ETV Bharat / sports

ಗುವಾಹಟಿ ಮಾಸ್ಟರ್ಸ್: ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದ ಅಶ್ವಿನಿ-ತನಿಶಾ ಜೋಡಿ - ETV Bharath Kannada news

Guwahati Masters Super 100: ಗುವಾಹಟಿ ಮಾಸ್ಟರ್ಸ್ 2023 ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಗೆದ್ದಿದ್ದಾರೆ.

Tanisha Crasto and Ashwini Ponnappa
Tanisha Crasto and Ashwini Ponnappa
author img

By ETV Bharat Karnataka Team

Published : Dec 10, 2023, 9:51 PM IST

ಗುವಾಹಟಿ (ಅಸ್ಸೋಂ): ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಭಾನುವಾರ ಗುವಾಹಟಿ ಮಾಸ್ಟರ್ಸ್ 2023 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) ಸೂಪರ್ 100 ಪಂದ್ಯಾವಳಿಯಲ್ಲಿ ಎರಡನೇ ಶ್ರೇಯಾಂಕದ ಪೊನ್ನಪ್ಪ ಮತ್ತು ಕ್ರಾಸ್ಟೊ, ತೈವಾನ್‌ನ ಸಂಗ್ ಶುಯೋ ಯುನ್ ಮತ್ತು ಯು ಚಿಯೆನ್ ಹುಯಿ ಅವರನ್ನು 21-13, 21-19 ರಿಂದ ಸೋಲಿಸಿ ತಮ್ಮ ಎರಡನೇ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಈ ವರ್ಷದ ಆರಂಭದಲ್ಲಿ ಇದೇ ಜೋಡಿ ಅಬುಧಾಬಿ ಮಾಸ್ಟರ್ಸ್ ಸೂಪರ್ 100 ಪಂದ್ಯಾವಳಿಯನ್ನು ಗೆದ್ದಿತ್ತು. ಲಕ್ನೋದಲ್ಲಿ ಕಳೆದ ವಾರ ನಡೆದ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300 ಸ್ಪರ್ಧೆಯ ಫೈನಲ್​ ಪಂದ್ಯದಲ್ಲಿ ಜಪಾನ್‌ನ ರಿನ್ ಇವಾನಾಗಾ ಮತ್ತು ಕೀ ನಕಾನಿಶಿ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಅವರನ್ನು ಸೋಲಿಸಿತು.

ಗುವಾಹಟಿಯಲ್ಲಿ ನಡೆದ ಫೈನಲ್‌ನ ಮೊದಲ ಬ್ಯಾಡ್ಮಿಂಟನ್ ಆಟವು ಭಾರತೀಯ ಆಟಗಾರರು ಎದುರಾಳಿಯಿಂದ ಬಲಿಷ್ಠ ಪೈಪೋಟಿಯನ್ನು ಎದುರಿಸಲಿಲ್ಲ. ಎರಡೂ ಸೆಟ್​ಗಳನ್ನು ಸುಲಭವಾಗಿ ಗೆದ್ದುಕೊಂಡರು. ಒಂದನೇ ಸೆಟ್​ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಆರಂಭದಿಂದಲೇ ತೈವಾನ್​ ಜೋಡಿಯ ಮೇಲೆ ನಿಯಂತ್ರಣ ಪಡೆದುಕೊಂಡಿತು. ಎಲ್ಲದೇ ಸ್ಕೋರ್​ನ ಅಂತರವನ್ನು ಕಡಿಮೆ ಆಗದಂತೆ ನೋಡಿಕೊಂಡಿತು. ಇದರಿಂದ 21-13 ರ ಅಂತರದಲ್ಲಿ ಮೊದಲ ಸೆಟ್​ ಭಾರತಕ್ಕೆ ಸೇರಿತು.

ಎರಡನೇ ಗೇಮ್‌ನಲ್ಲಿ, ಭಾರತದ ಷಟ್ಲರ್‌ಗಳು ಮೊದಲ ಸೆಟ್​ನ ಫಾರ್ಮ್​​ನ್ನೇ ಮುಂದುವರೆಸಿದರು. ಪ್ರಥಮ ಸೆಟ್​ನಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳದ ತೈವಾನ್​ ಜೋಡಿ ಸುಧಾರಿತ ಆಟವನ್ನು ಪ್ರದರ್ಶಿಸಲಿಲ್ಲ. ಸೆಟ್​ನ ಅರ್ಧದ ವೇಳೆಗೆ ಐದು ಪಾಯಿಂಟ್‌ಗಳಿಂದ ಮುನ್ನಡೆ ಭಾರತ ಸಾಧಿಸಿತು. ಈ ಬ್ರೇಕ್​ ನಂತರ ಪುಟಿದೇಳುವ ಸೂಚನೆಯನ್ನು ನೀಡಿತು. 12-11ರ ಅಂತರಕ್ಕೆ ಪಂದ್ಯ ತಲುಪಿತು. ಆದರೆ ಭಾರತೀಯ ಜೋಡಿ ಲಯಕ್ಕೆ ಮರಳಿ ಎರಡನೇ ಸೆಟ್​​ನ್ನು 21-19 ರಿಂದ ವಶ ಪಡಿಸಿಕೊಂಡು ಪ್ರಶಸ್ತಿಗೆ ಮುತ್ತಿಕ್ಕಿತು.

ಕೇವಲ 40 ನಿಮಿಷಗಳ ಕಾಲ ಈ ಹಣಾಹಣಿ ನಡೆಯಿತು. ಈ ಪಂದ್ಯಾವಳಿಯ ಫಲಿತಾಂಶಗಳು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಟಗಾರನ ಅರ್ಹತಾ ಶ್ರೇಯಾಂಕಕ್ಕೆ ಸೇರಿಸಲಾಗುತ್ತದೆ.

ಗುವಾಹಟಿ ಮಾಸ್ಟರ್ಸ್ 2023 ಬ್ಯಾಡ್ಮಿಂಟನ್ ವಿಜೇತರ ಪಟ್ಟಿ:
ಪುರುಷರ ಸಿಂಗಲ್ಸ್: ಯೋಹಾನೆಸ್ ಸೌತ್ ಮಾರ್ಸೆಲಿನೊ (ಇಂಡೋನೇಷ್ಯಾ)
ಮಹಿಳೆಯರ ಸಿಂಗಲ್ಸ್: ಲಾಲಿನ್ರಾತ್ ಚೈವಾನ್ (ಥಾಯ್ಲೆಂಡ್)
ಮಹಿಳೆಯರ ಡಬಲ್ಸ್: ಅಶ್ವಿನಿ ಪೊನ್ನಪ್ಪ/ತನಿಶಾ ಕ್ರಾಸ್ಟೊ (ಭಾರತ)
ಮಿಶ್ರ ಡಬಲ್ಸ್: ಹೀ ಯೋಂಗ್ ಕೈ ಟೆರ್ರಿ/ಟಾನ್ ವೀ ಹಾನ್ ಜೆಸ್ಸಿಕಾ (ಸಿಂಗಪುರ)

ಇದನ್ನೂ ಓದಿ: ಅಂಡರ್​ 19 ಏಷ್ಯಾಕಪ್​: ಪಾಕ್​ ವಿರುದ್ಧ ಮುಗ್ಗರಿಸಿದ ಯುವ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.