ETV Bharat / sports

ಸೀನಿಯರ್ ಮಹಿಳಾ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್: ಅಂತಿಮ ಸುತ್ತಿಗೆ 12 ತಂಡಗಳ ಆಯ್ಕೆ - ETV Bharath Kannada news

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ನಡೆಸುತ್ತಿರುವ ಸೀನಿಯರ್ ಮಹಿಳಾ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್​ನ ಅಂತಿಮ ಸುತ್ತಿಗೆ 12 ತಂಡಗಳು ಆಯ್ಕೆಯಾಗಿವೆ.

Twelve teams to battle for Senior Women's National Football League
ಸೀನಿಯರ್ ಮಹಿಳಾ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್: ಅಂತಿಮ ಸುತ್ತಿಗೆ 12 ತಂಡಗಳ ಆಯ್ಕೆ
author img

By

Published : Apr 15, 2023, 10:20 PM IST

ನವದೆಹಲಿ: 27ನೇ ಸೀನಿಯರ್ ಮಹಿಳಾ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್ 2022-23ರ ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲು ಹನ್ನೆರಡು ತಂಡಗಳು ಸಜ್ಜಾಗಿವೆ. ಗುಂಪು ಹಂತಗಳಿಂದ ಆರು ವಿಜೇತರು, ನಾಲ್ಕು ಅತ್ಯುತ್ತಮ ಎರಡನೇ ಸ್ಥಾನ ಪಡೆದ ತಂಡಗಳು ಮತ್ತು ಆತಿಥೇಯ ಪಂಜಾಬ್ ಹಾಗೂ ಡೈರೆಕ್ಟ್​ ಸೀಡ್​ ರೈಲ್ವೆ ತಂಡಗಳು ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲಿವೆ.

ಗುಂಪು ಹಂತದಲ್ಲಿ 30 ತಂಡಗಳನ್ನು ಆರು ಗುಂಪುಗಳಾಗಿ ವಿಂಗಡಿಸಿ ಅಮೃತಸರ, ಹಲ್​ದ್ವಾನಿ, ಮಾರ್ಗೋ, ಭಿಲಾಯಿ, ಮಥುರಾ ಮತ್ತು ಬೆಂಗಳೂರುಗಳಲ್ಲಿ ಪಂದ್ಯಗಳನ್ನು ಆಡಿಸಲಾಯಿತು. ಗುಂಪು ಹಂತದ ಪಂದ್ಯಗಳು ಮಾರ್ಚ್ 25, 2023 ರಿಂದ ಪ್ರಾರಂಭವಾಯಿಗಿ ಮತ್ತು ಏಪ್ರಿಲ್ 9ರ ವರೆಗೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಅಡಿಯಲ್ಲಿ ಆಯೋಜನೆಗೊಂಡಿತ್ತು. ಗುಂಪು ಹಂತದ ಈ ಪಂದ್ಯಗಳಿಂದ ಬೆಸ್ಟ್​ 12 ತಂಡವನ್ನು ಆಯ್ಕೆ ಮಾಡಲಾಗಿದೆ.

ಹರಿಯಾಣ (ಗುಂಪು I), ಮಹಾರಾಷ್ಟ್ರ (ಗುಂಪು II), ಹಿಮಾಚಲ ಪ್ರದೇಶ (ಗುಂಪು III), ಜಾರ್ಖಂಡ್ (ಗುಂಪು IV), ತಮಿಳುನಾಡು (ಗುಂಪು V), ಮಣಿಪುರ (ಗುಂಪು VI) ಗುಂಪು ವಿಜೇತರಾಗಿ ಅಂತಿಮ ಸುತ್ತಿಗೆ ಅರ್ಹತೆ ಪಡೆದ ತಂಡಗಳಾದರೆ, ಚಂಡೀಗಢ (ಗುಂಪು II), ಕರ್ನಾಟಕ (ಗುಂಪು VI), ಪಶ್ಚಿಮ ಬಂಗಾಳ (ಗುಂಪು V) ಮತ್ತು ಒಡಿಶಾ (ಗುಂಪು III) ನಾಲ್ಕು ಅತ್ಯುತ್ತಮ ಎರಡನೇ ಸ್ಥಾನ ಪಡೆದು ಅಂತಿಮ ಸುತ್ತಿಗೆ ಪ್ರವೇಶ ಪಡೆದುಕೊಂಡಿವೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಅಂತಿಮ ಹಂತಕ್ಕೆ ತಂಡವನ್ನು ಆಯ್ಕೆ ಮಾಡುವಲ್ಲಿ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್ (AFC) ಮಾನದಂಡಗಳನ್ನು ಅನುಸರಿಸಿದೆ. ಅದಕ್ಕೆ ಮುಖ್ಯ ಕಾರಣ ಆರು ಗುಂಪಿನ ಗೆದ್ದ ತಂಡ ಜೊತೆಗೆ ನಾಲ್ಕು ಎರಡನೇ ಸ್ಥಾನ ಗಳಿಸಿದ ಬೆಸ್ಟ್​ ತಂಡವನ್ನು ಗುರುತಿಸಲು ಈ ಮಾನದಂಡಕ್ಕೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಮೊರೆ ಹೋಗಿದೆ.

ಇದನ್ನೂ ಓದಿ: LSGvsPBKS: ಟಾಸ್​ ಗೆದ್ದ ಪಂಜಾಬ್​ ಕಿಂಗ್ಸ್​​ ಬೌಲಿಂಗ್​ ಆಯ್ಕೆ, ಶಿಖರ್​ ಬದಲು ಸ್ಯಾಮ್​ ಕರನ್​ ನಾಯಕತ್ವ

ಕೆಲ ಗುಂಪುಗಳಲ್ಲಿ ಕಡಿಮೆ ತಂಡಗಳು ಇದ್ದ ಕಾರಣ ಪಂದ್ಯದಲ್ಲಿ ಭಾಗವಹಿಸಿದ ಸಂಖ್ಯೆಯೂ ಕಡಿಮೆಯಾಗಿತ್ತು. ಇದರಿಂದ ಅಂಕಗಳ ವ್ಯತ್ಯಾಸ ಉಂಟಾಗುತ್ತಿತ್ತು. ಇದರಿಂದಾಗಿ ಕಡಿಮೆ ತಂಡಗಳ ಗುಂಪುಗಳಿಗೆ ಅವರ ಸಮಾನ ಪಂದ್ಯಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಗುಂಪು 1 ಮತ್ತು ಗುಂಪು 4ರಲ್ಲಿ ತಲಾ ನಾಲ್ಕು ತಂಡಗಳು ಮಾತ್ರ ಇದ್ದವು. ಹೀಗಾಗಿ ಮೂರು ಪಂದ್ಯಗಳನ್ನು ಕನಿಷ್ಠ ಎಂದು ಗುರುತಿಸಲಾಗಿತ್ತು.

2022-23ರ 27ನೇ ಸೀನಿಯರ್ ಮಹಿಳಾ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನ ಅಂತಿಮ ಸುತ್ತಿನಲ್ಲಿ, ತಂಡಗಳನ್ನು ಆರು ಜನರ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಗುಂಪು ಪಂದ್ಯಗಳನ್ನು ಒಂದೇ ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿ-ಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ಇದನ್ನೂ ಓದಿ: RCB vs DC : ಚಾಲೆಂಜರ್ಸ್​ಗೆ ಮಣಿದ ಕ್ಯಾಪಿಟಲ್ಸ್​, ಗೆಲುವಿನ ಲಯಕ್ಕೆ ಮರಳಿದ ಆರ್​ಸಿಬಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.