ಟೋಕಿಯೊ: ಜಪಾನಿನ ಒಲಿಂಪಿಕ್ ಸಮಿತಿಯಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ವಿಚಾರವಾಗಿ ಮಾತನಾಡುವ ವೇಳೆ " ಮಹಿಳೆಯರು ಸಭೆ ಸಮಾರಂಭಗಳಲ್ಲಿ ಹೆಚ್ಚು ಹೊತ್ತು ಮಾತನಾಡುತ್ತಾರೆ " ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಟೋಕಿಯೊ ಒಲಿಂಪಿಕ್ಸ್ ಮುಖ್ಯಸ್ಥ ಯೋಶಿರೊ ಮೊರಿ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಫೆಬ್ರವರಿ 3ರಂದು ನಡೆದಿದ್ದ ಜೆಒಸಿ ಸಭೆಯಲ್ಲಿ 83 ವರ್ಷದ ಜಪಾನ್‌ನ ಮಾಜಿ ಪ್ರಧಾನಿ ಆಗಿರುವ ಯೋಶಿರೊ ಮೊರಿ, ಸಮಿತಿಯಲ್ಲಿ ಮಹಿಳೆಯರೇನಾದರೂ ಪಾಲ್ಗೊಳ್ಳುವುದರಿಂದ ಅವರು ಹೆಚ್ಚು ಮಾತನಾಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಜಪಾನ್ ಮತ್ತು ವಿದೇಶದಲ್ಲಿ ಟೀಕೆಗಳು ಕೇಳಿ ಬಂದ ಮೇಲೆ ತಮ್ಮ ಹಿಂತೆಗೆದುಕೊಂಡು ಕ್ಷಮೆಯಾಚಿಸಿದ್ದರು.
25 ಮಂದಿಯ ಭಾಗವಹಿಸಿದ್ದ ಸಭೆಯಲ್ಲಿ ಕೇವಲ 5 ಮಂದಿ ಮಹಿಳೆಯರು ಮಾತ್ರ ಭಾಗವಹಿಸಿದ್ದರು. ಈ ವಿಚಾರವಾಗಿ ಮುಂದಿನ ಸಭೆಗಳಲ್ಲಿ ಹಚ್ಚಿನ ಮಹಿಳೆಯರಿಗೆ ಅವಕಾಶ ಕೊಟ್ಟರೆ ಲಿಂಗ ವೈವಿದ್ಯತೆಯನ್ನು ಹೆಚ್ಚಿಸಬಹುದು ಎಂದು ಹೇಳಿದಾಗ ಮೊರಿ ನೀಡಿದ ಹೇಳಿಕೆ ವಿವಾದಕ್ಕೀಡಾಗಿತ್ತು.
" ಇದೊಂದು ಅಸಡ್ಡೆ ಹೇಳಿಕೆ. ನನ್ನ ಹೇಳಿಕೆಗೆ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ಮಹಿಳೆಯರ ವಿರುದ್ಧ ತಾರತಮ್ಯ ಮಾಡುವ ಉದ್ದೇಶ ನನಗಿಲ್ಲ" ಎಂದು ಖಾಸಗಿ ಸುದ್ದಿ ಮಾಧ್ಯಮಕ್ಕೆ ಯೋಶಿರೊ ಮೊರಿ ತಿಳಿಸಿದ್ದರು. ಆದರೆ, ತಮಗೆ ಹುದ್ದೆಯಿಂದ ಕೆಳಗಿಳಿಯುವ ಯಾವುದೇ ಉದ್ದೇಶವಿಲ್ಲ ಎಂದು ತಿಳಿಸಿದ್ದರು.
ಆದರೆ ಖ್ಯಾತ ಟೆನ್ನಿಸ್ ಆಟಗಾರ್ತಿ ಒಸಾಕ ಸೇರಿದಂತೆ ಒಲಿಂಪಿಕ್ಸ್ ಪದಕ ವಿಜೇತರು, ಜಪಾನ್‌ನ ಕ್ರೀಡಾ ಅಧಿಕಾರಿಗಳು ಮತ್ತು ಟೋಕಿಯೊ ಒಲಿಂಪಿಕ್ಸ್ ಕಾರ್ಯಕರ್ತರು ಮೊರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಅವರು ರಾಜೀನಾಮೆ ನೀಡಬೇಕೆಂದು ನಡೆಸಿದ ಆನ್‌ಲೈನ್ ಅಭಿಯಾನದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಸಹಿ ಮಾಡಿದ್ದರು.
ಇದನ್ನು ಓದಿ:ಹಿಮಾ ದಾಸ್ಗೆ ಡಿಎಸ್ಪಿ ಹುದ್ದೆ: ಅಸ್ಸೋಂ ಸರ್ಕಾರದ ಮಹತ್ವದ ನಿರ್ಧಾರ