ETV Bharat / sports

ಸೈಯದ್​​​ ಮೋದಿ ಇಂಟರ್​ನ್ಯಾಷನಲ್ ​: ಫೈನಲ್‌ಗೆ ಸಿಂಧು v/s ಮಾಳವಿಕ.. ಯಾರೇ ಗೆದ್ದರೂ ಭಾರತಕ್ಕೆ ಪ್ರಶಸ್ತಿ!

ಮಿಶ್ರ ಡಬಲ್ಸ್​ನಲ್ಲಿ ಹೇಮಾ ನಾಗೇಂದ್ರ ಬಾಬು ಮತ್ತು ಶ್ರೀವಿದ್ಯಾ ಗುರುಜಾಡ ಜೋಡಿ ಭಾರತದ ಮತ್ತೊಂದು ಜೋಡಿ ಅಕ್ಷಾನ್ ಶೆಟ್ಟಿ ಮತ್ತು ಸಿಮ್ರಾನ್​ ಸಿಂಗ್ ವಿರುದ್ಧ 15-21, 22-20, 21-9ರ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರು..

Sindhu defeats Kosetskaya, storms into final
ಸೈಯ್​ ಮೋದಿ ಇಂಟರ್​ನ್ಯಾಷನಲ್ ಪಿವಿ ಸಿಂಧು ಫೈನಲ್​
author img

By

Published : Jan 22, 2022, 7:10 PM IST

Updated : Jan 22, 2022, 8:21 PM IST

ಲಖನೌ : ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಪಡೆದಿದ್ದ ಎರಡು ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಸೈಯದ್ ಮೋದಿ ಇಂಟರ್​ನ್ಯಾಷನಲ್​ ಟೂರ್ನಮೆಂಟ್​​ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಶನಿವಾರನ ಬಾಬು ಬನರಾಸಿ ಇಂಡೋರ್​ ಸ್ಟ್ರೇಡಿಯಂನಲ್ಲಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ರಷ್ಯಾದ ಇವ್ಗೇನಿಯಾ ಕೊಸೆತ್ಸ್ಕಾಯಾ ವಿರುದ್ಧ 21-11ರಲ್ಲಿ ಮೊದಲ ಗೇಮ್​ ಗೆದ್ದುಕೊಂಡರು. ಈ ವೇಳೆ ಪಂದ್ಯದಲ್ಲಿ ಮುಂದುವರಿಯಲಾಗದೆ ರಷ್ಯನ್ ಆಟಗಾರ್ತಿ ನಿವೃತ್ತಿಗೊಂಡಿದ್ದರಿಂದ ಸಿಂಧು ಫೈನಲ್ ದಾರಿ ಸುಗಮವಾಯಿತು.

ಸೆಮಿಫೈನಲ್ಸ್​ನಲ್ಲಿ 6ನೇ ಶ್ರೇಯಾಂಕದ ಥಾಯ್​ ಶಟ್ಲರ್​ ಸುಪನಿಡಾ ಕಟೆತಾಂಗ್ ವಿರುದ್ಧ 11-21, 21-12 ಮತ್ತು 21-17ರಲ್ಲಿ ಗೆಲುವು ಸಾಧಿಸಿ ಇಂಡಿಯಾ ಓಪನ್ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದ್ದರು.

ಇದೀಗ ಮಾಜಿ ವಿಶ್ವಚಾಂಪಿಯನ್ ಸಿಂಧು ಫೈನಲ್​​ನಲ್ಲಿ ಭಾರತದವರೇ ಆದ 20 ವರ್ಷದ ಯುವ ಶಟ್ಲರ್​ ಮಾಳವಿಕ ಬನ್ಸೋಡ್​ ವಿರುದ್ಧ ಸೆಣಸಾಡಲಿದ್ದಾರೆ. ಬನ್ಸೋಡ್​ ಸೆಮಿಫೈನಲ್​ನಲ್ಲಿ ತಮ್ಮ ಸಹವರ್ತಿ 16 ವರ್ಷದ ಅನುಪಮ ಉಪಾಧ್ಯಾಯ ವಿರುದ್ಧ 3 ಸೆಟ್​ಗಳ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರು.

ಮಿಶ್ರ ಡಬಲ್ಸ್​ನಲ್ಲಿ ಹೇಮಾ ನಾಗೇಂದ್ರ ಬಾಬು ಮತ್ತು ಶ್ರೀವಿದ್ಯಾ ಗುರುಜಾಡ ಜೋಡಿ ಭಾರತದ ಮತ್ತೊಂದು ಜೋಡಿ ಅಕ್ಷಾನ್ ಶೆಟ್ಟಿ ಮತ್ತು ಸಿಮ್ರಾನ್​ ಸಿಂಗ್ ವಿರುದ್ಧ 15-21, 22-20, 21-9ರ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರು.

ಪುರುಷರ ಡಬಲ್ಸ್​ನಲ್ಲಿ ಕೃಷ್ಣ ಪ್ರಸಾದ್​​ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ 21-10-21-9ರಲ್ಲಿ ಪ್ರೇಮ್ ಸಿಂಗ್ ಚೌಹಾಣ್ ಮತ್ತು ರಾಜೇಶ್​ ವರ್ಮಾ ವಿರುದ್ಧ ಗೆದ್ದರು. ಮಹಿಳೆಯರ ಡಬಲ್ಸ್​ನಲ್ಲಿ ಮಲೇಷ್ಯಾದ ಅನ್ನಾ ಚಿಂಗ್ ಯಿಕ್​ಚೆಯಾಂಗ್ ಮತ್ತು ತೆಹೊ ಮೀ ಕ್ಸಿಂಗ್ 21-18, 21-7ರಲ್ಲಿ ಭಾರತದ ಹರಿತಾ ಮಂಜಿಯಿಲ್ ಮತ್ತು ಆಶ್ನಾ ರಾಯ್ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದರು.

ಮಹಿಳಾ ಡಬಲ್ಸ್​ ಮತ್ತು ಪುರುಷರ ಸಿಂಗಲ್ಸ್​ ಹೊರತು ಪಡಿಸಿ ಉಳಿದ ಮೂರು ವಿಭಾಗದಲ್ಲಿ ಭಾರತೀಯರು ಫೈನಲ್​ ಪ್ರವೇಶಿಸಿದಂತಾಗಿದೆ. ಪುರುಷರ ಫೈನಲ್ಸ್​ನಲ್ಲಿ ಫ್ರಾನ್ಸ್​ ಅರ್ನಾಡ್​ ಮತ್ತು ಲುಕಾಸ್ ಕ್ಲೇರ್​ಬೌಟ್​ ಸೆಣಸಾಡಲಿದ್ದಾರೆ.

ಇದನ್ನೂ ಓದಿ:ಸೈಯದ್​ ಮೋದಿ ಇಂಟರ್​ನ್ಯಾಷನಲ್ : ಫೈನಲ್​ಗೆ ಮಾಳವಿಕ, ನಾಕೌಟ್​ನಲ್ಲಿ ಮಿಥುನ್​ಗೆ ನಿರಾಶೆ

Last Updated : Jan 22, 2022, 8:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.