ಹೈದರಾಬಾದ್, ತೆಲಂಗಾಣ: 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಡೆದ ಫೆನ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಕಣಕ್ಕಿಳಿದ ಭವಾನಿದೇವಿಯ ಕತ್ತಿವರಸೆ ನೋಡಿದ ಜನರು ಅಚ್ಚರಿಗೊಂಡಿದ್ದರು. ಯಾವಾಗಲೂ ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ಜನರು ಟಂಗ್.. ಟಂಗ್.. ಎಂದು ಕತ್ತಿಗಳನ್ನು ತಿರುಗಿಸುತ್ತಲೇ ಇರುವುದನ್ನು ನಾವು ಕಂಡಿದ್ದೇವೆ. ಆದರೆ ಮೊದಲ ಬಾರಿಗೆ ನಮ್ಮ ಜನ ಭಾರತೀಯ ಹುಡುಗಿಯ ಕತ್ತಿವರಸೆ ನೋಡಿ ಬೇರಗಾಗಿದ್ದರು.
ಒಲಿಂಪಿಕ್ಸ್‌ನ ಫೆನ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಕುಡಿ ಆಡುವುದು ನೋಡಿ ನಮ್ಮ ಜನಕ್ಕೆ ಪಂದ್ಯ ಗೆದ್ದಂತೆ ಭಾಸವಾಗಿತ್ತು. ಈ ಆಟದಲ್ಲಿ ಭವಿಷ್ಯವೇನಿದೆ.. ಅದರಲ್ಲಿ ಒಂದು ಹುಡುಗಿ ಎಷ್ಟು ದಿನ ಇರಬಲ್ಲಳು ಎಂಬ ನಿರೀಕ್ಷೆಯನ್ನು ತಲಕೆಳಗೆ ಮಾಡಿಕೊಂಡು ದಿನದಿಂದ ದಿನಕ್ಕೆ ಕತ್ತಿಯನ್ನು ಹರಿತಗೊಳಿಸುತಲ್ಲೇ ಮುಂದೇ ಸಾಗುತ್ತಾ ಬಂದಳು ಭವಾನಿ. ಕಳೆದ ವರ್ಷ ಕಾಮನ್‌ವೆಲ್ತ್ ಫೆನ್ಸಿಂಗ್‌ನಲ್ಲಿ ಚಿನ್ನ ಗೆದ್ದಿದ್ದ ಈ ಹುಡುಗಿ ಕಠಿಣ ಪೈಪೋಟಿ ಇರುವ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದು ಎಲ್ಲರ ಬಾಯಲ್ಲಿ ಬಲೇ ಹುಡುಗಿ ಎಂದು ಅನಿಸಿಕೊಂಡಿದ್ದಾರೆ.
ಮಧ್ಯಮ ವರ್ಗದ ಹುಡುಗಿಯೊಬ್ಬಳು ಇಂತಹ ಕ್ರೀಡೆಯಲ್ಲಿ ಬೆಳೆಯುವುದೇ ದೊಡ್ಡ ಸೌಭಾಗ್ಯ. ಭವಾನಿ ಆರನೇ ತರಗತಿಯಲ್ಲಿದ್ದಾಗ ಯಾರೂ ಇಷ್ಟಪಡದ ಕ್ರೀಡೆಯನ್ನು ಆಕೆ ಆರಿಸಿಕೊಂಡರು. ಚದಲವಾಡ ಭವಾನಿ ಚೆನ್ನೈನಲ್ಲಿ ಜನಿಸಿದರೂ ತೆಲುಗು ಕುಟುಂಬದಿಂದ ಬಂದವರಾಗಿದ್ದಾರೆ. ಆಕೆಯ ತಂದೆ ಆನಂದ ಸುಂದರರಾಮನ್ ಅವರು ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪೂರ್ವ ಗೋದಾವರಿ ಜಿಲ್ಲೆಯ ಸಾಮರ್ಲಕೋಟಾದವರು. ಐದು ಮಕ್ಕಳಿರುವ ಕುಟುಂಬದಲ್ಲಿ ಭವಾನಿ ದೇವಿ ಕಿರಿಯವರು.
2004 ರಲ್ಲಿ ಫೆನ್ಸಿಂಗ್‌ಗೆ ಪ್ರವೇಶಿಸುತ್ತೇನೆ ಎಂದು ಭವಾನಿ ನಿರೀಕ್ಷಿಸಿರಲಿಲ್ಲ. ಏಕೆಂದರೆ ಧನುಷ್ಕೋಡಿ ಶಾಲೆಯಲ್ಲಿ ಲಭ್ಯವಿರುವ ಕ್ರೀಡೆಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗಿತ್ತು. ಭವಾನಿಯ ಸರದಿ ಬಂದಾಗ ಫೆನ್ಸಿಂಗ್ ಕ್ರೀಡೆಯೊಂದೆ ಬಾಕಿ ಉಳಿದಿತ್ತು. ಆದ್ರೂ ಸಹ ಭವಾನಿ ಇಷ್ಟವಿಲ್ಲದೆ ಕತ್ತಿ ಕೈಗೆ ತೆಗೆದುಕೊಂಡರು. ವಿಭಿನ್ನ ಕ್ರೀಡೆಗೆ ಅವಳ ಪ್ರವೇಶವೇ ಅವಳಿಗೆ ಶೀಘ್ರವಾಗಿ ಮನ್ನಣೆ ತಂದುಕೊಟ್ಟಿತು.
