಗಾರ ಚೀನೀ ಎದುರಾಳಿಯ ವಿರುದ್ಧದ ಮುಖಾಮುಖಿಯಲ್ಲಿ 5-3 ಮುನ್ನಡೆಯಲಿದ್ದಾರೆ. ಸೆಮೀಸ್ನಲ್ಲಿ ಗೆದ್ದು ಮತ್ತೊಂದು ಓಪನ್ ಪ್ರಶಸ್ತಿ ಗೆಲುವಿನತ್ತ ಲಕ್ಷ್ಯ ವಹಿಸಬೇಕಿದೆ.
ಸಿಂಧುಗೆ ಆಘಾತ: ಮತ್ತೊಂದೆಡೆ, 2 ಬಾರಿಯ ಒಲಿಂಪಿಕ್ ಚಾಂಪಿಯನ್ ಪಿವಿ ಸಿಂಧು ಆಘಾತ ಅನುಭವಿಸಿದರು. ನಿನ್ನೆ ರಾತ್ರಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಗಾವೊ ಫಾಂಗ್ ವಿರುದ್ಧ 20-22, 13-21 ಸೆಟ್‌ಗಳಿಂದ ಸೋತರು. ಈ ಮೂಲಕ ಮಹಿಳಾ ಸಿಂಗಲ್ಸ್ನಲ್ಲಿ ಭಾರತದ ಅಭಿಯಾನ ಮುಕ್ತಾಯವಾಯಿತು. ಸಿಂಧು ಪ್ರಸ್ತುತ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 12ನೇ ಸ್ಥಾನದಲ್ಲಿದ್ದರೆ, ಟೂರ್ನಿಯಲ್ಲಿ 3ನೇ ಶ್ರೇಯಾಂಕ ಪಡೆದಿದ್ದರು.
ಚೀನಾದ ಆಟಗಾರ್ತಿ ಮುಂದೆ ಸಿಂಧು ಸಲೀಸಾಗಿ ಮಂಡಿಯೂರಿದರು. ಮೊದಲ ಸೆಟ್ನಲ್ಲಿ ತೀವ್ರ ಸೆಣಸಾಟ ನಡೆಸಿದ ಭಾರತದ ತಾರಾ ಷಟ್ಲರ್ 20-20 ರಲ್ಲಿ ಸಮಬಲ ಸಾಧಿಸಿದ್ದರು. ಕೊನೆಯ ಹಂತದಲ್ಲಿ ಚೀನೀ ಆಟಗಾರ್ತಿ ಸತತ 2 ಪಾಯಿಂಟ್ ಗಳಿಸುವ ಮೂಲಕ ಮೊದಲ ಗೇಮ್ ಗೆದ್ದರು. 2ನೇ ಗೇಮ್‌ನಲ್ಲಿ ಪ್ರಬಲ ಹೊಡೆತಗಳಿಂದ ಮಿಂಚಿದ ಗಾವೊ ಫಾಂಗ್, ಸತತ ಪಾಯಿಂಟ್ ಕಲೆಹಾಕಿ 13-21 ರಲ್ಲಿ ಗೆಲುವು ಸಾಧಿಸಿದರು.
ಆಕ್ರಮಣಕಾರಿ ಆಟದ ಮುಂದೆ ಸಿಂಧು ನಿರುತ್ತರರಾದರು. 49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಚೀನೀ ಆಟಗಾರ್ತಿ ಪ್ರಾಬಲ್ಯ ಮೆರೆದರು. ಚೀನಾ ಆಟಗಾರ್ತಿ ಎದುರಿನ 5 ಮುಖಾಮುಖಿಗಳಲ್ಲಿ ಸಿಂಧುಗೆ ಇದು ನಾಲ್ಕನೇ ಸೋಲಾಗಿದೆ
ಇದನ್ನೂ ಓದಿ: ಜೈಸ್ವಾಲ್ 'ಯಶಸ್ವಿ' ಬ್ಯಾಟಿಂಗ್ಗೆ ರೋಹಿತ್ ಫಿದಾ: ಅಶ್ವಿನ್ - ಜಡ್ಡು ಸ್ಪಿನ್ ದಾಳಿ ಹೊಗಳಿದ ನಾಯಕ