ETV Bharat / sports

Tokyo Olympics: ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ರವಿಕುಮಾರ್ ದಹಿಯಾ - 2020ರ ಟೋಕಿಯೋ ಒಲಿಂಪಿಕ್ಸ್

2020ರ ಟೋಕಿಯೋ ಒಲಿಂಪಿಕ್ಸ್​ನಲ್ಲಿ ವೇಟ್​ ಲಿಫ್ಟರ್​ ಮೀರಾಬಾಯಿ ಚನು, ಬಾಕ್ಸರ್​ ಲವ್ಲಿನಾ ಬೋರ್ಗೊಹೈನ್ ಮತ್ತು ಶಟ್ಲರ್​ ಪಿವಿ ಸಿಂಧು ಮತ್ತು ಭಾರತ ಹಾಕಿ ತಂಡ ಈಗಾಗಲೇ ಭಾರತಕ್ಕೆ 4 ಪದಕ ತಂದುಕೊಟ್ಟಿದ್ದಾರೆ.

ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ರವಿಕುಮಾರ್ ದಹಿಯಾ

author img

By

Published : Aug 5, 2021, 4:41 PM IST

Updated : Aug 5, 2021, 9:28 PM IST

ಟೋಕಿಯೋ: ಭಾರತದ ರವಿಕುಮಾರ್ ದಹಿಯಾ 57 ಕೆಜಿ ವಿಭಾಗದ ಕುಸ್ತಿಯ ಫೈನಲ್​ ಪಂದ್ಯದಲ್ಲಿ ರಷ್ಯಾದ(ROC) ಜೌರ್ ಉಗುವ್ ವಿರುದ್ಧ ನಡೆದ ರೋಚಕ ಹೋರಾಟದಲ್ಲಿ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಈ ಮೂಲಕ ಭಾರತಕ್ಕೆ ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಭಾರತದ ಎರಡನೇ ಕುಸ್ತಿಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ 4-7 ರ ಅಂತರದಲ್ಲಿ ಜೌರ್ ಉಗುವ್​ ವಿರುದ್ಧ ಸೋಲು ಕಂಡರು. ರಷ್ಯಾದ ಕುಸ್ತಿಪಟು ಆರಂಭದಿಂದ ಅಂತ್ಯದವರೆಗೂ ಭಾರತೀಯನ ಮೇಲೆ ಪ್ರಾಬಲ್ಯ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ 2ನೇ ಭಾರತೀಯ:

ರವಿ ಕುಮಾರ್​ ಬೆಳ್ಳಿ ಗೆಲ್ಲುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಪದಕ ತಂದುಕೊಡುತ್ತಿರುವ ದೇಶದ ಐದನೇ ಭಾರತೀಯ ಕುಸ್ತಿಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. 1952ರಲ್ಲಿ ಕೆ.ಡಿ ಜಾಧವ್, ಸುಶೀಲ್ ಕುಮಾರ್(2008 ಮತ್ತು 2012), ಯೋಗೇಶ್ವರ್ ದತ್(2012) ಮತ್ತು ಸಾಕ್ಷಿ ಮಲಿಕ್(2016)ರಲ್ಲಿ ಭಾರತಕ್ಕೆ ಈ ಹಿಂದಿನ ಒಲಿಂಪಿಕ್ಸ್​ಗಳಲ್ಲಿ ಪದಕ ತಂದುಕೊಟ್ಟಿದ್ದರು. ಸುಶೀಲ್ ಕುಮಾರ್ ನಂತರ ಫೈನಲ್​ ತಲುಪಿದ 2ನೇ ಕುಸ್ತಿಪಟು ಜತೆಗೆ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ 2ನೇ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು.

ಬುಧವಾರ ನಡೆದಿದ್ದ ಪುರುಷರ 57 ಕೆ.ಜಿ.ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ರವಿಕುಮಾರ್ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಗೆಲುವು ದಾಖಲಿಸಿದ್ದರು. ಒಂದು ಹಂತದಲ್ಲಿ 7-9ರಲ್ಲಿ ಹಿನ್ನಡೆ ಅನುಭವಿಸಿದ್ದ ರವಿ ದಹಿಯಾ ಎದುರಾಳಿಯನ್ನು ಕೆಳಗೆ(ಫಾಲ್​) ಬೀಳಿಸುವ ಮೂಲಕ ಜಯ ತಮ್ಮದಾಗಿಸಿಕೊಂಡಿದ್ದರು.

ಕ್ವಾರ್ಟರ್​ ಫೈನಲ್​ನಲ್ಲಿ ದಹಿಯಾ ಬಲ್ಗೇರಿಯಾದ ಜಾರ್ಜಿ ವ್ಯಾಂಗಲೋವ್ ಅವರನ್ನು ಮಣಿಸಿದ್ದರು. ಇದಕ್ಕೂ ಮೊದಲು ಕೊಲಂಬಿಯಾದ ಟೈಗ್ರೇರೋಸ್​ ಉರ್ಬಾನೋ ಅವರನ್ನು ಸೋಲಿಸಿ ಕ್ವಾರ್ಟರ್​ ಫೈನಲ್​ಗೆ ಅರ್ಹತೆ ಪಡೆದಿದ್ದರು.

ಈ ಒಲಿಂಪಿಕ್ಸ್​ನಲ್ಲಿ ವೇಟ್​ ಲಿಫ್ಟರ್​ ಮೀರಾಬಾಯಿ ಚನು, ಬಾಕ್ಸರ್​ ಲವ್ಲಿನಾ ಬೋರ್ಗೊಹೈನ್ ಮತ್ತು ಬ್ಯಾಡ್ಮಿಂಟನ್​ ತಾರೆ​ ಪಿ.ವಿ. ಸಿಂಧು ಮತ್ತು ಭಾರತ ಹಾಕಿ ತಂಡ ಈಗಾಗಲೇ ಭಾರತಕ್ಕೆ 4 ಪದಕ ತಂದುಕೊಟ್ಟಿದ್ದಾರೆ.

ಇದನ್ನು ಓದಿ:Tokyo Olympics Hockey: ನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದು ಬೀಗಿದ ಭಾರತ!

Last Updated : Aug 5, 2021, 9:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.