ಟೋಕಿಯೋ: 2020ರ ಒಲಿಂಪಿಕ್ಸ್ ಕೂಟದ ಆತಿಥ್ಯವಹಿಸುತ್ತಿರುವ ಜಪಾನ್, ಕೊರೊನಾ ವೈರಸ್ ಭೀತಿಯಿಂದ ಟೂರ್ನಿಯನ್ನು ಈ ವರ್ಷಾಂತ್ಯಕ್ಕೆ ಮುಂದೂಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
"ಐಒಸಿ ಒಪ್ಪಂದದ ಪ್ರಕಾರ, 2020ರೊಳಗೆ ಕ್ರೀಡಾಕೂಟವನ್ನು ನಡೆಸಿಕೊಡಬೇಕಿದೆ. ಕೊರೊನಾ ವೈರಸ್ ಭೀತಿಯಿರುವುದರಿಂದ ಕ್ರೀಡಾಕೂಟವನ್ನು ಈ ವರ್ಷದ ಮುಕ್ತಾಯಕ್ಕೆ ಮುಂದೂಡುವ ಸಾಧ್ಯತೆ ಇದೆ ಎಂದು ಜಪಾನ್ ಒಲಿಂಪಿಕ್ಸ್ ಮಿನಿಸ್ಟರ್ ಸೆಯಿಕೊ ಹಶಿಮೊಟೊ ಶಾಸಕರ ಸಭೆಯಲ್ಲಿ ಉತ್ತರಿಸಿದ್ದಾರೆ.
ಒಲಿಂಪಿಕ್ಸ್ ಗೇಮ್ಸ್ ಒಪ್ಪಂದದ ಪ್ರಕಾರ, ಒಲಿಂಪಿಕ್ಸ್ ಆಯೋಜನೆಯನ್ನು ರದ್ದುಗೊಳಿಸುವ ಅಥವಾ ಮುಂದೂಡುವ ಅಧಿಕಾರವನ್ನು ಐಒಸಿ ಮಾತ್ರ ಹೊಂದಿದೆ. ಆದರೆ ಐಒಸಿಯ ಅಧ್ಯಕ್ಷ ಥಾಮಸ್ ಬೇಚ್ ನಾವು ಟೋಕಿಯೋದಲ್ಲಿ ಕ್ರೀಡಾಕೂಟವನ್ನು ನಡೆಸಲು ಬದ್ಧರಾಗಿದ್ದೇವೆ ಎಂದು ಕಳೆದ ವಾರ ತಿಳಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಹಶಿಮೊಟೊ, ಜಪಾನ್ ಸರ್ಕಾರ ಹಾಗೂ ಟೋಕಿಯೋ ಕ್ರೀಡಾಕೂಟವನ್ನು ಜುಲೈ 24 ರಂದೇ ಆಯೋಜಿಸಿಲು ಈಗಲೂ ಬದ್ಧವಾಗಿದೆ ಎಂದಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ 1.35 ಯೆನ್ (12.51 ಬಿಲಿಯನ್ ಡಾಲರ್) ಬಜೆಟ್ ನಿಗದಿ ಮಾಡಲಾಗಿದೆ. ಜಪಾನ್ ಸರ್ಕಾರ ಸರ್ಕಾರ ಒಲಿಂಪಿಕ್ಸ್ ಸ್ಟೇಡಿಯಂಗಾಗಿ 120 ಬಿಲಿಯನ್ ಯೆನ್ ಹಾಗೂ 30 ಪ್ಯಾರಾಲಿಂಪಿಕ್ಸ್ಗಾಗಿ 30 ಬಿಲಿಯನ್ ಯೆನ್ ನೀಡಲಿದೆ.