ETV Bharat / sports

Tokyo Paralympics: ಕೊರಿಯಾ ಆಟಗಾರ್ತಿ ವಿರುದ್ಧ ಪ್ಯಾಡ್ಲರ್​ ಸೋನಲ್​ಬೆನ್​ಗೆ ಸೋಲು - ಗ್ರೇಟ್​ ಬ್ರಿಟನ್​ನ ಮೇಗನ್ ಶಾಕ್ಲೆಟನ್

4ನೇ ಶ್ರೇಯಾಂಕದ ಲೀ ಭಾರತದ ಸೋನಲ್​ಬೆನ್ ಅವರನ್ನು ​ 10-12, 11-5, 11-3, 11-9ರಲ್ಲಿ ಸೋಲಿಸಿದರು. ಈ ಪಂದ್ಯ ಕೇವಲ 30 ನಿಮಿಷಗಳಲ್ಲಿ ಅಂತ್ಯಗೊಂಡಿತು. ಮೊದಲ ಗೇಮ್​ ಅನ್ನು 12-10ರಿಂದ ಗೆದ್ದಿದ್ದ ಸೋನಲ್​ಬೆನ್​ ನಂತರದ 3 ಗೇಮ್​​ಗಳಲ್ಲಿ ಸೋಲು ಕಂಡರು.

Paddler Sonalben Patel
ಸೋನಲ್​ಬೆನ್​ಗೆ ಸೋಲು
author img

By

Published : Aug 26, 2021, 9:18 PM IST

ಟೋಕಿಯೋ: ಭಾರತದ ಪ್ಯಾರಾ ಟೇಬಲ್​ ಟೆನಿಸ್ ಆಟಗಾರ್ತಿ ಸೋನಲ್​ಬೆನ್​ ಪಟೇಲ್​ ಟೋಕಿಯೋ ಪ್ಯಾರಾಲಿಂಪಿಕ್ಸ್​ನ ಡಿ ಗುಂಪಿನ್​ ಮಹಿಳೆಯರ ಸಿಂಗಲ್ಸ್ ಕ್ಲಾಸ್​ 3​ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಅವರು ಗುರುವಾರ ದಕ್ಷಿಣ ಕೊರಿಯಾದ ಲೀ ಮಿ ಗ್ಯೂ ವಿರುದ್ಧ 3-1ರಲ್ಲಿ ಸೋಲು ಕಂಡಿದ್ದಾರೆ.

4ನೇ ಶ್ರೇಯಾಂಕದ ಲೀ ಭಾರತದ ಸೋನಲ್​ಬೆನ್ ಅವರನ್ನು ​ 10-12, 11-5, 11-3, 11-9ರಲ್ಲಿ ಸೋಲಿಸಿದರು. ಈ ಕೇವಲ 30 ನಿಮಿಷಗಳಲ್ಲಿ ಅಂತ್ಯಗೊಂಡಿತು. ಮೊದಲ ಗೇಮ್​ಅನ್ನು 12-10ರಿಂದ ಗೆದ್ದಿದ್ದ ಸೋನಲ್​ಬೆನ್​ ನಂತರದ 3 ಗೇಮ್​​ಗಳಲ್ಲಿ ಸೋಲು ಕಂಡರು.

ಸೋನಲ್​ಬೆನ್​ ಬುಧವಾರ ತಮ್ಮ ಮೊದಲ ಪಂದ್ಯದಲ್ಲಿ ಚೀನಾ ಕಿಯಾನ್ ಲಿ ಅವರನ್ನ ರೋಚಕ ಹಣಾಹಣಿಯಲ್ಲಿ 2-3(9-11, 11-3, 15-17, 11-7, 11-4)ರಲ್ಲಿ ಸೋಲು ಕಂಡಿದ್ದರು.

ಇದಕ್ಕೂ ಮುನ್ನ ಗುರುವಾರ ಭಾರತದ ಮತ್ತೊಬ್ಬ ಮಹಿಳಾ ಪ್ಯಾಡ್ಲರ್​ ಭಾವಿನಾ ಪಟೇಲ್​ ಗ್ರೇಟ್​ ಬ್ರಿಟನ್​ನ ಮೇಗನ್ ಶಾಕ್ಲೆಟನ್ ವಿರುದ್ಧ 3-1( 11-7, 9-11,17-15,13-11 ) ಗೇಮ್​ಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಇದನ್ನು ಓದಿ:Tokyo Paralympics: ಗ್ರೇಟ್ ಬ್ರಿಟನ್‌ನ ಮೇಗನ್ ಶಾಕ್ಲೆಟನ್ ಅನ್ನು ಸೋಲಿಸಿದ ಭಾವಿನಾ ಪಟೇಲ್

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.