ETV Bharat / sports

ಟೀ ಶಾಪ್​, ಶೂಗಳಿಲ್ಲದ ಕಾಲವದು.. ಹೀಗಿತ್ತು ಫುಟ್ಬಾಲ್​ ದಂತಕತೆಯ ಜೀವನ - ಪೀಲೆ ಮೊದಲ ನಿಕ್​ ನೇಮ್​ ಡಿಕೊ

ಪುಟ್ಬಾಲ್​ ದಂತಕಥೆ ಪೀಲೆ ಸಾಧನೆ ಹಾದಿ- ಸಂಟೋಸ್​ ತಲುಪಿದ ದಿಗ್ಗಜನ ಹಾದಿ - ಹೀಗಿತ್ತು ಅವರ ಪ್ರಯಾಣ

ಟೀ ಶಾಪ್​, ಶೂಗಳಿಲ್ಲದ ಕಾಲು ಹೀಗಿತ್ತು ಫುಟ್ಬಾಲ್​ ದಂತಕತೆಯ ಜೀವನ
tea-shop-feet-without-shoes-this-was-the-life-of-a-football-legend
author img

By

Published : Dec 30, 2022, 2:12 PM IST

ನವದೆಹಲಿ: ಪುಟ್ಬಾಲ್​ ದಂತಕಥೆ ಪೀಲೆ ಕ್ಯಾನ್ಸರ್​ನಿಂದ ಇಹಲೋಕ ತ್ಯಜಿಸಿದ್ದಾರೆ. 82 ವರ್ಷದ ಅವರ ಸಾವಿಗೆ ಇಡೀಗ ಜಗತ್ತು ಕಂಬನಿ ಮಿಡಿದಿದೆ. ಪುಟ್ಬಾಲ್​ ದಂತಕಥೆಯಾದ ಪೀಲೆ ಜೀವನ ಸುಲಭದ ಹಾದಿಯಾಗಿರಲಿಲ್ಲ. ಅವರ ಸಾಧನೆ ಹಾದಿಯ ಕುರಿತು ಒಂದು ಇಣುಕು ನೋಟ ಇಲ್ಲಿದೆ

