ನವದೆಹಲಿ: ಮಹಿಳಾ ಸಿಡಬ್ಲ್ಯುಜಿ (ಕಾಮನ್ವೆಲ್ತ್ ಗೇಮ್ಸ್) ತಂಡದಿಂದ ಹೊರಗಿಟ್ಟಿದ್ದ ಕುರಿತು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಭಾರತದ ಯುವ ಟೇಬಲ್ ಟೆನಿಸ್ ಆಟಗಾರ್ತಿ ದಿಯಾ ಚಿತಾಲೆ ಅವರನ್ನು ಜುಲೈ - ಆಗಸ್ಟ್‌ನಲ್ಲಿ ನಡೆಯಲಿರುವ ಪಂದ್ಯಾವಳಿಗೆ ಆಟಗಾರರನ್ನಾಗಿ ಸೇರಿಸಿಕೊಳ್ಳಲಾಗಿದೆ.
ತಮ್ಮನ್ನು ಆಯ್ಕೆ ಮಾಡದಿರುವುದರ ಕುರಿತು ದೆಹಲಿ ಹೈಕೋರ್ಟ್‌ನಲ್ಲಿ ಟೇಬಲ್ ಟೆನಿಸ್ ಆಟಗಾರ ಮನುಷ್ ಶಾ ಕೂಡ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಶರತ್ ಕಮಲ್ ನೇತೃತ್ವದ ಪುರುಷರ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮನುಷ್ ಶಾ ಅವರನ್ನು ಮೀಸಲು ಆಟಗಾರ (ಸ್ಟ್ಯಾಂಡ್‌ಬೈ) ರನ್ನಾನಾಗಿಯೇ ಉಳಿಸಿಕೊಳ್ಳಲಾಗಿದೆ.
ಟೇಬಲ್ ಟೆನ್ನಿಸ್ ಫೆಡರೇಶನ್ ಆಫ್ ಇಂಡಿಯಾದ ಆಡಳಿತಾಧಿಕಾರಿಗಳ ಸಮಿತಿ ಕಳೆದ ವಾರ ದಿಯಾ ಚಿತಾಲೆ ತಂಡದಲ್ಲಿ ಮಣಿಕಾ ಬಾತ್ರಾ, ಕಾಮತ್, ಶ್ರೀಜಾ ಅಕುಲಾ ಮತ್ತು ರೀತ್ ರಿಶ್ಯಾ ಅವರನ್ನು ಒಳಗೊಂಡ ತಾತ್ಕಾಲಿಕ ಮಹಿಳಾ ತಂಡವನ್ನು ಪ್ರಕಟಿಸಿತ್ತು. ಇದೀಗ ಜುಲೈ - ಆಗಸ್ಟ್‌ನಲ್ಲಿ ನಡೆಯಲಿರುವ ಪಂದ್ಯಾವಳಿಗೆ ದಿಯಾ ಚಿತಾಲೆ ಅವರನ್ನು ಆಟಗಾರರನ್ನಾಗಿ ಸೇರಿಸಿಕೊಳ್ಳಲಾಗಿದೆ.
ತಂಡಗಳು:
- ಪುರುಷರು: ಶರತ್ ಕಮಲ್, ಜಿ ಸತ್ಯನ್, ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿ, ಮನುಷ್ ಶಾ (ಸ್ಟ್ಯಾಂಡ್‌ಬೈ ಆಟಗಾರ).
- ಮಹಿಳೆಯರು: ಮನಿಕಾ ಬಾತ್ರಾ, ದಿಯಾ ಚಿತಾಲೆ, ರೀತ್ ರಿಶ್ಯಾ, ಶ್ರೀಜಾ ಅಕುಲಾ, ಸ್ವಸ್ತಿಕಾ ಘೋಷ್ (ಸ್ಟ್ಯಾಂಡ್‌ಬೈ ಆಟಗಾರ).
ಇದನ್ನೂ ಓದಿ: IND vs SA T20: ಐಪಿಎಲ್ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಚಹಲ್ ಹೊಸ ದಾಖಲೆಗೆ ಸಜ್ಜು