ಪ್ರಾರಂಭದಲ್ಲಿ ಭವಾನಿ ಬಿದಿರಿನ ಕಡ್ಡಿಗಳನ್ನು ಖಡ್ಗಗಳೆಂದು ಭಾವಿಸಿ ಅಭ್ಯಾಸ ಮಾಡುತ್ತಿದ್ದರು. ಫೆನ್ಸಿಂಗ್ ದುಬಾರಿ ಕ್ರೀಡೆಯಾಗಿರುವುದರಿಂದ ಭವಾನಿಗೆ ಹಲವು ಟೂರ್ನಿಗಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಕೇರಳ ಸಾಯಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಅವಕಾಶ ಪಡೆದ ನಂತರ ಅವರು ಕೆಲವು ತೊಂದರೆಗಳನ್ನು ಎದುರಿಸಿದರು.
2017 ರಲ್ಲಿ ರಾಹುಲ್ ದ್ರಾವಿಡ್ ಅವರ ಮೆಂಟರ್ಶಿಪ್ ಕಾರ್ಯಕ್ರಮವು ಭವಾನಿ ದೇವಿಗೆ ಆರ್ಥಿಕವಾಗಿ ಬೆಂಬಲ ನೀಡಿತು. ಅವರು 14 ನೇ ವಯಸ್ಸಿನಲ್ಲಿ ಟರ್ಕಿಯಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಆಡಿದರು. ಅವರು ಜೂನಿಯರ್ ವಿಭಾಗದಲ್ಲಿ 2009 ರ ಕಾಮನ್ವೆಲ್ತ್ ಚಾಂಪಿಯನ್‌ಶಿಪ್ ಮತ್ತು 2010 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಗಳೊಂದಿಗೆ ಮಿಂಚಿದರು. 2012ರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನ ಗೆದ್ದಿದ್ದರು. ಆಗ ಭವಾನಿ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ಪಡೆದುಕೊಂಡಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುರೋಪಿಯನ್ ಫೆನ್ಸರ್‌ಗಳ ವಿರುದ್ಧ ಗೆಲ್ಲುವ ಸಾಮರ್ಥ್ಯ ಇದೆ ಎಂದು ಸಾಬೀತುಪಡಿಸುವ ಸಮಯ ಬಂದಿದೆ. ಆ ಬಳಿಕ ಸೀನಿಯರ್ ಕಾಮನ್‌ವೆಲ್ತ್ ಟೂರ್ನಿಯಲ್ಲೂ ಚಿನ್ನ ಗೆದ್ದಿದ್ದರು. ಅವರು ಒಲಿಂಪಿಕ್ಸ್‌ನಲ್ಲಿ ಆಡಿದ ಮೊದಲ ಭಾರತೀಯ ಫೆನ್ಸರ್ ಎಂಬ ದಾಖಲೆಯನ್ನು ನಿರ್ಮಿಸಿದರು. ಇಟಲಿಯಲ್ಲಿ ತರಬೇತಿ ಪಡೆದು ಇನ್ನಷ್ಟು ಗಟ್ಟಿಮುಟ್ಟಾಗಿದ್ದ ಭವಾನಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಅವರ ದೊಡ್ಡ ಕನಸಾಗಿದೆ.
ಇದೇ ಆಟ ಮುಂದುವರಿದರೆ ಅವರ ಕನಸನ್ನು ಸಾಧಿಸುವುದು ಆಕೆಗೆ ಕಷ್ಟವಾಗಲಾರದು. ಅಂತರರಾಷ್ಟ್ರೀಯ ಫೆನ್ಸರ್ ಆಗಿದ್ದರೂ, ಅವರು ತನ್ನ ವ್ಯಾಸಂಗವನ್ನು ಮುಂದುವರಿಸುತ್ತಲೇ ಬಂದರು. ಭವಾನಿ ಅವರು ಚೆನ್ನೈನಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮುಗಿಸಿ ಪದವಿ ಪಡೆದಿದ್ದಾರೆ.
ಓದಿ: Fencing: ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭವಾನಿ ದೇವಿಗೆ ಐತಿಹಾಸಿಕ ಕಂಚು