  • ಪೀಲೆಗೆ ಅಮೆರಿಕನ್ ಸಂಶೋಧಕ ಥಾಮಸ್ ಎಡಿಸನ್ ಅವರ ಹೆಸರನ್ನು ಇಡಲಾಯಿತು, ಅವರ ನಿಜವಾದ ಹೆಸರು ಎಡ್ಸನ್ ಅರಾಂಟೆಸ್ ಡೊ ನಾಸಿಮಿಯೆಂಟೊ. ಪೀಲೆ ತುಂಬಾ ಬಡ ಕುಟುಂಬದಲ್ಲಿ ಜನಿಸಿದ್ದು, ಬಾಲ್ಯದಲ್ಲಿ ಟೀ ಅಂಗಡಿಯಲ್ಲಿ ಕೆಲಸ ಮಾಡಬೇಕಾಗಿತ್ತು.
  • ಪೀಲೆ ಮೊದಲ ನಿಕ್​ ನೇಮ್​ ಡಿಕೊ ಆದರೆ ಆತನ ಸ್ನೇಹಿತರು ಪೀಲೆ ಎಂದು ಕರೆಯಲು ಶುರು ಮಾಡಿದರು.
  • ತಮ್ಮ ನೆರೆಹೊರೆಯ ಸ್ನೇಹಿತರ ಜೊತೆ ಸೇರಿ ಪೀಲೆ ಮೊದಲ ಫುಟ್ಬಾಲ್​ ತಂಡವನ್ನು ಕಟ್ಟಿದರು. ಅದಕ್ಕೆ ಅವರು 'ದಿ ಒನ್ಸ್​ ವಿತೌಟ್​ ಶೂ' ಎಂದು ಹೆಸರಿಟ್ಟರು.
  • ಪೀಲೆ ತಮ್ಮ ತಂದೆಯಿಂದ ಫುಟ್ಬಾಲ್​ ಅನ್ನು ಕಲಿತರು. ಇದಾದ ಬಳಿಕ ಬಾಲಕನಾಗಿದ್ದ ಅವರು ನಿಧಾನವಾಗಿ ಅನೇಕ ತಂಡದಲ್ಲಿ ಆಟವಾಡಲಾರಂಭಿಸಿದರು. ಫುಟ್ಬಾಲ್​ ಕೊಳ್ಳಲು ಹಣ ಇಲ್ಲದ ಕಾಣರ ಅವರು ನ್ಯೂಸ್​ ಪೇಪರ್​ನ್ನು ಸಾಕ್ಸ್​ನಲ್ಲಿ ತುಂಬಿ ಬಾಲ್​ ತಯಾರಿಸಿ ಆಡುತ್ತಿದ್ದರು. ಇದು ಅವರ ಆಟದ ಮೇಲಿನ ಪ್ರೀತಿಯಾಗಿತ್ತು ಎಂದು ಅವರೇ ಒಮ್ಮೆ ಹೇಳಿದ್ದರು.
  • ಫುಟ್ಬಾಲ್​ ಖ್ಯಾತ ಆಟಗಾರ ವಲ್ಡೆಮರ್​ ಡೆ ಬ್ರಿಟೊ, ಪೀಲೆ ಅವರನ್ನು ಗುರುತಿಸಿ ಆತನನ್ನು ಸಂಟೊಸ್​ಗೆ ಕರೆತಂದರು. ಈತ ಜಗತ್ತಿನ ದೊಡ್ಡ ಫುಟ್ಬಾಲ್​ ಆಟಗಾರನಾಗುತ್ತಾನೆ ಎಂಬ ಅಂದಾಜಿಸಿದ್ದ ಕೀರ್ತಿ ಕೂಡ ಬ್ರಿಟೊಗೆ ಸಲ್ಲುತ್ತದೆ. ಬ್ರಿಟೊ ಕೂಡ ಬ್ರೆಜಿಲ್​ನ ಆಟಗಾರರಾಗಿದ್ದರು.
  • ಪೀಲೆಯ ಸಾಮರ್ಥ್ಯ ಕಂಡು 1956ರಲ್ಲಿ ಅವರನ್ನು ಸಂಟೊಸ್​ಗೆ ಕರೆ ತಂದರು. ಅಲ್ಲಿಂದ ಪೀಲೆ ಫುಟ್ಬಾಲ್​ ವೃತ್ತಿ ಆರಂಭವಾಯಿತು. 1957ರಲ್ಲಿ ಅವರು ತಂಡವನ್ನು ಸೇರಿದರು.
  • ಪೀಲೆ ಅವರ ಸಂದರ್ಶನವೊಂದರಲ್ಲಿ ಅವರು, ಬಾಲ್ಯದಲ್ಲಿ ಆಡಿದ ಒಳಾಂಗಣ ಪಂದ್ಯಾವಳಿಗಳು ತಮ್ಮ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡಿತು ಎಂದು ಹೇಳಿಕೊಂಡಿದ್ದರು. ಸಣ್ಣ ಮೈದಾನಗಳು ಮತ್ತು ಹೆಚ್ಚು ಆಟಗಾರರು ಇದ್ದುದರಿಂದ ಒಳಾಂಗಣ ಪಂದ್ಯಾವಳಿಗಳು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಪಾಠ ಕಲಿಸಿದವು
  • 1957ರಲ್ಲಿ ಟಾಪ್​ ಸ್ಕೋರ್​​ ಲೀಗ್​ನಲ್ಲಿ ಅವರು ಭಾಗಿಯಾಗಿದ್ದರು. 1957ರಲ್ಲಿ ಅರ್ಜೆಂಟಿನಾ ವಿರುದ್ಧ ಬ್ರೆಜಿಲ್​ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ಕೂಡಾ ನೀಡಿದ್ದರು.
  • 1962 ರ ವಿಶ್ವಕಪ್‌ನಲ್ಲಿ ಗಾಯಗೊಂಡ ಕಾರಣ ಅವರು ಹೆಚ್ಚಿನ ಪಂದ್ಯಗಳಿಂದ ಹೊರಗುಳಿಯಬೇಕಾಯಿತು. 1966 ರ ವಿಶ್ವಕಪ್‌ನಲ್ಲಿ ಬ್ರೆಜಿಲ್ ದೊಡ್ಡ ಸೋಲು ಕಂಡಿತು
  • ಪೀಲೆ ಬಾಲ್ಯದಲ್ಲಿ ಬೌರು ಅಥ್ಲೆಟಿಕ್ ಕ್ಲಬ್ ಜೂನಿಯರ್ಸ್‌ಗೆ ಸೇರಿಕೊಂಡು 1954 ರಿಂದ 1956 ರವರೆಗೆ ಸತತ ಮೂರು ಪ್ರಶಸ್ತಿಗಳಿಗೆ ತಮ್ಮ ತಂಡಕ್ಕೆ ತಂದು ಕೊಡುವಲ್ಲಿ ಸಫಲರಾಗಿದ್ದರು. 3 ವಿಶ್ವಕಪ್‌ಗಳು, 2 ವಿಶ್ವ ಕ್ಲಬ್ ಚಾಂಪಿಯನ್‌ಶಿಪ್‌ಗಳು ಮತ್ತು 9 ಸಾವೊ ಪಾಲೊ ರಾಜ್ಯ ಚಾಂಪಿಯನ್‌ಶಿಪ್‌ಗಳನ್ನು ಅವರು ಗೆದ್ದು ತೋರಿಸಿದ್ದಾರೆ.
  • ಪೀಲೆ 6 ಅಕ್ಟೋಬರ್ 1976 ರಂದು ಕ್ಲಬ್ ಸೈಡ್ ಫ್ಲೆಮೆಂಗೊ ವಿರುದ್ಧ ಬ್ರೆಜಿಲ್‌ಗಾಗಿ ಕೊನೆಯ ಪಂದ್ಯವನ್ನು ಆಡಿ ಅಂತಾರಾಷ್ಟ್ರೀಯ ನಿವೃತ್ತಿ ಪಡೆದರು.
  • 1977 ಅಕ್ಟೋಬರ್​ 1ರಂದು ತಮ್ಮ ಕಡೆಯ ಫುಟ್ಬಾಲ್​ ಮ್ಯಾಚ್​ ಸಂಟೋಸ್​​ಗೆ ಅನ್ನು ಅವರು ಆಡಿದರು. ಪಂದ್ಯದ ಮೊದಲ ಭಾಗವನ್ನು ಅವರು ಅಮೆರಿಕನ್​ ಕ್ಲಬ್​ಗೆ ಆಡಿದರೆ, ಎರಡನೇ ಭಾಗವನ್ನು ಸಂಟೋಸ್​ಗೆ ಆಡಿದ್ದರು.

ಇದನ್ನೂ ಓದಿ: ಫುಟ್ಬಾಲ್ ದಂತಕಥೆ ಪೀಲೆ ಇನ್ನಿಲ್ಲ.. ವಿಶ್ವಾದ್ಯಂತ ಅಭಿಮಾನಿಗಳ ಕಂಬನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.