ETV Bharat / sports

ಕೋವಿಡ್ ವಿರಾಮದ ನಂತರ ಮೊದಲ ಬಾರಿಗೆ ಟೋಕಿಯೊದಲ್ಲಿ ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ ಸ್ಪರ್ಧೆ

ಅಂತಾರಾಷ್ಟ್ರೀಯ ಸ್ಪರ್ಧೆಗೆ ಮರಳುವ ಭಾಗವಾಗಿ ನವೆಂಬರ್​ 8 ರಂದು ಟೋಕಿಯೊದಲ್ಲಿ ವಿಶ್ವದ ಕೆಲವು ಅತ್ಯುತ್ತಮ ಕ್ರೀಡಾಪಟುಗಳನ್ನು ಒಂದುಗೂಡಿಸಲು ಎಫ್​ಐಜಿ ವಿಶೇಷವಾದ ಕಲಾತ್ಮಕ ಜಿಮ್ನಾಸ್ಟಿಕ್​ ಕಾರ್ಯಕ್ರಮ ಆಯೋಜಿಸಲಿದೆ ಎಂದು ಎಪ್​ಐಜಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ ಸ್ಪರ್ಧೆ
ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ ಸ್ಪರ್ಧೆ
author img

By

Published : Oct 13, 2020, 8:46 PM IST

ಟೋಕಿಯೊ: ಟೋಕಿಯೋದಲ್ಲಿ ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್​ ಪಂದ್ಯಾವಳಿಯನ್ನು ಆಯೋಜಿಸುವುದಾಗಿ ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್​ ಫೆಡರೇಶನ್​ ಪ್ರಕಟಣೆ ಹೊರಡಿಸಿದೆ.

ಅಂತಾರಾಷ್ಟ್ರೀಯ ಸ್ಪರ್ಧೆಗೆ ಮರಳುವ ಭಾಗವಾಗಿ ನವೆಂಬರ್​ 8 ರಂದು ಟೋಕಿಯೋದಲ್ಲಿ ವಿಶ್ವದ ಕೆಲವು ಅತ್ಯುತ್ತಮ ಕ್ರೀಡಾಪಟುಗಳನ್ನು ಒಂದುಗೂಡಿಸಲು ಎಫ್​ಐಜಿ ವಿಶೇಷವಾದ ಕಲಾತ್ಮಕ ಜಿಮ್ನಾಸ್ಟಿಕ್​ ಕಾರ್ಯಕ್ರಮವನ್ನು ಆಯೋಜಿಸಲಿದೆ ಎಂದು ಎಪ್​ಐಜಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸ್ಪರ್ಧೆಯನ್ನು ಜಪಾನ್ ಜಿಮ್ನಾಸ್ಟಿಕ್ ಅಸೋಸಿಯೇಸನ್​ ಆತಿಥ್ಯವಹಿಸಲಿದೆ. ಟೀಮ್ ಫ್ರೆಂಡ್​ಶಿಪ್ ಮತ್ತು ಟೀಮ್ ಸಾಲಿಡಾರಿಟಿ ಎಂದು ಎರಡು ತಂಡಗಳಿರಲಿದ್ದು , ಜಪಾನ್, ಚೀನಾ ಮತ್ತು ಅಮೆರಿಕದ 32 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

‘ಇದೊಂದು ಭರವಸೆಯ ಸ್ಪರ್ಧೆಯಾಗಿದೆ. ಸ್ನೇಹ ಮತ್ತು ಐಕ್ಯತೆಯು ನಮ್ಮನ್ನು ಉತ್ತಮ ದಿನಗಳತ್ತ ಕೊಂಡೊಯ್ಯುತ್ತದೆ‘ ಎಂದು ಎಫ್​ಐಜಿ ಅಧ್ಯಕ್ಷ ಮೊರಿನಾರಿ ವಟನಾಬೆ ಹೇಳಿದ್ದಾರೆ.

ಒಂದು ದಿನದ ಈ ಸ್ಪರ್ಧೆ​ ಯೋಯೋಗಿ ನ್ಯಾಷನಲ್​ ಜಿಮ್ನಾಷಿಯಂನಲ್ಲಿ ನಡೆಯಲಿದ್ದು, ಸುಮಾರು 2000 ಅಭಿಮಾನಿಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.